ವಿವಿಧ ಬೇಡಿಕೆಗಳಿಗೆ ಒತ್ತಾಯ: ಡಿ.17ಕ್ಕೆ ರಾಜ್ಯಾದ್ಯಂತ ಕಾಲೇಜುಗಳು ಬಂದ್

 ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ.17ಕ್ಕೆ ರಾಜ್ಯದ್ಯಂತ ಕಾಲೇಜುಗಳು ಬಂದ್ ಗೆ ಕರೆ ನೀಡಲಾಗಿದೆ. 

Written by - Manjunath Hosahalli | Edited by - Ranjitha R K | Last Updated : Dec 5, 2022, 05:38 PM IST
  • ಡಿ.17ಕ್ಕೆ ರಾಜ್ಯದ್ಯಂತ ಕಾಲೇಜುಗಳು ಬಂದ್
  • ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಂದ್ ಗೆ ಕರೆ
  • ವಿದ್ಯಾರ್ಥಿಗಳ ಬೇಡಿಕೆಗಳನ್ನು ಸರ್ಕಾರ‌ ಕೂಡಲೇ ಈಡೇರಿಸುವಂತೆ ಆಗ್ರಹ
ವಿವಿಧ  ಬೇಡಿಕೆಗಳಿಗೆ ಒತ್ತಾಯ: ಡಿ.17ಕ್ಕೆ ರಾಜ್ಯಾದ್ಯಂತ ಕಾಲೇಜುಗಳು ಬಂದ್ title=

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ.17ಕ್ಕೆ ರಾಜ್ಯದ್ಯಂತ ಕಾಲೇಜುಗಳು ಬಂದ್ ಗೆ ಕರೆ ನೀಡಲಾಗಿದೆ. ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ NSUI ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯದ ವಿದ್ಯಾರ್ಥಿಗಳ ಸಮಸ್ಯೆಯನ್ನು ಪರಿಹರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದ್ದಾರೆ. 

ಸಾಕಷ್ಟು ಕಾಲೇಜುಗಳಲ್ಲಿ ಮೂಲ ಸೌಕರ್ಯಗಳ ಕೊರತೆ, ಉಚಿತ ಬಸ್ ಸೌಕರ್ಯ, ವಿದ್ಯಾರ್ಥಿ ವೇತನ, ವಿದ್ಯಾರ್ಥಿ ನಿಲಯ, ಉಪನ್ಯಾಸಕರ ಕೊರತೆ ಕಾಣುತ್ತಿದೆ. ಮಾತ್ರವಲ್ಲ, ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶಗಳನ್ನು ಸಹ ನೀಡದೆ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು  ಕೀರ್ತಿ ಗಣೇಶ್  ಆರೋಪಿಸಿದ್ದಾರೆ.  ಆದರೂ ಕೂಡಾ ಸರ್ಕಾರ ವಿದ್ಯಾರ್ಥಿಗಳ ಕಷ್ಟಕ್ಕೆ  ಸ್ಪಂದಿಸುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ 17 ಡಿಸೆಂಬರ್ 2022 ರಂದು ರಾಜ್ಯದ್ಯಂತ ಎಲ್ಲಾ ಕಾಲೇಜುಗಳು ಬಂದ್ ಗೆ ಕರೆ ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಇದನ್ನೂ ಓದಿ : “ಬಡವರಿಗೆ ಆಹಾರ, ಆರೋಗ್ಯ, ಆಶ್ರಯ ಭದ್ರತೆ ನೀಡಿದ್ದು ಕಾಂಗ್ರೆಸ್ ಪಕ್ಷ”

ವಿದ್ಯಾರ್ಥಿಗಳ ಬೇಡಿಕೆಗಳನ್ನು ಸರ್ಕಾರ‌ ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.  ಇದೇ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಮಾರುತಿ ಪ್ರಧಾನ ಕಾರ್ಯದರ್ಶಿಗಳಾದ ರಫೀಕ್ ಅಲಿ ಮತ್ತು ರಾಕೇಶ್, ಕಾರ್ಯದರ್ಶಿ ಮನ್ಮಂತ್, ಬೆಂಗಳೂರು ವಿಶ್ವವಿದ್ಯಾನಿಲಯ ಅಧ್ಯಕ್ಷ ಲಕ್ಷಯ ರಾಜ್, ಬೆಂಗಳೂರು ಜಿಲ್ಲಾಧ್ಯಕ್ಷ ಮಧು ಬೆಂಗಳೂರು ಗ್ರಾಮಾಂತರ ಅಧ್ಯಕ್ಷ ಮುಕೇಶ್ ಇನ್ನಿತರ NSUI ಪದಾಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ : BJP Rowdy Morcha Website: ಚುನಾವಣೆ ಸಮೀಪಿಸುತ್ತಿದ್ದಂತೆ 'ಬಿಜೆಪಿ ರೌಡಿ ಮೋರ್ಚಾ' ವೆಬ್ ಸೈಟ್ ಓಪನ್...!?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News