ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಮೂಲಕ ದೇಶದಲ್ಲಿ ಕುಖ್ಯಾತಿಗೆ ಪಾತ್ರವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಪೇಸಿಎಂ ಬಿರುದನ್ನು ಪದೇ ಪದೆ ನಿರೂಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಕಿಡಿ ಕಾರಿದ್ದಾರೆ.


COMMERCIAL BREAK
SCROLL TO CONTINUE READING

ಈ ಸರ್ಕಾರ ಇದೆಲ್ಲದಕ್ಕೂ ಪೂರಕವಾಗಿ ಮಾರ್ಚ್ 29ರಂದು ಚುನಾವಣಾ ಆಯೋಗ ರಾಜ್ಯ ಚುನಾವಣೆಯ ವೇಳಪಟ್ಟಿ ಪ್ರಕಟಿಸಿದ ನಂತರ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ನೀರಾವರಿ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳು ಅನೇಕ ಅಕ್ರಮಗಳನ್ನು ಎಸಗಲಾಗಿದೆ. ಅದಕ್ಕೆ ಮತ್ತೊಂದು ತಾಜಾ ಉದಾಹರಣೆ ಕಂದಾಯ ಇಲಾಖೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿ ಸುಮಾರು 3000 ಎಕರೆ ಪ್ರದೇಶವನ್ನು ಅಮೃತ್ ಮಹಲ್ ಕಾವಲ್ ಯೋಜನೆಗೆ ಕಾಯ್ದಿರಿಸಿದ ಜಮೀನನ್ನು ಹಿಂಪಡೆದಿದೆ. 


ಇದನ್ನೂ ಓದಿ: ಬೆಂಗಳೂರಿನ ನಾಗರಿಕರೇ ಎಚ್ಚರ! ಈ ಬಾರಿಯ ಮಳೆಗೆ ನಿಮ್ಮ ಏರಿಯಾವು ನೀರಿನಿಂದ ಮುಳುಗಡೆ ಆಗಬಹುದು ಹುಷಾರ್..!!


1922-23ರಲ್ಲಿ ಮೈಸೂರು ಸರ್ಕಾರ ಕರ್ನಾಟಕದಲ್ಲಿ ಗೋತಳಿಯ ಅಭಿವೃದ್ಧಿಗೆ ರಾಜ್ಯದ ತುಮಕೂರು, ಮೈಸೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಮೃತಮಹಲ್ ಕಾವಲ್ ಎಂದು ಜಮೀನು ಕಾಯ್ದಿರಿಸಿದ್ದರು. ಸ್ವತಂತ್ರ್ಯ ಪೂರ್ವದ ರಾಜ್ಯದಲ್ಲಿ ಪಶುಸಂಗೋಪನಾ ಇಲಾಖೆಯನ್ನು ಅಮೃತಮಹಲ್ ಇಲಾಖೆ ಎಂದು ಇತ್ತು. ಈ ಜಮೀನುಗಳು ಕಂದಾಯ ಇಲಾಖೆಗಿಂತ ಪಶು ಸಂಗೋಪನಾ ಇಲಾಖೆಯ ಸುಪರ್ದಿಯಲ್ಲಿತ್ತು. ವಿವಿಧ ಕಾರಣಗಳಿಗೆ ಈ ಯೋಜನೆ ಜಮೀನನ್ನು ಬೇರೆ ಕಾರಣಗಳಿಗೆ ಬಳಸಿಕೊಳ್ಳಲಾಗಿದೆ. ಆದರೆ ಬಿಜೆಪಿ ಸರ್ಕಾರ ಚಿತ್ರದುರ್ಗದ ಹೊಳಲ್ಕೆರೆಯ ಅಮೃತಮಹಲ್ ಜಮೀನನ್ನು ಖಾಸಗಿ ವ್ಯಕ್ತಿಗಳು ಹಾಗೂ ಕಂಪನಿಗಳಿಗೆ ನೀಡಲು ಡಿನೋಟಿಫಿಕೇಶನ್ ಮಾಡಲು ಮುಂದಾಗಿದೆ.   


ಈ ಕುರಿತು 29-03-2023ರಂದು ಆದೇಶ ಹೊರಡಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಈ ಆದೇಶ ಬಂದಿದೆ. ನೀತಿ ಸಂಹಿತೆ ನಿಯಮಾವಳಿಯಿಂದ ತಪ್ಪಿಸಿಕೊಳ್ಳಲು ಹಳೇಯ ದಿನಾಂಕ ಹಾಕಿ ಕಂದಾಯ ಇಲಾಖೆಯ ಮೂಲಕ ಈ ಆದೇಶ ಹೊರಡಿಸಲಾಗಿದೆ. 


ಈ ಜಮೀನಿನಲ್ಲಿ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಸೇರಿದಂತೆ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಜಮೀನನ್ನು ಖಾಸಗಿಯವರಿಗೆ ನೀಡಲು ಬರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಈ ವರದಿ ನೀಡಿದ್ದರೂ ಮುಖ್ಯಮಂತ್ರಿಗಳು ಈ ವರದಿಯನ್ನು ಧಿಕ್ಕರಿಸಿ, ಈ ಆದೇಶ ಹೊರಡಿಸಿ ಮಂಜೂರು ಮಾಡಿದ್ದಾರೆ.


ಚುನಾವಣೆ ಸಮಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಜಮೀನು ಡಿನೋಟಿಫಿಕೇಶನ್ ಮಾಡಿರುವುದೇಕೆ? ಯಾರಿಗೆ ಹಂಚಿಕೆ ಮಾಡುವ ಉದ್ದೇಶದಿಂದ ಈ ತೀರ್ಮಾನ ಮಾಡಲಾಗಿದೆ? ಸಂಘ ಪರಿವಾರಕ್ಕೆ ಸಂಬಂಧಿಸಿದ ಜನಸೇವಾ ಸಂಸ್ಥೆ ಸೇರಿದಂತೆ ನೂರಾರು ಎಕರೆ ಹಂಚಿಕೆ ಮಾಡಲಾಗಿದೆ. ಚುನಾವಣೆ ಸಮಯದಲ್ಲಿ ಈ ರೀತಿ ಅಧಿಸೂಚನೆ ಮೂಲಕ ಜಮೀನು ಹಂಚಿಕೆ ಮಾಡುವುದರ ಹಿಂದೆ ದೊಡ್ಡ ಮಟ್ಟದ ಹುನ್ನಾರವಿದೆ. ಹೀಗಾಗಿ ಚುನಾವಣಾ ಆಯೋಗ ಮಾರ್ಚ್ 29ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ತಡೆ ಹಿಡಿಯಬೇಕು. ಇದರ ವ್ಯವಹಾರವನ್ನು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ. ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. 


ಸಹಕಾರ ಸಂಘಗಳಿಗೆ ನೀಡಿರುವ ಜಮೀನು ರದ್ದುಗೊಳಿಸಲು ಸಹಕಾರಿ ಇಲಾಖೆ ಅನುಮತಿ, ಪಶುಸಂಗೋಪನಾ ಇಲಾಖೆ ಅನುಮತಿ ಹಾಗೂ ಕಂದಾಯ ಇಲಾಖೆ ಅನುಮತಿ ನೀಡಬೇಕು. ಆದರೆ ಯಾವುದೇ ಇಲಾಖೆ ಅನುಮತಿ ಪಡೆದಿಲ್ಲ. ಈ ಪ್ರಕ್ರಿಯೆಯ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಇದರಲ್ಲಿ ಅಧಿಕಾರಿಗಳು ಈ ಜಮೀನು ಹಂಪಡೆದು ಖಾಸಗಿಯವರಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರೂ ಮುಖ್ಯಮಂತ್ರಿಗಳು ಈ ಆದೇಶ ಹೊರಡಿಸಿದ್ದಾರೆ. ಇದರ ಹಿಂದೆ 40% ಕಮಿಷನ್ ಭ್ರಷ್ಟಾಚಾರ ನಡೆದಿದೆ.


ಇದನ್ನೂ ಓದಿ: MP Kumaraswamy: ಕೈ ತಪ್ಪಿದ್ದ ಟಿಕೆಟ್‌ : ಬಿಜೆಪಿಗೆ ರಾಜೀನಾಮೆ ನೀಡಿದ ಎಂ. ಪಿ ಕುಮಾರಸ್ವಾಮಿ !


ಒಂದುವೇಳೆ ಬಗರ್ ಹುಕ್ಕುಂ ಮೂಲಕ ಯಾವುದೇ ರೈತರು ಈ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದು, ಅವರಿಗೆ ಈ ಜಮೀನು ನೀಡುವುದಾದರೆ ಕಾಂಗ್ರೆಸ್ ಪಕ್ಷ ಯಾವುದೇ ಆಕ್ಷೇಪ ಮಾಡುವುದಿಲ್ಲ. ಆದರೆ ರೈತರ ಹೊರತಾಗಿ ಖಾಸಗಿಯವರಿಗೆ ನೀಡಿ 40% ದಂಧೆ ಮಾಡುವುದಕ್ಕೆ ಕಾಂಗ್ರೆಸ್ ಒಪ್ಪುವುದಿಲ್ಲ. ಈ ವಿಚಾರವಾಗಿ ಕೆಪಿಸಿಸಿ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.