ಬೆಂಗಳೂರು: ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಮಾದರಿ ಪಾರ್ಕ್‌ ನಿರ್ಮಾಣ ಮಾಡಲಾಗುತ್ತದೆ. ಈ ವಿಚಾರದಲ್ಲಿ ಯಾವುದೇ ರಾಜಿ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.


COMMERCIAL BREAK
SCROLL TO CONTINUE READING

ಕೆಆರ್ಎಸ್ ನಲ್ಲಿ  ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಪಾರ್ಕ್ ನಿರ್ಮಾಣ ಮಾಡುವುದರಿಂದ ಜಲಾಯನ ಪ್ರದೇಶದ ಸುತ್ತಲಿನ ಪ್ರದೇಶಗಳು ಅಭಿವೃದ್ದಿಯಾಗಲಿದೆ ಎಂದು ಹೆಚ್ಡಿಕೆ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.ಇನ್ನು ಮುಂದುವರೆದು ಇಂತಹ ಸರ್ಕಾರದ ಯೋಜನೆಗಳನ್ನು ವಿರೋಧಿಸಿದರೆ ಅಭಿವೃದ್ದಿಯಾಗುವುದಾರೆ ಹೇಗೆ ಎಂದು ಅವರು ತಿಳಿಸಿದರು. 


ಕೆಆರ್ಎಸ್ ನಲ್ಲಿನ ಡಿಸ್ನಿಲ್ಯಾಂಡ್ ಮಾದರಿ ಪಾರ್ಕ್‌ ನಿರ್ಮಾಣಕ್ಕೆ ಕೇವಲ 1060 ಕೋಟಿ ರೂ. ವ್ಯಯಿಸಲಾಗುತ್ತಿದೆ. ಮೊದಲ ಹಂತದ ಕಾಮಗಾರಿ 2020ಕ್ಕೆ ಹಾಗೂ ಎರಡನೇ ಹಂತದ ಕಾಮಗಾರಿ 2022ಕ್ಕೆ ಪೂರ್ಣವಾಗಲಿದೆ.ಈ ಯೋಜನೆಯನ್ನು ಪಿಪಿಪಿ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದರು.ಈ ಪಾರ್ಕ್ ನಿರ್ಮಾಣವಾದ ನಂತರ ಕನಿಷ್ಠ 25 ವರ್ಷಗಳ ಕಾಲ ಇದನ್ನು ಖಾಸಗಿ ನಿರ್ವಹಣೆಗೆ ಬಿಡಲಾಗುತ್ತದೆ ತದನಂತರ ಇದನ್ನು ಸರ್ಕಾರದ ನಿರ್ವಹಣೆ ಬಿಡಲಿದ್ದಾರೆ ಎಂದು ಅವರು ತಿಳಿಸಿದರು.