ಬೆಂಗಳೂರು: ರಾಜ್ಯದಲ್ಲಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ರೀತಿ ಸಮಸ್ಯೆ ಇಲ್ಲ. ಈಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಸಮ್ಮಿಶ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ದೇವೇಗೌಡ "ಕರ್ನಾಟಕದ ಸಮ್ಮಿಶ್ರ ಸರ್ಕಾರದಲ್ಲಿ  ಯಾವುದೇ ಸಮಸ್ಯೆ ಇಲ್ಲ. ಒಕ್ಕೂಟವು ಬಿಜೆಪಿಯನ್ನು ಸೋಲಿಸಲು ಮತ್ತು ಅದರ ಶಕ್ತಿಯನ್ನು ಕಡಿಮೆ ಮಾಡಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿವೆ, ಕೆಲವು ಮಂತ್ರಿಗಳು ಇನ್ನೂ ಸಂಪೂರ್ಣವಾಗಿ ಬದ್ಧವಾಗಿಲ್ಲ, ಈ ವಿಷಯವನ್ನು ಕಾಂಗ್ರೆಸ್ ಉನ್ನತ ಆಜ್ಞೆಗೆ ಬಿಡಲಾಗಿದೆ. ಇನ್ನು ಜೆಡಿ (ಎಸ್) ನಲ್ಲಿ, ಯಾವುದೇ ತೊಂದರೆ ಇಲ್ಲವೆಂದು" ಅವರು ತಿಳಿಸಿದ್ದಾರೆ.


ಈ ಚುನಾವಣೆ ನಂತರ ಯಾವುದೇ ಮೋದಿ ಸರ್ಕಾರದ ಸುಲಭವಾಗಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲವೆಂದು ಅವರು ತಿಳಿಸಿದರು." ಮೋದಿ ಸುಲಭವಾಗಿ ಮತ್ತೆ  ಅಧಿಕಾರಕ್ಕೆ ಬರುತ್ತಾರೆ ಎಂದು ನನಗೆ ಅನಿಸುತ್ತಿಲ್ಲ. ಎರಡು ಗುಂಪುಗಳ ಪೈಕಿ ಯಾವುದೂ ಸ್ಪಷ್ಟವಾದ ಬಹುಮತ ಪಡೆಯುವುದಿಲ್ಲ...ಚುನಾವಣೆ ನಂತರ ಮರು ಬಣ ಸೃಷ್ಟಿಯಾಗಲಿದೆ. 'ನಾನು ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ಹೋಗುತ್ತಿಲ್ಲ' ಎಂದು ಮಾಯಾವತಿ ಹೇಳಿದ್ದಾರೆ...ಮಮತಾ ಬ್ಯಾನರ್ಜಿ ಸಹ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಈ ಸಂದರ್ಭಗಳಲ್ಲಿ, ಚುನಾವಣೆ ನಂತರ ಅವರು ಎಲ್ಲರೂ ಒಟ್ಟಿಗೆ ಬರಬೇಕಾಗಿದೆ. ಆ ಕೆಲಸ ಮಾಡಿದಲ್ಲಿ ಸಮ್ಮಿಶ್ರ ಸರ್ಕಾರ ಕೇಂದ್ರದಲ್ಲಿ ಯಶಸ್ವಿಯಾಗಲಿದೆ ಎಂದು ದೇವೇಗೌಡ ಅಭಿಪ್ರಾಯಪಟ್ಟರು.