ಹುಬ್ಬಳ್ಳಿ:  ಕರ್ನಾಟಕದಲ್ಲಿ ಸರ್ಕಾರವನ್ನು ಅಭದ್ರಗೊಳಿಸಿ, ಅಭಿವೃದ್ಧಿ ಕೆಲಸಗಳಿಗೆ ಕೊಡಲಿ ಪೆಟ್ಟು ಹಾಕಬೇಕು ಅನ್ನೋದಾ ಕುಮಾರಸ್ವಾಮಿ ಅವರ ಉದ್ದೇಶ  ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್ .ಕೆ. ಪಾಟೀಲ್ ಕಿಡಿ ಕಾರಿದರು.


COMMERCIAL BREAK
SCROLL TO CONTINUE READING

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್ .ಕೆ. ಪಾಟೀಲ್, ಶಾಸಕರನ್ನ ಖರೀದಿ ವಸ್ತುಗಳನ್ನಾಗಿ ಮಾಡುವ ವಾತಾವರಣ ಸೃಷ್ಟಿ ಮಾಡ್ತಾ ಇದ್ದಾರೆ ಎಂದರು.  


ಲೋಕಸಭಾ ಚುನಾವಣೆ ನಂತರ ಕಾದು ನೋಡಿ ಎಂದು ‌ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರವನ್ನು ಅಭದ್ರಗೊಳಿಸುವಂತ ಮಾತುಗಳು ಯಾವ ಪುರುಷಾರ್ಥಕ್ಕೆ, ಉದ್ದೇಶ ಏನು? ಕರ್ನಾಟಕದಲ್ಲಿ ಸರ್ಕಾರವನ್ನು ಅಭದ್ರಗೊಳಿಸಿ, ಅಭಿವೃದ್ಧಿ ಕೆಲಸಗಳಿಗೆ ಕೊಡಲಿ ಪೆಟ್ಟು ಕೊಡಬೇಕು ಅನ್ನೋದಾ. ಸರ್ಕಾರಗಳನ್ನ ಅಭದ್ರಗೊಳಿಸುವುದು ಒಂದು ರೀತಿ ಷಡ್ಯಂತ್ರ. ಜನರಿಗೆ ಕೆಲಸ ಆಗಬೇಕು, ಅಭಿವೃದ್ಧಿ ಕಡೆ ಗಮನ ಹರಿಸಬೇಕು. ಅದನ್ನು ಬಿಟ್ಟು ಮಾಧ್ಯಮಗಳ ಮೂಲಕ ಜನರ ಮನಸ್ಸನ್ನು ಅಭದ್ರಗೊಳಿಸುವ ಪ್ರಯತ್ನ ಯಶಸ್ವಿ ಆಗೋದಿಲ್ಲ ಇದು ಸರಿಯಲ್ಲ ಎಂದು ಹೇಳಿದರು. 


ಇದನ್ನೂ ಓದಿ- ಹವಾಮಾನ ವೈಪರೀತ್ಯ ಹಿನ್ನೆಲೆ ರೇಷ್ಮೆ ಬೆಳೆ ರಕ್ಷಣೆಗೆ ಸಲಹೆಗಳನ್ನು ನೀಡಿದ ರೇಷ್ಮೆ ಇಲಾಖೆ


ಜನರಿಗೆ ಎಲ್ಲವೂ ತಿಳಿಯೋಕೆ ಪ್ರಾರಂಭವಾಗಿದ್ದು, ಎಂಎಲ್ಎ ಗಳನ್ನು ಖರೀದಿ ವಸ್ತುಗಳನ್ನಾಗಿ ಮಾಡುವ ವಾತಾವರಣ ಸೃಷ್ಟಿ ಮಾಡ್ತಾ ಇದ್ದಾರೆ. ಆ ವಾತಾವರಣಕ್ಕೆ ಯಾರೂ ಬಲಿ ಆಗೋದಿಲ್ಲ ಎಂದ ಅವರು ಈ ಹಿಂದೆ 17 ಜನರನ್ನು ಮುಂಬೈ, ಗೋವಾಕ್ಕೆ ಕರೆದೋಯ್ದು ಖರೀದಿ ಮಾಡಿದ್ರು  ಭಾರತೀಯ ಜನತಾ ಪಕ್ಷದವರು. ನಂತರ ಜನ ಅವರಿಗೆ ಯಾವ ರೀತಿ ಉತ್ತರಿಸಿದರು ಎಂಬುದನ್ನು ನೋಡಿದ್ದೀವಲ್ಲ.
ಇಷ್ಟಾದ ಮೇಲೇನು ಮತ್ತೆ ಹಾಗೇ ಆಗುತ್ತೆ ಅಂತಾ ಯಾರಾದ್ರೂ ತಿಳಿದಿದ್ರೆ ಅದು ಅವರ ಭ್ರಮೆ ಎಂದರು.


ಇದನ್ನೂ ಓದಿ- 300 ಕೋಟಿ ರೂ. ವಶ: ಕಾಂಗ್ರೆಸ್ ರಾಜಕೀಯದಲ್ಲಿ ಅಧೋಗತಿಗೆ ಇಳಿದಿದೆ ಎಂದ ಯತ್ನಾಳ್


ರಾಜ್ಯ ಸರ್ಕಾರ ಭ್ರಷ್ಟಾಚಾರ ಸರ್ಕಾರ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಎಚ್.ಕೆ. ಪಾಟೀಲ್, ಕೇಂದ್ರ ಸರ್ಕಾರದಲ್ಲೇ ಇದ್ದಾರಲ್ಲ, ಸರ್ಕಾರದಲ್ಲಿರುವವರು ಹೇಳುವಾಗ ಜವಾಬ್ದಾರಿಯಿಂದ ಮಾತನಾಡಬೇಕು. ತಾವು ಏನಿದ್ದಾರೆ ಏನು ಹೇಳ್ತಾ ಇದ್ದಾರೆ ಎಂಬುದರ ಬಗ್ಗೆ ಅರಿವಿರಬೇಕು. ಭ್ರಷ್ಟಾಚಾರ ಸರ್ಕಾರ ಅಂದ್ರೆ ನಿಮ್ಮ ಸೆಂಟ್ರಲ್ ವಿಜಿಲೆನ್ಸ್ ಏನು ಮಾಡ್ತಾ ಇದೆ. ಇಡಿ, ಸಿಬಿಐ, ಇನ್ಕಮ್ ಟ್ಯಾಕ್ಸ್  ಎಲ್ಲಾ ಮಾಡಿದ್ದೀರಲ್ಲ. ಈಗ 10 ವರ್ಷ ಆಯ್ತು ಯಾರು ನಿಮಗೆ ತಡೆದಿದ್ದು? ಮಹಾರಾಷ್ಟ್ರದಲ್ಲಿ ನೀವು ಭ್ರಷ್ಟಾಚಾರದ ಮೂಲಕ ಸರ್ಕಾರ ಬದಲಾಯಿಸಿ ಯಶಸ್ವಿ ಆದ್ರಿ ಅದು ನಿಮ್ಮ ಪ್ರಾಮಾಣಿಕತನ ಅಲ್ವೇ ಎಂದು ಲೇವಡಿ ಮಾಡಿದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.