300 ಕೋಟಿ ರೂ. ವಶ: ಕಾಂಗ್ರೆಸ್ ರಾಜಕೀಯದಲ್ಲಿ ಅಧೋಗತಿಗೆ ಇಳಿದಿದೆ ಎಂದ ಯತ್ನಾಳ್

Odisha and Jharkhand IT Raid: ಒಡಿಶಾದ ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್​ನಲ್ಲಿ ತೆರಿಗೆ ವಂಚನೆ ನಡೆದಿದೆ ಎಂಬ ಶಂಕೆ ಮೇರೆಗೆ ಡಿ.6ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ದಾಖಲೆಯಿಲ್ಲದ ಬರೋಬ್ಬರಿ 300 ಕೋಟಿ ರೂ.ಗೂ ಹೆಚ್ಚು ಹಣ ಪತ್ತೆಯಾಗಿದೆ.

Written by - Puttaraj K Alur | Last Updated : Dec 10, 2023, 01:41 PM IST
  • ಒಡಿಶಾ ಮತ್ತು ಜಾರ್ಖಂಡ್​ನ ರಾಂಚಿಯಲ್ಲಿ ಐಟಿ ಇಲಾಖೆಯ ದಾಳಿ
  • ದಾಖಲೆಯಿಲ್ಲದ ಬರೋಬ್ಬರಿ 300 ಕೋಟಿ ರೂ. ನಗದು ಪತ್ತೆ
  • ಕಾಂಗ್ರೆಸ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ
300 ಕೋಟಿ ರೂ. ವಶ: ಕಾಂಗ್ರೆಸ್ ರಾಜಕೀಯದಲ್ಲಿ ಅಧೋಗತಿಗೆ ಇಳಿದಿದೆ ಎಂದ ಯತ್ನಾಳ್  title=
300 ಕೋಟಿ ರೂ. ನಗದು ಪತ್ತೆ!

ಬೆಂಗಳೂರು: ಒಡಿಶಾ ಮತ್ತು ಜಾರ್ಖಂಡ್​ನ ರಾಂಚಿಯಲ್ಲಿರುವ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಪ್ರಸಾದ್ ಸಾಹು ಒಡೆತನದ ಸ್ಥಳಗಳು ಮತ್ತು ಡಿಸ್ಟಿಲರಿಗಳು, ಸಂಬಂಧಿತ ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಇದುವರೆಗೆ ಬರೋಬ್ಬರಿ 300 ಕೋಟಿ ರೂ.ಗೂ ಅಧಿಕ ನಗದು ವಶಪಡಿಸಿಕೊಳ್ಳಲಾಗಿದೆ. ಇದೇ ವಿಚಾರವಾಗಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಳ್ ಯತ್ನಾಳ್ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಯತ್ನಾಳ್, ‘ಕಾಂಗ್ರೆಸ್​ ಪಕ್ಷದೊಳಗಿನ ಭ್ರಷ್ಟಾಚಾರ ಮಟ್ಟ ಎಲ್ಲೆಯನ್ನು ಮೀರಿದೆ. ಈ ಅಕ್ರಮ ಹಣದ ಮೂಲವೇನು..? ಇಷ್ಟೊಂದು ಪ್ರಮಾಣದ ಹಣವನ್ನು ಧೀರಜ್​ ಸಾಹು ಹೇಗೆ ಸಂಗ್ರಹಿಸಿದ್ದ? ಇಂತಹ  ಭ್ರಷ್ಟಾಚಾರದಿಂದಾಗಿಯೇ ಕಾಂಗ್ರೆಸ್ ಪಕ್ಷ ರಾಜಕೀಯದಲ್ಲಿ ಅಧೋಗತಿಗೆ ಇಳಿದಿದೆ. ಇಂತಹ ಭ್ರಷ್ಟ ವ್ಯಕ್ತಿಗಳ ವಿರುದ್ಧ ಕಾನೂನಿನಡಿ ಕ್ರಮ ಕೈಗೊಳ್ಳುವ ಮೂಲಕ ಸರಿಯಾಗಿ ಬಿಸಿ ಮುಟ್ಟಿಸಬೇಕು’ ಎಂದು ಕಿಡಿಕಾರಿದ್ದಾರೆ.   

ಇದನ್ನೂ ಓದಿ: ಲೇಸ್‌ ಪ್ಯಾಕೇಟ್‌ನಲ್ಲಿ ಕೇವಲ ಎರಡೇ ಚಿಪ್ಸ್:‌ ವಿಡಿಯೋ ವೈರಲ್!‌

‘ಧೀರಜ್​ ಸಾಹು ಲಿಂಕ್​ ಇರುವ ಬಲದೇವ್ ಸಾಹು ಕಂಪನಿಯ ಬೋಲಂಗಿರ್ ಕಚೇರಿಯಿಂದ 30 ಕಿಮೀ ದೂರದಲ್ಲಿರುವ ಸಾತ್ಪುರ ಕಚೇರಿಯಲ್ಲಿ ಪತ್ತೆಯಾದ 230 ಕೋಟಿ ರೂ.ಗೆ ಸಂಬಂಧಿಸಿದ ವಿಡಿಯೋವನ್ನು ಯತ್ನಾಳ್​ ಹಂಚಿಕೊಂಡಿದ್ದಾರೆ.

300 ಕೋಟಿ ರೂ. ನಗದು ಪತ್ತೆ..!

ಒಡಿಶಾದ ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್​ನಲ್ಲಿ ತೆರಿಗೆ ವಂಚನೆ ನಡೆದಿದೆ ಎಂಬ ಶಂಕೆ ಮೇರೆಗೆ ಡಿ.6ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ದಾಖಲೆಯಿಲ್ಲದ ಬರೋಬ್ಬರಿ 300 ಕೋಟಿ ರೂ.ಗೂ ಹೆಚ್ಚು ಹಣ ಪತ್ತೆಯಾಗಿದೆ. 40 ದೊಡ್ಡ ಮತ್ತು ಚಿಕ್ಕದಾದ ನೋಟು ಎಣಿಕೆ ಯಂತ್ರಗಳನ್ನು ಬಳಸಿ ನೋಟು ಎಣಿಕೆ ಮಾಡಲಾಗಿದೆ. ಬ್ಯಾಂಕ್​ ಸಿಬ್ಬಂದಿ ಸೇರಿ ಅನೇಕ ಇಲಾಖೆಗಳ ಸಿಬ್ಬಂದಿ ನೋಟುಗಳನ್ನು ಎಣಿಸಲು ನಿಯೋಜಿಸಲಾಗಿತ್ತು. ಡಿ.6ರಂದು ಆರಂಭವಾದ ನೋಟು ಎಣಿಕೆ 3 ದಿನವಾದರೂ ಮುಂದುವರಿದಿದೆ.

ಇದನ್ನೂ ಓದಿ: Viral Video: ರಸ್ತೆಯಲ್ಲೇ ಪರಸ್ಪರ ಜುಟ್ಟು ಹಿಡಿದು ಹೊಡೆದಾಡಿಕೊಂಡ ವಿದ್ಯಾರ್ಥಿನಿಯರು!

ಮದ್ಯ ತಯಾರಿಕಾ ಕಂಪನಿ ಬಲದೇವ್ ಸಾಹು ಅಂಡ್ ಗ್ರೂಪ್ ಕಂಪನಿಗಳೊಂದಿಗೆ ಸಂಸದ ಧೀರಜ್ ಸಾಹು ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಐಟಿ ಇಲಾಖೆ 10 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಈ ಪೈಕಿ ಬಲದೇವ್ ಸಾಹು ಕಂಪನಿಯ ಬೋಲಂಗಿರ್ ಕಚೇರಿಯಿಂದ 30 ಕಿಮೀ ದೂರದಲ್ಲಿರುವ ಸಾತ್ಪುರ ಕಚೇರಿಯಲ್ಲಿ 230 ಕೋಟಿ ರೂ. ಪತ್ತೆಯಾದರೆ, ಉಳಿದ ಹಣ ತಿತ್ಲಗಢ, ಸಂಬಲ್ಪುರ್ ಮತ್ತು ರಾಂಚಿಯಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News