ಬೆಂಗಳೂರು: ರಾಜ್ಯದ ಸಚಿವ ಸಂಪುಟ ಪ್ರಹಸನಕ್ಕೆ ತೆರೆ ಬೀಳುವ ಲಕ್ಷಣಗಳು ಕಾಣುತ್ತಲೇ ಇಲ್ಲ. ಪದೇ ಪದೇ ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡಿರುವ ಇಬ್ಬರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ರಾಜಕಾರಣದ ವಲಯದಲ್ಲಿ ಕೇಳಿ ಬಂದಿದೆ.


COMMERCIAL BREAK
SCROLL TO CONTINUE READING

ಖಾತೆ ಮರು ಹಂಚಿಕೆ ವೇಳೆ ಡಾ. ಕೆ ಸುಧಾಕರ್ ಅವರ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನ ಮಾಧುಸ್ವಾಮಿ ಅವರಿಗೆ ಸಿಎಂ ನೀಡಿದ್ದರು. ಇದರಿಂದ ಸುಧಾಕರ್(Dr.K.Sudhakar) ಕುಪಿತಗೊಂಡಿದ್ದರು. ಇದೀಗ ವೈದ್ಯಕೀಯ ಶಿಕ್ಷಣ ಖಾತೆಯನ್ನು ಸುಧಾಕರ್ ಗೆ ಮತ್ತೆ ನೀಡಲಾಗಿದೆ.


D.K.Shivakumar: 'ಈ ಸರ್ಕಾರ ಬಲಿಷ್ಠವಾಗಿದೆ, ಎಲ್ಲರೂ ಒಗ್ಗಟ್ಟಾಗಿದ್ದಾರೆ'


ಖಾತೆ ಪುನರ್ ಹಂಚಿಕೆ ನಂತರ ವಲಸಿಗ ಸಚಿವರಿಂದ ವ್ಯಕ್ತವಾದ ತೀವ್ರ ಆಕ್ರೋಶಕ್ಕೆ ಮಣಿದ ಯಡಿಯೂರಪ್ಪ ಮತ್ತೆ ತೀರ್ಮಾನ ಬದಲಾಯಿಸಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ಆನಂದ್ ಸಿಂಗ್ ಅವರಿಗೆ ಮೂಲ ಸೌಕರ್ಯ, ಹಜ್ ಮತ್ತು ವಕ್ಫ್ ಖಾತೆ ನೀಡಿದ್ದಾರೆ. ತಮ್ಮಿಂದ ವೈದ್ಯಕೀಯ ಖಾತೆ ಕಸಿದುಕೊಂಡ ಬೆಳವಣಿಗೆಯಿಂದ ತೀವ್ರ ಆಕ್ರೋಶಗೊಂಡಿದ್ದ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜತೆಗೆ ವೈದ್ಯಕೀಯ ಇಲಾಖೆ ಮರಳಿ ನೀಡಲಾಗಿದೆ.


Cabinet Reshuffle: ಮತ್ತೆ ಸಚಿವರಿಗೆ ಖಾತೆ ಮರು ಹಂಚಿಕೆ ಮಾಡಿದ ಸಿಎಂ ಬಿಎಸ್ ವೈ!


ಸಣ್ಣ ನೀರಾವರಿ ಖಾತೆ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನಗೊಂಡು ಸಚಿವ ಸಂಪುಟ ಸಭೆಯಿಂದಲೇ ದೂರ ಉಳಿದಿದ್ದ ಜೆ.ಸಿ. ಮಾಧು ಸ್ವಾಮಿ ಅವರಿಗೆ ಹೆಚ್ಚುವರಿಯಾಗಿ ಪ್ರವಾಸೋದ್ಯಮ ಮತ್ತು ಪರಿಸರ ಇಲಾಖೆಯನ್ನು ನೀಡಿ ತೃಪ್ತಿಪಡಿಸಲಾಗಿದೆ. ಆದರೆ ಈ ತೀರ್ಮಾನಗಳು ಮುಂದೆ ಯಾವ ರಾಜಕಾರಣದ ಬೆಳವಣಿಗೆಗೆ ನಾಂದಿಯಾಗಲಿದೆ ಎನ್ನುವುದು ಗೊತ್ತಿಲ್ಲ. ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿರುವ ಆನಂದ್ ಸಿಂಗ್ ಎಲ್ಲವೂ ಸರಿ ಇದೆ ಎಂಬ ಮಾತುಗಳನ್ನು ಆಡಿದ್ದಾರೆ. ಒಂಭತ್ತು ದಿನದಲ್ಲಿ ಮೂರು ಸಾರಿ ಖಾತೆ ಬದಲಾವಣೆಯಾಗಿದೆ.


 S Suresh Kumar: ಪೂರ್ಣ ಪ್ರಮಾಣದ ಶಾಲೆ ಆರಂಭಿಸುವ ಸೂಚನೆ ನೀಡಿದ ಶಿಕ್ಷಣ ಸಚಿವರು! 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.