Shocking Video: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಕೆಲ ವಿಡಿಯೋಗಳನ್ನು ನೋಡಿದರೆ ನಾವು ಬೆರಗಾಗುತ್ತೇವೆ. ಇತ್ತೀಚಿನ ದಿನಗಳಲ್ಲಿ ಅಂತಹುದೆ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೆಂಡ್ ಆಗುತ್ತಿದೆ. ಇದನ್ನು ನೋಡಿ ಕೆಲವೇ ಸೆಕೆಂಡುಗಳಲ್ಲಿ ಮಹಿಳೆಗೆ ಏನಾಯಿತು ಎಂಬುದನ್ನೂ ನಿಮಗೆ ಊಹಿಸಲು ಕೂಡ ಸಾಧ್ಯವಾಗುವುದಿಲ್ಲ? ಗಾಳಿಯಲ್ಲಿ ತೂರಿಕೊಂಡು ಬರುವ ವ್ಯಕ್ತಿಯೊಬ್ಬ ಆಕೆಯ ಮೇಲೆ ಬೀಳುತ್ತಾನೆ ಮತ್ತು ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ಘಟನೆ ಎಂದು ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ,

COMMERCIAL BREAK
SCROLL TO CONTINUE READING

ವಿ ದಿ ಪೀಪಲ್ ಹೆಸರಿನ ಟ್ವಿಟ್ಟರ್ ಪೇಜ್ ಮೂಲಕ ಈ 4-ಸೆಕೆಂಡ್ ವೀಡಿಯೋವನ್ನು  ಹಂಚಿಕೊಳ್ಳಲಾಗಿದೆ. ಅದನ್ನು ಟ್ವೀಟ್ ಮಾಡಿ, 'ಇದೇನು?' ಎಂಬ ಶೀರ್ಷಿಕೆ ಬರೆಯಲಾಗಿದೆ. ಈ ವೀಡಿಯೋ ನೋಡಿದ ನಂತರ ನೀವೂ ಕೂಡ ಕೆಲವು ಸೆಕೆಂಡ್‌ಗಳ ಕಾಲ ಇದೆಲ್ಲಾ ಏನು? ಎಂದು ಯೋಚಿಸಲು ಶುರು ಮಾಡುವಿರಿ. ವಾಸ್ತವದಲಿ, ಈ ವೀಡಿಯೊದಲ್ಲಿ ಮಹಿಳೆಯೊಬ್ಬರು ಫುಟ್‌ಪಾತ್‌ನಲ್ಲಿ ನಡೆಯುತ್ತಿರುವುದನ್ನು ನೀವು ನೋಡಬಹುದು. ಏಕಾಏಕಿ ಆಟೋದಲ್ಲಿ ಕುಳಿತಿದ್ದ ವ್ಯಕ್ತಿ ಹಿಂದಿನಿಂದ ಗಾಳಿಯಲ್ಲಿ ಹಾರಿ ಬಂದು ಮಹಿಳೆಯ ಮೇಲೆ ಬೀಳುತ್ತಾನೆ. ಇದರಿಂದ ಮಹಿಳೆ ನೆಲಕ್ಕೆ ಉರುಳಿ ಗಂಭೀರವಾಗಿ ಗಾಯಗೊಳ್ಳುತ್ತಾಳೆ.


ಇದನ್ನೂ ಓದಿ-Most Precious Lizard: ಈ ಹಲ್ಲಿಯ ಬೆಲೆ ಒಂದು ಬಿಎಂಡಬ್ಲ್ಯೂಗೆ ಸಮಾನ ಎಂದ್ರೆ ನೀವು ನಂಬ್ತೀರಾ? 100% ನಿಜ!


ಈ ಸಂಪೂರ್ಣ ಘಟನೆ ಏನು?
ಈಗ ಈ ಘಟನೆಯ ಬಗ್ಗೆ ಹೇಳುವುದಾದರೆ, ನಿಜವಾಗಿ ಈ ಘಟನೆ ವರದಿಯಾಗಿರುವುದು ಬೆಂಗಳೂರಿನ ತಂಬುಚೆಟ್ಟಿ ಪಾಳ್ಯ ಪ್ರದೇಶದಿಂದ. ಇಲ್ಲಿ ಟಿಸಿ ಪಾಳ್ಯ ಜಂಕ್ಷನ್‌ನಲ್ಲಿ 42 ವರ್ಷದ ಸುನೀತಾ ಎಂಬ ಮಹಿಳೆ ತನ್ನ ಹೋಟೆಲ್ ಅನ್ನಪೂರ್ಣೇಶ್ವರಿ ಕಡೆಗೆ ಹೋಗುತ್ತಿದ್ದಾಗ ಏಕಾಏಕಿ ಆಟೋದಲ್ಲಿ ಕುಳಿತಿದ್ದ ವ್ಯಕ್ತಿ ವಿದ್ಯುತ್ ತಂತಿಯ ಶಾಕ್ ತಗುಲಿ  ಗಾಳಿಯಲ್ಲಿ ಹಾರಿ ಬಂದು ಮಹಿಳೆಯ ಮೇಲೆ ಬಿದ್ದಿದ್ದಾನೆ. ಈ ಘಟನೆಯಲ್ಲಿ ಆಟೋ ಚಾಲಕನಿಗೆ ಏನೂ ಆಗಿಲ್ಲ, ಆದರೆ ಮಹಿಳೆಗೆ ತೀವ್ರವಾಗಿ ಗಾಯಗಳಾಗಿದ್ದು ಆಕೆಗೆ 52 ಸ್ಟಿಚ್ ಗಳನ್ನು ಹಾಕಲಾಗಿದೆ. 


ಇದನ್ನೂ ಓದಿ-Be Alert! ರೈಲಿನಲ್ಲಿ ಪ್ರವಾಸ ಮಾಡುವಾಗ ಈ ಕೆಲ್ಸಾ ಮಾಡ್ಬೇಡಿ, ಇಲ್ದಿದ್ರೆ...?


ಹೃದಯ ವಿದ್ರಾವಕ ಘಟನೆ ಎಂದ ನೆಟಿಜನ್‌ಗಳು
ಈ 4-ಸೆಕೆಂಡ್ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ ಮತ್ತು ಇದುವರೆಗೆ 920.5K ಬಳಕೆದಾರರು ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಳಕೆದಾರರು, 'ಅವನು ತಂತಿಯಲ್ಲಿ ಸಿಲುಕಿಕೊಂಡಿದ್ದಾನೆ' ಎಂದು ಬರೆದಿದ್ದಾರೆ. ಒಬ್ಬ ಬಳಕೆದಾರ, 'ಇದು ನಿಜವಾಗಿಯೂ ಭಯಾನಕವಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ರಸ್ತೆ ಬದಿಯ ಅಂಗಡಿಯೊಂದರ ಸಿಸಿಟಿವಿ ದೃಶ್ಯಾವಳಿಯಲ್ಲಿ ಇಡೀ ಘಟನೆ ಸೆರೆಯಾಗಿದ್ದು, ಅದರ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.