ಬೆಂಗಳೂರು: ರಾಜ್ಯದಾದ್ಯಂತ  ಮುಸ್ಲಿಂ ಬಾಂಧವರು ಇಂದು ರಂಜಾನ್ ಹಬ್ಬ ಆಚರಿಸುತ್ತಿದ್ದಾರೆ. ಹಬ್ಬದ ಪ್ರಯುಕ್ತ ನಗರದ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. 


COMMERCIAL BREAK
SCROLL TO CONTINUE READING

ಸಾಮೂಹಿಕ ನಮಾಜ್ ಬೆಳಗ್ಗೆ 9.30 ರಿಂದ 10.30 ರವರೆಗೆ ಒಂದು ಗಂಟೆ ಕಾಲ ನಡೆದಿದ್ದು, ನಮಾಜ್ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ  ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.


ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ 5 ದಿನ ಭಾರಿ ಮಳೆ ಸಾಧ್ಯತೆ


ರಂಜಾನ್ ಮುಸ್ಲಿಮರ ದೊಡ್ಡ ಹಬ್ಬ. ರಂಜಾನ್ ಹಬ್ಬದ ಪ್ರಯುಕ್ತ ಹೊಸ ಬಟ್ಟೆಗಳನ್ನ ಧರಿಸಿ,ಈ ದಿನ ಎಲ್ಲರೂ ಒಬ್ಬರನ್ನೊಬ್ಬರು ತಬ್ಬಿ ಪ್ರೀತಿಯ ಶುಭಾಶಯವನ್ನು ಕೋರುತ್ತಾರೆ. ರಂಜಾನ್ ಆಚರಣೆಯ ದಿನಾಂಕ ಚಂದ್ರನ ಮೇಲೆ ಅವಲಂಬಿತವಾಗಿರುತ್ತದೆ. ಚಂದ್ರನ ದರ್ಶನವಾದ ಬಳಿಕ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದ ಹಿನ್ನೆಲೆ  ಮುಸಲ್ಮಾನರು ನಿನ್ನೆವರೆಗೂ ರೋಜ ಇದ್ದರು. ಇದೀಗ ನಮಾಜು ಮಾಡಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. 


ರಂಜಾನ್ ಹಬ್ಬವನ್ನು ಜಗತ್ತಿನಾದ್ಯಂತ ಮುಸ್ಲಿಮರು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಈ ಸಮಯದಲ್ಲಿ ಕುರಾನ್ ಅನಾವರಣಗೊಂಡಿತು ಎಂದು  ಈ ತಿಂಗಳು ಮುಸ್ಲಿಂ ಸಮುದಾಯಕ್ಕೆ ಅಪಾರ ಮಹತ್ವವನ್ನು ಹೊಂದಿದೆ. 


ಇದನ್ನೂ ಓದಿ: ಕನ್ನಡದ ಹಿರಿಯ ಸಾಹಿತಿ ಶ್ರೀನಿವಾಸ್ ವೈದ್ಯ ಇನ್ನಿಲ್ಲ


ಇದು ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳಿನಲ್ಲಿ ಬರುತ್ತದೆ ಮತ್ತು ಉಪವಾಸ, ಪ್ರಾರ್ಥನೆಗಳನ್ನು ಸಲ್ಲಿಸುವುದು, ದಾನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು.


ಮಾನವೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಅತ್ಯಂತ ಉತ್ಸಾಹದಿಂದ ಆಚರಿಸುವುದು ಹಬ್ಬದ ಹಿನ್ನಲೆಯಾಗಿದೆ. ಈ ನಿಟ್ಟಿನಲ್ಲಿ ರಂಜಾನ್ ಹಿನ್ನೆಲೆ   ಅಹಿತಕರ ಘಟನೆ ನಡೆಯದಂತೆ ಭದ್ರತೆಗಾಗಿ ಮೈದಾನದ ಸುತ್ತ ಪೊಲೀಸರ ನಿಯೋಜನೆ ಮಾಡಲಾಗಿತ್ತು. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.