ಕನ್ನಡದ ಹಿರಿಯ ಸಾಹಿತಿ ಶ್ರೀನಿವಾಸ್ ವೈದ್ಯ ಇನ್ನಿಲ್ಲ

.ಶ್ರೀನಿವಾಸ ವೈದ್ಯ ಅವರು ಏಪ್ರಿಲ್ ೪,೧೯೩೬ರಂದು,ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಬಿ.ಜಿ. ವೈದ್ಯ ಮತ್ತು ಶ್ರೀಮತಿ ಸುಂದರಾಬಾಯಿ ಬಂಡೇರಾವ ವೈದ್ಯ ಅವರ ದಂಪತಿಗಳಿಗೆ ಜನಿಸಿದರು.

Written by - Zee Kannada News Desk | Last Updated : Apr 21, 2023, 06:24 PM IST
  • ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಬಿ.ಜಿ. ವೈದ್ಯ ಮತ್ತು ಶ್ರೀಮತಿ ಸುಂದರಾಬಾಯಿ ಬಂಡೇರಾವ ವೈದ್ಯ ಅವರ ದಂಪತಿಗಳಿಗೆ ಜನಿಸಿದರು.
  • ಅವರಿಗೆ ಹಳ್ಳ ಬಂತು ಹಳ್ಳ ಕಾದಂಬರಿಗೆ, ೨೦೦೪ ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮತ್ತು ೨೦೦೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ.
ಕನ್ನಡದ ಹಿರಿಯ ಸಾಹಿತಿ ಶ್ರೀನಿವಾಸ್ ವೈದ್ಯ ಇನ್ನಿಲ್ಲ  title=

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಶ್ರೀನಿವಾಸ್ ವೈದ್ಯ ಅವರು ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಅವರಿಗೆ ೮೭ ವರ್ಷ ವಯಸ್ಸಾಗಿತ್ತು.

ಅವರ ಹಳ್ಳ ಬಂತು ಹಳ್ಳ ಕಾದಂಬರಿಗೆ, ೨೦೦೪ ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮತ್ತು ೨೦೦೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿತ್ತು.ಶ್ರೀನಿವಾಸ ವೈದ್ಯ ಅವರು ಏಪ್ರಿಲ್ ೪,೧೯೩೬ರಂದು,ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಬಿ.ಜಿ. ವೈದ್ಯ ಮತ್ತು ಶ್ರೀಮತಿ ಸುಂದರಾಬಾಯಿ ಬಂಡೇರಾವ ವೈದ್ಯ ಅವರ ದಂಪತಿಗಳಿಗೆ ಜನಿಸಿದರು.

೧೯೪೨ರಿಂದ ೧೯೪೬ರವರೆಗೆ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಧಾರವಾಡದ ಮುನಸಿಪಲ್ ೨ನೇ ನಂಬರ ಶಾಲೆಯಲ್ಲಿ ಮಾಡಿದ ಶ್ರೀನಿವಾಸ ವೈದ್ಯರು, ತಮ್ಮ ಮಾಧ್ಯಮಿಕ ಮತ್ತು ಕಾಲೇಜು ವಿದ್ಯಾಭ್ಯಾಸವನ್ನು ಧಾರವಾಡದ ಕರ್ನಾಟಕ ಹೈಸ್ಕೂಲು ಮತ್ತು ಕರ್ನಾಟಕ ಕಾಲೇಜುಗಳಲ್ಲಿ (ಪದವಿ ಶಿಕ್ಷಣದಲ್ಲಿ ಅರ್ಥಶಾಸ್ತ್ರ ಮತ್ತು ಇತಿಹಾಸ ಪ್ರಧಾನ ವಿಷಯಗಳು) ಪೂರೈಸಿದ್ದಾರೆ. ೧೯೫೯ರಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡು, ಅದೇ ವರ್ಷ ಮುಂಬಯಿನ ಕೆನರಾ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿದರು. ಜೂನ್ ೨, ೧೯೭೧ರಂದು, ಬಿ.ಎ ಪದವಿಧರೆ ಸುಹಾಸಿನಿಯವರ ಕೈಹಿಡಿದು ನಡೆಸಿದ ಬಾಳನೌಕೆಯಲ್ಲಿ ಇವರ ಏಕಮಾತ್ರ ಸುಪುತ್ರ ಶ್ರೀ ವಿನಾಯಕರ ಜನನ. ಮುಂದೆ ಮುಂಬಯಿ, ಬೆಳಗಾವಿ, ಧಾರವಾಡ, ಗೋವಾ, ಚನ್ನೈ ಬೆಂಗಳೂರುಗಳಲ್ಲಿ ಇವರದು ಅಖಂಡ ಸೇವೆ. ೧೯೯೬ರಲ್ಲಿ ನಿವೃತ್ತಿ ಹೊಂದಿದ ಶ್ರೀನಿವಾಸ ವೈದ್ಯರು ಬೆಂಗಳೂರಿನಲ್ಲಿ ನೆಲೆಯೂರಿದ್ದರು.

ಶ್ರೀನಿವಾಸ ವೈದ್ಯರು ಕನ್ನಡದ ಅಪರಂಜಿ ಹಾಸ್ಯ ಪತ್ರಿಕೆಯ ಬರಹಗಾರರು.ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದ ಇವರು , ಅಲ್ಲಿ ಸಂವಾದ ಎನ್ನುವ ಸಾಂಸ್ಕೃತಿಕ ಸಂಘಟನೆಯನ್ನು ಸ್ಥಾಪಿಸಿ ನಡೆಯಿಸಿಕೊಂಡು ಬಂದಿದ್ದಾರೆ.ಕನ್ನಡ ನಾಡಿನ ಖ್ಯಾತ ಬರಹಗಾರರಿಂದ ಭಾಷಣ, ಸಂವಾದ, ವಾಚನ ಮತ್ತು ಇತರ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ.

ಅವರಿಗೆ  ಹಳ್ಳ ಬಂತು ಹಳ್ಳ ಕಾದಂಬರಿಗೆ, ೨೦೦೪ ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮತ್ತು ೨೦೦೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ.ಮನಸುಖರಾಯನ ಮನಸು ಕೃತಿಗೆ, ೨೦೦೩ ರಲ್ಲಿ ’ಪರಮಾನಂದ ಪ್ರಶಸ್ತಿ’.೨೦೧೦ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News