ಬೆಂಗಳೂರು: ವಿಧಾನಸಭಾ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳಿಗೆ ಮುಕ್ತ ಅವಕಾಶ ನೀಡಿದ್ದ ಕೆಪಿಸಿಸಿಗೆ ಈಗ ಟಿಕೆಟ್ ಘೋಷಣೆ ಮಾಡುವುದು ದೊಡ್ಡ ಸವಾಲಾಗಿ ಪರಿಣಾಮಿಸಿದೆ. ಈ ಮಧ್ಯೆ, 93 ಕ್ಷೇತ್ರಗಳಲ್ಲಿ ಸಾಂಪ್ರಾದಾಯಿಕ ಎದುರಾಳಿ ಜೆಡಿಎಸ್ ಕಟ್ಟಿ ಹಾಕಲು ಕಾಂಗ್ರೆಸ್ ಪಕ್ಷಕ್ಕೆ ಶೀಘ್ರದಲ್ಲೇ ಟಿಕೆಟ್ ಘೋಷಣೆ ಮಾಡಬೇಕಾದ ಅನಿವಾರ್ಯತೆ ಮುಂದಾಗಿದೆ.


COMMERCIAL BREAK
SCROLL TO CONTINUE READING

ಬೆಳಗಾವಿ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಕಲಾಪ ಬಳಿಕ ನಿತ್ಯ ಕಾಂಗ್ರೆಸ್ ಟಿಕೆಟ್ ಘೋಷಣೆ ವಿಚಾರದ ಚರ್ಚೆ ನಡೆಸುತ್ತಿದ್ದು, ಟಿಕೆಟ್ ಘೋಷಣೆ ಸಾಧಕ- ಬಾಧಕಗಳ ಬಗ್ಗೆ ಹೈಕಮಾಂಡ್ ನಾಯಕರ ನಿಗಾ ವಹಿಸಿದ್ದಾರೆ. 


ಸದ್ಯ ಟಿಕೆಟ್ ಘೋಷಣೆ ಮಾಡುವ ವಿಚಾರದಲ್ಲಿ ಹೈಕಮಾಂಡ್ ಗಮನ ಹರಿಸಿದ್ರೂ, ರಾಜ್ಯ ಕಾಂಗ್ರೆಸ್ ನ ಸದ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಟಿಕೆಟ್ ಘೋಷಣೆ ಮಾಡುವ ವಿಚಾರದಲ್ಲಿ ರಾಜ್ಯ ನಾಯಕರ ಸಹಮತ ಮುಖ್ಯ ಇರುವ ಕಾರಣ ಸಿದ್ದರಾಮಯ್ಯ -ಶಿವಕುಮಾರ್ ಗಮನಕ್ಕೆ ತಂದೇ ಟಿಕೆಟ್ ಘೋಷಣೆ ಮಾಡಬೇಕಾದ ಅನಿವಾರ್ಯತೆ ಇದೆ.


ಇದನ್ನೂ ಓದಿ- ದೇಶದ ಬಹುತೇಕ ಕ್ರಾಂತಿಕಾರಿಗಳನ್ನು ಬ್ರಿಟಿಷರಿಗೊಪ್ಪಿಸಿದವರೇ ಕಾಂಗ್ರೆಸಿಗರು: ಬಿಜೆಪಿ ಆಕ್ರೋಶ


ಟಿಕೆಟ್ ಘೋಷಣೆಯಿಂದ ಶಿವಕುಮಾರ್-ಸಿದ್ದರಾಮಯ್ಯ ನಡುವೆ ಮತ್ತಷ್ಟು ಅಂತರ ಹೆಚ್ಚುವ ಸಾಧ್ಯತೆ?: 
ಸಿದ್ದರಾಮಯ್ಯ ತಮ್ಮ ಬೆಂಬಲಿಗರಿಗೆ, ಶಿವಕುಮಾರ್ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುಲು ತಯಾರಿ ನಡೆಸುತ್ತಿದ್ದು, ಟಿಕೆಟ್ ಘೋಷಣೆ ಮಾಡಿದ್ರೆ ಇತರ ಆಕಾಂಕ್ಷಿಗಳ ಬಂಡಾಯದ ಬಿಸಿ, ಬೇರೆ ಪಕ್ಷಕ್ಕೆ ಬೆಂಬಲ ನೀಡುವ, ಬೇರೆ ಪಕ್ಷಕ್ಕೆ ಸೇರ್ಪಡೆ ಆಗುವ ಆತಂಕ ಹೆಚ್ಚಾಗಿದೆ.


ಒಂದೇ ಕ್ಷೇತ್ರದಲ್ಲಿ 4ರಿಂದ 15 ಮಂದಿಯಿಂದ ಟಿಕೆಟ್ ಗಾಗಿ ಅರ್ಜಿ ಸಲ್ಲಿಕೆ  ಪೈಪೋಟಿ ತಂದಿದೆ. ಯಾರಿಗೆ ಟಿಕೆಟ್ ಘೋಷಣೆ ಮಾಡಿದ್ರೂ ಬಂಡಾಯದ ಬಿಸಿ ತಾಗುವ ಆತಂಕ ಇದೆ. ನನಗೆ ಟಿಕೆಟ್ ಕೊಡಿ, ಇಲ್ಲ ನನ್ನ ಮಗನಿಗೆ ಟಿಕೆಟ್ ಕೊಡಿ ಎಂಬ ಬೇಡಿಕೆ ಕೆಲ ಹಿರಿಯ ನಾಯಕರದ್ದು, ಆದರೆ ಮತ್ತೊಂದು ಕಡೆ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಿ, ಹೊಸ, ಉತ್ಸಾಹಿಗಳಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಹೆಚ್ವಿದೆ.


ಹಲವು ಕ್ಷೇತ್ರಗಳಲ್ಲಿ ಅಪ್ಪ -ಮಕ್ಕಳು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಒಟ್ಟು 10ಮಂದಿ ಅಪ್ಪ-ಮಕ್ಕಳು ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಕೆ ಆಗಿದೆ. ಕೆಲ ಕ್ಷೇತ್ರಗಳಲ್ಲಿ ನಾನೇ ಅಭ್ಯರ್ಥಿ ಎಂದು ಕೆಲ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣಾ ಚಟುವಟಿಕೆ ಶುರು ಮಾಡ್ತಿದ್ದಾರೆ. ಇದರಿಂದ ರಾಜ್ಯ ಕೈ ನಾಯಕರಿಗೆ ಪೀಕಲಾಟ ಹೆಚ್ಚಾಗಿದೆ.


ಇದನ್ನೂ ಓದಿ- ಮಗುವಿಗೆ ಕುಮಾರಸ್ವಾಮಿ ಎಂದು ನಾಮಕರಣ ಮಾಡಿದ ಹೆಚ್ಡಿಕೆ


ಒಟ್ಟಾರೆ, ಬಣ ರಾಜಕೀಯದ ಪೈಪೋಟಿ ಮುನ್ನೆಲೆಗೆ ಬಂದಿದ್ದು ಪಕ್ಷದ ಪ್ರಭಾವಿ ನಾಯಕರುಗಳು ತಮ್ಮ ಬೆಂಬಲಿಗರಿಗೇ ಟಿಕೆಟ್ ಕೊಡಿಸಲು ದೊಡ್ಡ ಲಾಬಿ ಖಚಿತವಾಗಿದೆ. ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡಿ, ಪಕ್ಷ ಸಂಘಟನೆ ಮಾಡಿರುವವರಿಗೆ ಟಿಕೆಟ್ ನೀಡುವುದು ಸೂಕ್ತ ಎಂಬ ಚರ್ಚೆ ಕೈ ಪಾಳಯದಲ್ಲಿ ಕೇಳಿ ಬರುತ್ತಿವೆ. ಎಲ್ಲವನ್ನೂ ಅಳೆದು ತೂಗಿ, ಬಂಡಾಯದ ಬಿಸಿ ಆರಿಸಿ ಕೈ ಹೈಕಮಾಂಡ್ ಎಲ್ಲಿ, ಯಾರಿಗೆ ಟಿಕೆಟ್ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.