ಬೆಂಗಳೂರು : ಹತ್ತಾರು ಮಂದಿಗೆ ಕೆಲಸ ಕೊಟ್ಟಿದ್ದ ಕಂಪನಿ. ಪ್ರತಿನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆಸ್ತಿತ್ತು. ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದ ಸಿಬ್ಬಂದಿ ರಾತ್ರಿ ಊಟಕ್ಕೆ ಅಂತ ಹೊರ ಹೋಗಿ ಬರೋದ್ರಲ್ಲಿ ಅಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಕೆಲವೇ ಗಂಟೆಗಳಲ್ಲಿ ಇಡೀ ಗೋದಾಮನ್ನೆ ನೆಲಸಮ ಮಾಡುವಂತೆ ಮಾಡಿತ್ತು. 


COMMERCIAL BREAK
SCROLL TO CONTINUE READING

ಧಗ ಧಗ ಹೊತ್ತಿ ಉರಿಯುತ್ತಿರೊ ಬೆಂಕಿ. ನೋಡ ನೋಡ್ತಿದ್ದಂತೆ ಕುಸಿದು ಬಿದ್ದ ಪ್ಯಾಕ್ಟರಿ ಶೆಡ್ ಬೆಂಕಿ ನಂದಿಸಲು ಹರಸಾಹಸಪಡ್ತಿರೋ ಅಗ್ನಿಶಾಮಕ ಸಿಬ್ಬಂದಿ ಈ ದೃಶ್ಯ ಕಂಡು ಬಂದದ್ದು ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯಲ್ಲಿ. ರಾತ್ರಿ ಸಂಭವಿಸಿರೋ ಭಾರಿ ಅಗ್ನಿ ಅವಘಡದಿಂದ ಸೃಷ್ಟಿಯಾಗಿರೋ ಸನ್ನಿವೇಶ. ಬೆಂಕಿ ಅನಾಹುತಕ್ಕೆ ಸಿಲುಕಿ ನೆಲಕಚ್ಚಿರುವ ಈ ಗೋದಾಮು ಗಾಮಿ ಕೇರ್ ಐಜಿನ್ ಕಂಪನಿ ಎಂಬ ಟಿಶ್ಯೂ ಪೇಪರ್ ಮ್ಯಾನುಪ್ಯಾಕ್ಚರ್ ಕಂಪನಿ.


ಇದನ್ನೂ ಓದಿ:


ಸುಮಾರು ಐದಾರು ವರ್ಷಗಳಿಂದೆ ತೆರೆದಿದ್ದ ಕಂಪನಿ ನೂನಾರು ಜನಕ್ಕೆ ಕೆಲಸ ಕೊಟ್ಟಿತ್ತು. ಲಕ್ಷಾಂತರ ರೂಪಾಯಿ ವಹಿವಾಟು ನಡೆಸ್ತಿತ್ತು. ಇದರ ಮಧ್ಯೆ ರಾತ್ರಿ 9 ಗಂಟೆ ಸುಮಾರಿಗೆ ಗೋಡನ್ ನಲ್ಲಿ ಕೆಲಸ‌ ಮಾಡ್ತಿದ್ದ ಸಿಬ್ಬಂದಿ ಊಟಕ್ಕೆಂದು ಹೊರ ಹೋಗಿದ್ದ ವೇಳೆ ದಿಢೀರ್ ಅಂತ ಗೋಡನ್ ಒಳಗೆ ಬೆಂಕಿ‌ ಕಾಣಿಸಿಕೊಂಡಿದೆ.‌ಸಣ್ಣ ಪ್ರಮಾಣದಲ್ಲಿ‌ ಕಾಣಿಸಿಕೊಂಡ ಬೆಂಕಿ ಬೆಂಕಿ ಕೆಲವೇ ನಿಮಿಷಗಳಲ್ಲಿ ಇಡೀ ಗೋದಾಮನ್ನ ಆವರಿಸಿತ್ತು.


ಕೂಡಲೇ ಅಲ್ಲಿನ ಸಿಬ್ಬಂದಿ ಕಂಪನಿ‌ ಮಾಲೀಕರಿಗೆ ಹಾಗೂ‌ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದ ಸ್ಥಳಕ್ಕೆ 15ಕ್ಕೂ ಹೆಚ್ಚು ವಾಹನಗಳಲ್ಲಿ ಧಾವಿಸಿದ ಅಗ್ನಿ‌ಶಾಮಕ‌ ಸಿಬ್ಬಂದಿ‌ ಬೆಂಕಿ‌ ನಂದಿಸುವ ಕಾರ್ಯಕ್ಕಿಳಿದ್ರು. ಆದ್ರೆ ಗೋದಾಮಿನ ಒಳಗೆ ಪ್ರವೇಶ ಮಾಡಲು ಸಾಧ್ಯವಾಗದ ಹಿನ್ನೆಲೆ ಜೆಸಿಬಿ ಸಹಾಯದಿಂದ ಗೋಡೌನ್ ನ ಗೋಡೆಗಳನ್ನ ತೆರವು ಮಾಡಿ ಕಾರ್ಯಾಚರಣೆ ಆರಂಭಿಸಿದ್ರು. ಹಾಗೇ ಮುಂಜಾನೆ 8ಗಂಟೆ ವರೆಗೂ ಕಾರ್ಯಾಚರಣೆ ಬಳಿಕ‌ ಬೆಂಕಿ‌ ನಂದಿಸುವಲ್ಲಿ ಅಗ್ನಿಶಾಮಕ‌ಸಿಬ್ಬಂದಿ ಯಶಸ್ವಿಯಾಗಿದ್ದಾರೆ.


ಇದನ್ನೂ ಓದಿ:


ಇನ್ನು ಘಟನೆಯೂ ಮೇಲ್ನೊಟಕ್ಕೆ ಶಾರ್ಟ್ ಸೆರ್ಕ್ಯೂಟ್ ನಿಂದ ಸಂಭವಿಸಿದೆ ಎಂದು ತಿಳಿದು ಬಂದಿದ್ದು , ಕಚೇರಿ, ತಯಾರಿಕ ಘಟಕದಲ್ಲಿದ್ದ ಕಂಪ್ಯೂಟರ್ಸ್, ಯಂತ್ರೋಪಕರಣಗಳು, ಕೆಮಿಕಲ್ಸ್, ಕಚ್ಚಾ ವಸ್ತುಗಳು ಸೇರಿದಂತೆ ಕೋಟ್ಯಾಂತರ ರೂಪಾಯಿ‌ ಮೌಲ್ಯದ ಬೆಂಕಿಯಲ್ಲಿ ಬೆಂದು ಬೂದಿಯಾಗಿವೆ. ಇನ್ನು ಘಟನೆಗೆ ಸಂಬಂಧಿಸಿದ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಗೆ ನಿಖರ ಕಾರಣ ಏನು ಎಂಬುದನ್ನ ಪತ್ತೆಹಚ್ಚಲು ತನಿಖೆ ಕೈಗೊಂಡಿದ್ದಾರೆ.