ಬೆಂಗಳೂರು : ಇನ್ನೇನು ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಗಣೇಶನನ್ನು ಕೂರಿಸಲು ಎಲ್ಲೆಡೆ ಭರದ ಸಿದ್ದತೆ ನಡೆಯುತ್ತಿದೆ. ಎರಡು ವರ್ಷ ಕರೋನಾ ಕಾರಣ ಹಬ್ಬಗಳು ಕಾರಣ ಸಪ್ಪೆಯಾಗಿದ್ದ ಈ ಬಾರಿ ಸಾರ್ವಜನಿಕರು ಕೂಡಾ ಭಾರೀ ಕುತೂಹಲದಿಂದ ಇದ್ದಾರೆ. ಆದರೆ ಬೆಂಗಳೂರಿನಲ್ಲಿ  ಗಣೇಶ ಕೂರಿಸಬೇಕಾದರೆ, ಈ ಬಾರಿ ಆರು ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು. 


COMMERCIAL BREAK
SCROLL TO CONTINUE READING

ಈ ಬಾರಿ ಗಣೇಶ ಕೂರಿಸಬೇಕಾದರೆ ಒಂದಲ್ಲಾ ಎರಡಲ್ಲ ಒಟ್ಟು ಆರು ಇಲಾಖೆಗಳ ಅನುಮತಿ ಬೇಕೆ ಬೇಕು. ಈ ಇಲಾಖೆಗಳು ಅನುಮತಿ ನೀಡುವುದರ ಜೊತೆಗೆ ಸಾಕಷ್ಟು ಷರತ್ತುಗಳನ್ನೂ ಕೂಡಾ ವಿಧಿಸಿದೆ. ಈ ಎಲ್ಲಾ ಷರತ್ತುಗಳನ್ನು ಕೂಡಾ ಆಯೋಜಕರು ಪಾಲಿಸಬೇಕಾಗುತ್ತದೆ. ಹಾಗಿದ್ದರೆ ಗಣೇಶ ಕೂರಿಸಬೇಕಾದರೆ ಆಯೋಜಕರು ಯಾವ ಇಲಾಖೆಗಳ ಅನುಮತಿ ಪಡೆಯಬೇಕು? ಆ ಇಲಾಖೆಗಳು ವಿಧಿಸಿರುವ ಷರತ್ತುಗಳು ಯಾವುವು ನೋಡೋಣ.


ಇದನ್ನೂ ಓದಿ : ಸೆಪ್ಟೆಂಬರ್ 12 ರಿಂದ 10 ದಿನಗಳ ಕಾಲ ರಾಜ್ಯ ವಿಧಾನಮಂಡಲ ಅಧಿವೇಶನ


ಈ ವರ್ಷ ಗಣೇಶ ಕೂರಿಸಬೇಕಾದರೆ ಪೊಲೀಸ್ ಇಲಾಖೆ, ಬಿಬಿಎಂಪಿ, ಕಂದಾಯ, ಬೆಸ್ಕಾಂ, ಅಗ್ನಿಶಾಮಕ ಜೊತೆಗೆ ಸಂಚಾರಿ ಪೊಲೀಸರ ಅನುಮತಿಯನ್ನು  ಕಡ್ಡಾಯವಾಗಿ ಪಡೆಯಲೇಬೇಕು. ಈ ಆರು ಇಲಾಖೆಯಲ್ಲಿ ಯಾವುದಾದರೂ ಒಂದು ಇಲಾಖೆ ಅನುಮತಿ ನಿರಾಕರಣೆ ಮಾಡಿದರೂ ಗಣೇಶ  ಕೂರಿಸುವುದು ಸಾಧ್ಯವಾಗುವುದಿಲ್ಲ. 


ಯಾವ ಇಲಾಖೆಗಳ ಅನುಮತಿ ಬೇಕು  ಮತ್ತು  ಹಾಕಿರುವ ಷರತ್ತುಗಳು ಯಾವುವು ? : 
ಪೊಲೀಸ್ ಇಲಾಖೆ : 
-ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವ ಮುನ್ನ ಪೊಲೀಸ್ ಇಲಾಖೆ ಅನುಮತಿ ಕಡ್ಡಾಯ
- ಅನುಮತಿ ಕೋರಿ ಅರ್ಜಿ ಹಾಕಿದವರ ಪೂರ್ವಾಪರ ಪರಿಶೀಲನೆ
-ಈ ಹಿಂದೆ ಯಾವುದಾದರೂ ಕ್ರಿಮಿನಲ್ ಕೇಸ್ ಗಳು ಇದ್ದರೇ ಅನುಮತಿ ಇಲ್ಲ
-ಜೊತೆಗೆ ಏನೇ ಸಮಸ್ಯೆ ಆದರೂ ನಾನೇ ಜವಾಬ್ದಾರಿ ಎಂದು ಬಾಂಡ್ ಬರೆದುಕೊಡಬೇಕು
-ಮುಂದಿನ ಆರು ತಿಂಗಳವರೆಗೂ ಯಾವುದೇ ಕ್ರೈಂನಲ್ಲಿ ಭಾಗಿಯಾಗುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು
ಈ  ಎಲ್ಲಾ  ಷರತ್ತುಗಳಿಗೆ ಒಪ್ಪ್ಪಿದರೆ ಮಾತ್ರ ಪೊಲೀಸ್ ಇಲಾಖೆಯಿಂದ ಅನುಮತಿಸಿಗಲಿದೆ 


ಬೆಸ್ಕಾಂ : 
-ಗಣೇಶ ಇಡೋ ಜಾಗದಲ್ಲಿ ಯಾವುದೇ ಟ್ರಾನ್ಸ್ ಫಾರ್ಮರ್ ಇರಬಾರದು
-ಗಣೇಶ ಕೂರಿಸುವ ಜಾಗದಲ್ಲಿ ಮೇಲೆ ವಿದ್ಯುತ್ ವೈರ್ ಹೋಗಿರಬಾರದು
-ಮೆರವಣಿಗೆ ವೇಳೆ ಯಾವುದೇ ವಿದ್ಯುತ್ ವೈರ್ ತಾಕೋ ರೀತಿ ಪಲ್ಲಕ್ಕಿ ಇರಕೂಡದು
-ಮೆರವಣಿಗೆ ರೂಟ್ ಮ್ಯಾಪ್ ಮೊದಲೇ ಕೊಡಬೇಕು


ಇದನ್ನೂ ಓದಿ : Today Vegetable Price: ಇಷ್ಟೊಂದು ಏರಿಕೆಯಾಯ್ತಾ ತರಕಾರಿಗಳ ಬೆಲೆ? ಇಲ್ಲಿದೆ ನೋಡಿ ಬೆಲೆ ವಿವರ


ಕಂದಾಯ ಹಾಗೂ ಬಿಬಿಎಂಪಿ : 
-ಗಣೇಶ ಇಡುವ ಜಾಗ ಬಿಬಿಎಂಪಿಗೆ ಸೇರಿದದ್ದರೆ ಬಿಬಿಎಂಪಿ ಅನುಮತಿ ಕಡ್ಡಾಯ
-ಕಂದಾಯ ಇಲಾಖೆಗೆ ಸೇರಿದದ್ದರೆ ಕಂದಾಯ ಇಲಾಖೆಯ ಅನುಮತಿ ಕಡ್ಡಾಯ
-ರಾಸಾಯನಿಕ ಬಣ್ಣ, ಥರ್ಮಕೋಲ್, ಪಿಓಪಿ ಗಣೇಶನಿಗೆ ಅನುಮತಿ ಇಲ್ಲ
-ದೊಡ್ಡ ಗಾತ್ರದ ಗಣೇಶನ ಇಡುವುದಾದರೆ ಪಾಲಿಕೆ‌ ಗುರುತಿಸುವ ಜಾಗದಲ್ಲೇ  ವಿಸರ್ಜನೆ ಮಾಡಬೇಕು 


ಸಂಚಾರಿ ಪೊಲೀಸರು ಹಾಗೂ ಅಗ್ನಿಶಾಮಕ : 
-ಗಣೇಶ ಪ್ರತಿಷ್ಠಾಪನೆ ಮಾಡುವುದರಿಂದ ಸಂಚಾರಕ್ಕೆ ತೊಂದರೆ ಆಗಬಾರದು
- ಗಣೇಶನ ಪೂಜೆಗೆ ಅಂತ ಬರುವವರಿಗೆ ಪಾರ್ಕಿಂಗ್ ಸ್ಥಳ ಇರಬೇಕು
-ರಸ್ತೆಯಲ್ಲಿ ಪಾರ್ಕಿಂಗ್ ಮಾಡಿದರೆ ಆಯೋಜಕರ ಮೇಲೆ ಕೇಸ್
-ಜೊತೆಗೆ ಅಗ್ನಿಶಾಮಕ ಇಲಾಖೆಯಿಂದಲೂ ಅನುಮತಿ ಸಹ ಕಡ್ಡಾಯ
-ಯಾವುದೇ ಬೆಂಕಿ ಅವಘಡ ಸಂಭವಿಸಿದರೆ ನಂದಿಸುವ ಸೌಕರ್ಯಗಳಿರಬೇಕು 
-ಏನೆಲ್ಲಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವುದನ್ನು ಮೊದಲೇ ಹೇಳಬೇಕು.
 
 ಇನ್ನು ಮೇಲೆ ತಿಳಿಸಲಾದ ಇಲಾಖೆಯ ಅನುಮತಿ ಪಡೆಯದೆ ಗಣೇಶ ಕೂರಿಸಿದರೆ  ಆಯೋಜಕರ ವಿರುದ್ದ ದೂರು ದಾಖಲಿಸಲಾಗುವುದು. ಹಾಗಂತ ಅನುಮತಿ ಪಡೆದು ನಿಯಮ ಉಲ್ಲಂಘನೆ ಮಾಡಿದದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.