Today Weather Update 31-05-2023: ಮೇ-ಜೂನ್ ಅತ್ಯಂತ ಬೇಸಿಗೆಯ ತಿಂಗಳು ಎಂದು ಪರಿಗಣಿಸಲಾಗಿದೆ ಆದರೆ ಈ ಬಾರಿ ಹವಾಮಾನವು ವಿಜ್ಞಾನಿಗಳನ್ನು ಆಶ್ಚರ್ಯಗೊಳಿಸಿದೆ. ಮಾರ್ಚ್ ನಂತರ, ಮೇ ತಿಂಗಳೂ ಸಹ ಹಿತಕರವಾದ ವಾತಾವರಣದೊಂದಿಗೆ ಕೊನೆಗೊಳ್ಳುತ್ತಿದೆ. ವೆಸ್ಟರ್ನ್ ಡಿಸ್ಟರ್ಬನ್ಸ್‌ ನಿಂದಾಗಿ, ಕಳೆದ 2 ದಿನಗಳಿಂದ ಬಲವಾದ ಗಾಳಿಯೊಂದಿಗೆ ಭಾರಿ ಮಳೆಯಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ತಿಂಗಳಾಂತ್ಯದ ರಾಶಿಫಲ: ಇಂದು ಈ ರಾಶಿಗಳಿಗೆ ಭಾರೀ ಯಶಸ್ಸಿನ ದಿನ- ಧನವೃದ್ಧಿಯೊಂದಿಗೆ ಗೌರವ ಸಿದ್ಧಿ!


ಸದ್ಯ ಮಳೆಯ ಕಾರಣದಿಂದ ಮಕ್ಕಳಿಗೆ ಬೇಸಿಗೆ ರಜೆಯನ್ನು ಎಂಜಾಯ್ ಮಾಡಲು ಆಗುತ್ತಿಲ್ಲ. ಹೀಗಾಗಿ ಮನೆಯಲ್ಲಿಯೇ ಕುಳಿತುಕೊಂಡು ರಜಾದಿನಗಳನ್ನು ಆನಂದಿಸುತ್ತಿದ್ದಾರೆ. ಇನ್ನೊಂದೆಡೆ ಹವಾಮಾನ ಇಲಾಖೆಯು ಮುಂದಿನ 5 ದಿನಗಳ ಹವಾಮಾನವನ್ನು ಬಿಡುಗಡೆ ಮಾಡಿದೆ.


ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ಪಶ್ಚಿಮ ಹಿಮಾಲಯದಲ್ಲಿ ಸಕ್ರಿಯವಾಗಿರುವ ವೆಸ್ಟರ್ನ್ ಡಿಸ್ಟರ್ಬನ್ಸ್ ಅದರ ಉತ್ತುಂಗದಲ್ಲಿದೆ. ಚತ್ತೀಸ್‌ ಗಢ ಮತ್ತು ನೈಋತ್ಯ ರಾಜಸ್ಥಾನದ ಮೇಲೂ ಚಂಡಮಾರುತದ ಪರಿಚಲನೆ ಇದೆ. ಈ ಕಾರಣದಿಂದಾಗಿ, ದೇಶದಾದ್ಯಂತ ಗುಡುಗು ಮತ್ತು ಮಳೆಯ ಅವಧಿಯು ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ, ಪಶ್ಚಿಮ ಹಿಮಾಲಯ, ಪಂಜಾಬ್, ಹರಿಯಾಣ, ತೆಲಂಗಾಣ, ಗುಜರಾತ್, ಆಂಧ್ರಪ್ರದೇಶ, ಮಧ್ಯ ಮಹಾರಾಷ್ಟ್ರ, ಕರ್ನಾಟಕ ಮತ್ತು ಪಶ್ಚಿಮ ರಾಜಸ್ಥಾನಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ.


ದೆಹಲಿ-ಎನ್‌ ಸಿ ಆರ್ ಭಾಗದಲ್ಲಿ ಮಂಗಳವಾರ ಸಂಜೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆಯ ವೇಳೆಗೆ ಜೋರು ಗಾಳಿಯೊಂದಿಗೆ ಧಾರಾಕಾರ ಮಳೆ ಸುರಿದಿದ್ದು, ವಾತಾವರಣ ಆಹ್ಲಾದಕರವಾಗಿತ್ತು. ಇದಾದ ಬಳಿಕ ತಡರಾತ್ರಿ ಮತ್ತೆ ಗುಡುಗು ಸಹಿತ ಮಳೆ ಸುರಿದಿದೆ. ಈ ಮಳೆಯಿಂದಾಗಿ ಹಲವೆಡೆ ನೀರು ತುಂಬಿಕೊಂಡಿದ್ದು, ಬಿಸಿಲಿನ ತಾಪ ತಗ್ಗಿದ್ದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಛತ್ತೀಸ್‌ ಗಢ, ರಾಜಸ್ಥಾನ, ಒಡಿಶಾ, ಪಶ್ಚಿಮ ಬಂಗಾಳ, ನಿಕೋಬಾರ್ ದ್ವೀಪಗಳು, ತಮಿಳುನಾಡು ಮತ್ತು ಅಸ್ಸಾಂನಲ್ಲಿ ಒಂದೆರಡು ಸ್ಥಳಗಳಲ್ಲಿ ಲಘು ಮಳೆಯಾಗಿದೆ.


ಮುಂದಿನ 5 ದಿನಗಳ ಕಾಲ ಹೀಗಿರಲಿದೆ ವಾತಾವರಣ:


ಏಜೆನ್ಸಿ ಪ್ರಕಾರ, ಮುಂದಿನ 5 ದಿನಗಳಲ್ಲಿ ದೆಹಲಿ-ಎನ್‌ ಸಿ ಆರ್ ಸೇರಿದಂತೆ ಉತ್ತರ ಭಾರತದ ಜನರಿಗೆ ಹವಾಮಾನವು ಅನುಕೂಲಕರವಾಗಿರುತ್ತದೆ. ಮುಂದಿನ 24 ಗಂಟೆಗಳ ಬಗ್ಗೆ ಮಾತನಾಡುವುದಾದರೆ, ದೆಹಲಿ-ಎನ್‌ ಸಿ ಆರ್, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಹಲವು ಭಾಗಗಳಲ್ಲಿ ಬಲವಾದ ಗಾಳಿಯೊಂದಿಗೆ ಲಘು ಮಳೆಯಾಗಬಹುದು. ದಕ್ಷಿಣ ಕರ್ನಾಟಕ, ರಾಜಸ್ಥಾನ, ಕರಾವಳಿ ಆಂಧ್ರಪ್ರದೇಶ ಮತ್ತು ಪಶ್ಚಿಮ ಹಿಮಾಲಯದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಹಿಮಾಲಯದ ಎತ್ತರದ ಪರ್ವತ ಪ್ರದೇಶಗಳಲ್ಲಿ ಹಿಮಪಾತವೂ ಆಗಬಹುದು.


ಇದನ್ನೂ ಓದಿ: Surya Gochar 2023: ಈ ರಾಶಿಗಳ ಅದೃಷ್ಟವನ್ನು ದೀಪದಂತೆ ಬೆಳಗುವನು ಸೂರ್ಯದೇವ! ಅಪಾರ ಧನಯೋಗ; ಕೀರ್ತಿ-ಖ್ಯಾತಿ ಪ್ರಾಪ್ತಿ!


ಹವಾಮಾನ ತಜ್ಞರ ಪ್ರಕಾರ, ಪಾಶ್ಚಿಮಾತ್ಯ ಅಡಚಣೆಯಿಂದಾಗಿ ಉತ್ತರ ಭಾರತದ ಬಹುತೇಕ ಭಾಗಗಳು ಮುಂದಿನ 3-4 ದಿನಗಳವರೆಗೆ ಮೋಡ ಕವಿದ ವಾತಾವರಣದಿಂದ ತುಂಬಿರುತ್ತದೆ. ಈ ಸಮಯದಲ್ಲಿ, ಗುಡುಗು ಸಹಿತ ಮಳೆ ಸುರಿಯುತ್ತದೆ. ಬಿಸಿಲಿನ ತಾಪದಿಂದ ಜನರಿಗೆ ಮುಕ್ತಿ ಸಿಗಲಿದೆ. ಆದರೆ, ಜೂನ್ 4ರ ನಂತರ ಮತ್ತೆ ಬಿಸಿಲಿನ ಬೇಗೆ ಆರಂಭವಾಗಲಿದ್ದು, ಇದರಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ