ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai)ಚೊಚ್ಚಲ ಬಜೆಟ್ ಸಿದ್ಧತೆಗಳು ಮುಗಿದಿದ್ದು, ನಾಳೆ ರಾಜ್ಯ ಸರ್ಕಾರದ ಆರ್ಥಿಕ ವರ್ಷ 2022-23 ರ ಬಜೆಟ್ ಮಂಡನೆ ಮಾಡಲಿದ್ದಾರೆ. ಆದರೆ ಆರ್ಥಿಕ ಇಲಾಖೆ ಹೇಳುವ ಪ್ರಕಾರ ಕೇಂದ್ರ ಸರ್ಕಾರ (Central Government) ರಾಜ್ಯಕ್ಕೆ ನೀಡಬೇಕಾದ ಜಿ ಎಸ್ ಟಿ ಪರಿಹಾರ ಮತ್ತು ಕೇಂದ್ರ ಅನುದಾನ ಸಾವಿರಾರು ಕೋಟಿ ಬಾಕಿ ಇರಿಸಿಕೊಂಡಿದೆ.  


COMMERCIAL BREAK
SCROLL TO CONTINUE READING

ಜಿಎಸ್ ಟಿ ಪರಿಹಾರ ಪಾವತಿ ಬಾಕಿ ₹ 7000 ಕೋಟಿ:
GST ಜಾರಿ ಆದ ಸಂದರ್ಭದಿಂದಲೂ ರಾಜ್ಯ ಸರ್ಕಾರ ಕೇಂದ್ರ ಹಣಕಾಸು ಇಲಾಖೆಯ ಕದ  ತಟ್ಟುತ್ತಲೇ ಇದೆ ಹೊರತು ಈವರೆಗೆ ಸಮಾಧಾನಕರವಾದ ಪರಿಹಾರ ರಾಜ್ಯಕ್ಕೆ ಸಿಕ್ಕಿಲ್ಲ. ಈ ನಡುವೆ ರಾಜ್ಯ ಸರ್ಕಾರ ಕಳೆದ ಎರಡು ವರ್ಷದಿಂದ  ಜಿಎಸ್ ಟಿ ಪರಿಹಾರವಾಗಿ ಸಾಲ ಪಡೆಯುವ ವಿಶೇಷ ಅವಕಾಶವನ್ನು ಬಳಸಿಕೊಂಡಿದೆ. 


ಇದನ್ನೂ ಓದಿ : ಶಿಕ್ಷಣ ಕ್ಷೇತ್ರವನ್ನು ಕುಲಗೆಡಿಸಿದ ಕುಖ್ಯಾತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ: ಬಿಜೆಪಿ


ವಾಣಿಜ್ಯ ಇಲಾಖೆ ಮಾಹಿತಿ ಪ್ರಕಾರ 2021-22ರಲ್ಲಿ ಜಿಎಸ್ ಟಿ ಪರಿಹಾರ ಹಾಗೂ ಸಾಲದ ರೂಪದಲ್ಲಿ 18,000 ಕೋಟಿ ಸ್ವೀಕರಿಸಿದೆ. ಇನ್ನೂ 7,000 ಕೋಟಿ ಪಾವತಿಯಾಗದೇ ಬಾಕಿ ಉಳಿದುಕೊಂಡಿದೆ. ಒಟ್ಟು 11,000 ಕೋಟಿ ಜಿಎಸ್ ಟಿ ನಷ್ಟ ಪರಿಹಾರ ಹಾಗೂ ವಿಶೇಷ ಸಾಲದ ರೂಪದ ಹಣ ಬಾಕಿ ಉಳಿದುಕೊಂಡಿದೆ.


ಕೇಂದ್ರದ ಅನುದಾನಗಳೂ ಪಾವತಿಯಾಗದೆ 7500 ಕೋಟಿ ಬಾಕಿ  :
ರಾಜ್ಯ ಸರ್ಕಾರಗಳು (State Government) ತನ್ನ ಹಣಕಾಸು ನಿರ್ವಹಣೆಗೆ ನೆಚ್ಚಿಕೊಂಡಿರುವುದು ಕೇಂದ್ರದ ಅನುದಾನಗಳನ್ನು. ಕೇಂದ್ರದ ಅನುದಾನವೂ ಬಿಡುಗಡೆಯಾಗದೇ 7,851 ಬಾಕಿ ಉಳಿದಿದೆ. 


ಕೇಂದ್ರದ ತೆರಿಗೆಗಳಲ್ಲಿ ರಾಜ್ಯದ ಪಾಲಿನ ರೂಪದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ 2021-22ರಲ್ಲಿ 24,273 ಕೋಟಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಈವರೆಗೆ ರಾಜ್ಯ ಸರ್ಕಾರ ಸ್ವೀಕಾರ ಮಾಡಿರುವುದು 16,422 ಕೋಟಿ ಮಾತ್ರ. ಅಂದರೆ ಇನ್ನೂ 7,851 ಕೋಟಿ ಬಾಕಿ ಉಳಿದುಕೊಂಡಿದೆ. 


ಇದನ್ನೂ ಓದಿ : ರಾಜ್ಯದ ಮೊದಲ ವೈ-ಫೈ ಗ್ರಾಮ ಮೈಸೂರಿನ ರಮ್ಮನಹಳ್ಳಿ; 5 ಡಿಫರೆಂಟ್ ಪ್ಲ್ಯಾನ್ಸ್ ಉಂಟು ಇಲ್ಲಿ


2020-21ರಲ್ಲಿ 28,591 ಕೋಟಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಬಿಡುಗಡೆ ಮಾಡಿದ್ದು ₹21,694 ಕೋಟಿ . ಅಂದಾಜಿಗಿಂತ 6,897 ಕೋಟಿ ಪಾವತಿಯಾಗದೆ ಬಾಕಿ ಉಳಿದುಕೊಂಡಿದೆ‌. 


ಇತ್ತ ಕೇಂದ್ರದಿಂದ ವಿವಿಧ ಯೋಜನೆಗಳಿಗೆ 2021-22 ಸಾಲಿನಲ್ಲಿ 28,245 ಕೋಟಿ ಅನುದಾನ ಬಿಡುಗಡೆಯ ಅಂದಾಜು ಮಾಡಲಾಗಿತ್ತು. ಆದರೆ ಈವರೆಗೆ ಅನುದಾನ ಬಿಡುಗಡೆ ಮಾಡಿರುವುದು 19,737 ಕೋಟಿ.


ಒಟ್ಟಾರೆ ಕೇಂದ್ರ ಸರ್ಕಾರದ ನೆರವಿಗೆ ಎಷ್ಟೇ ಅಂಗಲಾಚಿದರೂ ರಾಜ್ಯ ಸರ್ಕಾರದ ನೋವಿಗೆ ಕೇಂದ್ರ ಕಿವಿಗೊಡುತ್ತಿಲ್ಲ. ಈ ಹಿನ್ನಲೆಯಲ್ಲಿ ಕಳೆದ ಎರಡು ಬಜೆಟ್ ನಲ್ಲೂ (Budget) ಅರ್ಥಿಕ ಇಲಾಖೆ ಎಷ್ಟೇ ಹರಸಾಹಸ ಪಟ್ಟರೂ ಯೋಜನೆಗಳಿಗೆ ಪೂರ್ಣ ಪ್ರಮಾಣದಲ್ಲಿ ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ. ಈ ಬಾರಿಯೂ ಆರ್ಥಿಕ ಸಂಕಷ್ಟದ ನಡುವೆ ಬಜೆಟ್ ಮಂಡನೆ ಮಾಡಬೇಕಿದೆ (Karnataka budget) ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪ್ರತಿ ಯೋಜನೆಗೆ ಅನುದಾನ ನೀಡುವಾಗ ಕೈ ಹಿಸುಕಿಕೊಳ್ಳುವಂತಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.