ರಾಜ್ಯದ ಮೊದಲ ವೈ-ಫೈ ಗ್ರಾಮ ಮೈಸೂರಿನ ರಮ್ಮನಹಳ್ಳಿ; 5 ಡಿಫರೆಂಟ್ ಪ್ಲ್ಯಾನ್ಸ್ ಉಂಟು ಇಲ್ಲಿ

First Wi-Fi village in Karnataka: ‘ಸಾರ್ವಜನಿಕ ದತ್ತಾಂಶ ಕೇಂದ್ರ’ವನ್ನು ಉದ್ಘಾಟನೆ ಮಾಡಿದ ಬಿಎಸ್‌ಎನ್‌ಎಲ್‌ ಮಂಡಳಿಯ ನಿರ್ದೇಶಕ ವಿವೇಕ್‌ ಬನ್ಸಾಲ್‌, 'ವೈ-ಫೈ ಸೌಲಭ್ಯ ಈಗಾಗಲೇ ಹಳ್ಳಿಗಳನ್ನು ತಲುಪಿದೆ. ಆದರೆ ಸಂಪೂರ್ಣವಾಗಿ ಹಳ್ಳಿಗೇ ವೈ-ಫೈ ಸೌಲಭ್ಯ ಕಲ್ಪಿಸಿರುವುದು ಇದೇ ಮೊದಲು. ಈಗ ರಮ್ಮನಹಳ್ಳಿಯೇ ಮಾದರಿಯಾಗಿದ್ದು ಇದೇ ರೀತಿ ಇತರೆ ಗ್ರಾಮಗಳನ್ನೂ ವೈ-ಫೈ ಗ್ರಾಮಗಳನ್ನಾಗಿ ಮಾಡಲಾಗುವುದು' ಎಂದು ಹೇಳಿದ್ದಾರೆ.

Written by - Yashaswini V | Last Updated : Mar 3, 2022, 11:15 AM IST
  • ರಮ್ಮನಹಳ್ಳಿಗೆ ರಾಜ್ಯದ ಮೊದಲ ಪಬ್ಲಿಕ್​ ವೈ-ಫೈ ಕೇಂದ್ರ ಎಂಬ‌ ಖ್ಯಾತಿ
  • ಗ್ರಾಮದಲ್ಲಿ ಒಟ್ಟು 32 ಕಡೆ ವೈ-ಫೈ ಹಾಟ್‌ ಸ್ಟಾಟ್ ಗಳು ಲಭ್ಯ
  • ಇಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯಂತ ವೇಗದ ಇಂಟರ್‌ನೆಟ್‌ ಸೌಲಭ್ಯ
ರಾಜ್ಯದ ಮೊದಲ ವೈ-ಫೈ ಗ್ರಾಮ ಮೈಸೂರಿನ ರಮ್ಮನಹಳ್ಳಿ; 5 ಡಿಫರೆಂಟ್ ಪ್ಲ್ಯಾನ್ಸ್ ಉಂಟು ಇಲ್ಲಿ title=
First Wi-Fi Village in Karnataka

ಮೈಸೂರು: ಇದು ಹೇಳಿಕೇಳಿ ಡಿಜಿಟಲ್ (Digital) ಯುಗ. ಡಿಜಿಟಲ್ ದುನಿಯಾ ನಡೆಯಬೇಕೆಂದರೆ ಇಂಟರ್ನೆಟ್ (Internet) ಅತ್ಯಗತ್ಯ. ಇಂದಿನ ಬಹುತೇಕ ಕೆಲಸಗಳು ಇಂಟರ್ನೆಟ್ ಆಧಾರಿತವೇ ಆಗಿವೆ. ಹಾಗಾಗಿಯೇ ಹಳ್ಳಿ ಹಳ್ಳಿಗೂ ಇಂಟರ್ನೆಟ್ ಕೊಡಬೇಕಾದ ಪರಿಸ್ಥಿತಿಯೂ ಬಂದೊದಗಿದೆ. ಈ‌ ಹಿನ್ನಲೆಯಲ್ಲಿ ಮೈಸೂರು ತಾಲೂಕಿನ ರಮ್ಮನಹಳ್ಳಿ ಮಾದರಿ. ರಮ್ಮನಹಳ್ಳಿಗೆ ಬಿಎಸ್‌ಎನ್‌ಎಲ್ ((BSNL)) ಸಾರ್ವಜನಿಕ ವೈ-ಫೈ ನೀತಿಯಡಿ ಸಂಪೂರ್ಣವಾಗಿ ವೈ ಫೈ (Wi-Fi) ನೀಡಲಾಗಿದೆ. ಇದು ರಾಜ್ಯದ ಮೊದಲ ಪಬ್ಲಿಕ್​ ವೈ-ಫೈ (Public WiFi)  ಕೇಂದ್ರ ಎಂಬ‌ ಖ್ಯಾತಿಯನ್ನೂ ಗಳಿಸಿಕೊಂಡಿದೆ.

ಮೈಸೂರು ತಾಲೂಕಿನ ರಮ್ಮನಹಳ್ಳಿಯಲ್ಲಿ ಭಾರತ್ ಸಂಚಾರ ನಿಗಮ ನಿಯಮಿತದ (BSNL) ಕರ್ನಾಟಕ ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ದೇವೇಶ್ ಕುಮಾರ್ ಅವರು ಸಾರ್ವಜನಿಕ ವೈ-ಫೈ ನೀತಿಯಡಿ ವೈ-ಫೈ ಯೋಜನೆಯನ್ನು ಉದ್ಘಾಟನೆ ಮಾಡಿದ್ದಾರೆ. ಈ ಗ್ರಾಮದಲ್ಲಿ ಆಪ್ಟಿಕಲ್ ಫೈಬರ್ (Optical fiber) ಸಂಪರ್ಕದ ಮೂಲಕ 8 ಸಾರ್ವಜನಿಕ ದತ್ತಾಂಶ ಕೇಂದ್ರಗಳನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮದಲ್ಲಿ ಒಟ್ಟು 32 ಕಡೆ ವೈ-ಫೈ ಹಾಟ್‌ ಸ್ಟಾಟ್ ಗಳು ಕೆಲಸ ಮಾಡಲಿವೆ.‌

ಇದನ್ನೂ ಓದಿ- LPG Subsidy: ಮತ್ತೆ ಎಲ್‌ಪಿಜಿ ಸಿಲಿಂಡರ್ ಮೇಲೆ ಸಬ್ಸಿಡಿ ಆರಂಭ!

5 ಡಿಫರೆಂಟ್ ಪ್ಲ್ಯಾನ್ಸ್!

ರಮ್ಮನಹಳ್ಳಿ ಈಗ ಪೂರ್ಣ ಪ್ರಮಾಣದಲ್ಲಿ ವೈ-ಪೈ (Wi-Fi) ಗ್ರಾಮವಾಗಿದ್ದು, ಇಲ್ಲಿ 50 ಎಂಬಿಪಿಎಸ್ ವೇಗದವರೆಗೆ ಇಂಟರ್ ನೆಟ್‌ ಸಂಪರ್ಕ ಸಿಗಲಿದೆ. ರಮ್ಮನಹಳ್ಳಿಯ ಜನರು 69 ರೂಪಾಯಿಗೆ 30 ದಿನದವರೆಗೆ 30 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು.‌ ಇದಲ್ಲದೆ 9 ರೂಪಾಯಿಗೆ 1 ದಿನಕ್ಕೆ 1 ಜಿಬಿ ಡೇಟಾ ಪಡೆಯಬಹುದಾದ ಪ್ಲ್ಯಾನ್ ಕೂಡ ಇದೆ. ಇದೇ ರೀತಿಯ ಐದು ಸೇವೆಗಳು ಲಭ್ಯವಿವೆ. ವೋಚರ್ ಖರೀದಿ ಮಾಡಿದ ಬಳಿಕ ಮೊಬೈಲ್ ಅಥವ ಲ್ಯಾಪ್ ಟಾಪ್ ಗಳಿಗೆ ವೈ-ಫೈ ಸಂಪರ್ಕ ಪಡೆಯಬಹುದಾಗಿದೆ.

ಇದನ್ನೂ ಓದಿ- Electricity Bill: ಬೇಸಿಗೆಯಲ್ಲಿ ವಿದ್ಯುತ್ ಬಿಲ್ ಕಡಿಮೆ ಆಗಬೇಕೇ! ಈ ಸಲಹೆಗಳನ್ನು ಅನುಸರಿಸಿ

ರಮ್ಮನಹಳ್ಳಿಯಲ್ಲಿ ನಿರ್ಮಿಸಿರುವ ‘ಸಾರ್ವಜನಿಕ ದತ್ತಾಂಶ ಕೇಂದ್ರ’ವನ್ನು ಉದ್ಘಾಟನೆ ಮಾಡಿದ ಬಿಎಸ್‌ಎನ್‌ಎಲ್‌ ಮಂಡಳಿಯ ನಿರ್ದೇಶಕ ವಿವೇಕ್‌ ಬನ್ಸಾಲ್‌, 'ವೈ-ಫೈ ಸೌಲಭ್ಯ ಈಗಾಗಲೇ ಹಳ್ಳಿಗಳನ್ನು ತಲುಪಿದೆ. ಆದರೆ ಸಂಪೂರ್ಣವಾಗಿ ಹಳ್ಳಿಗೇ ವೈ-ಫೈ ಸೌಲಭ್ಯ ಕಲ್ಪಿಸಿರುವುದು ಇದೇ ಮೊದಲು. ವಿಶೇಷ ಎಂದರೆ ರಮ್ಮನಹಳ್ಳಿಯು ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯಂತ ವೇಗದ ಇಂಟರ್‌ನೆಟ್‌ ಸೌಲಭ್ಯವನ್ನು‌ ಗಳಿಸಿಕೊಂಡಿದೆ. ಈಗ ರಮ್ಮನಹಳ್ಳಿಯೇ ಮಾದರಿಯಾಗಿದ್ದು ಇದೇ ರೀತಿ ಇತರೆ ಗ್ರಾಮಗಳನ್ನೂ ವೈ-ಫೈ ಗ್ರಾಮಗಳನ್ನಾಗಿ ಮಾಡಲಾಗುವುದು' ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News