ಬೆಂಗಳೂರು:ಬೆಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೆ ಇದೆ. ಹೀಗಾಗಿ ಎಲ್ಲಿ ನೋಡಿದರೂ ಟ್ರಾಫಿಕ್ ಪೊಲೀಸರ ಕಣ್ಣುಗಳಿಗಿಂತ ಕ್ಯಾಮೆರಾ ಕಣ್ಣುಗಳೇ ಜಾಸ್ತಿ. ಸಣ್ಣ ವಾಯ್ಲೇಷನ್ ಮಾಡಿದ್ರು ಸಹ ಪೊಲೀಸರು ಫೈನ್ ಹಾಕುತ್ತಾರೆ.


COMMERCIAL BREAK
SCROLL TO CONTINUE READING

ಅದೆಷ್ಟೋ ಸವಾರರ ವೆಹಿಕಲ್ ಗಳ ಮೇಲೆ ಸಾವಿರಾರು ರೂಪಾಯಿ ಫೈನ್ ಬಾಕಿಯಿದೆ. ಇದೀಗ  ಸಂಚಾರಿ ನಿಯಮಗಳನ್ನ ಪಾಲಿಸದೆ  ಉಲ್ಲಂಘನೆ ಮಾಡಿ ದಂಡವನ್ನ ಬಾಕಿ ಉಳಿಸಿಕೊಂಡಿರುವ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. 


ಇದನ್ನೂ ಓದಿ: 'ಇದೇ ಮಾರ್ಚ್ 31ರೊಳಗೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ.'


ಬಾಕಿ ಉಳಿಸಿಕೊಂಡ ದಂಡವನ್ನು ಕಟ್ಟಿದರೆ ಶೇ. 50% ರಿಯಾಯಿತಿ ನೀಡಿ ಸರ್ಕಾರ ಆದೇಶ ಮಾಡಿದೆ. ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರಿಂದ ಸರ್ಕಾರಕ್ಕೆ ದಂಡ ಕಡಿತಗೊಳಿಸುವ ಕುರಿತು ಮನವಿ ಮಾಡಲಾಗಿತ್ತು. ಈ ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿ, ಕಾನೂನು‌ ಸೇವಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ನ್ಯಾ ಬಿ.ವೀರಪ್ಪರವರ ನೇತೃತ್ವದಲ್ಲಿ 27-01-23 ರಂದು ಸಭೆ ನಡೆಸಲಾಗಿತ್ತು. 


ಇದನ್ನೂ ಓದಿ:ಕೇವಲ ಗೃಹಿಣಿಯರ ಕಣ್ಣಲ್ಲಿ ಮಾತ್ರವಲ್ಲ ರೈತರ ಕಣ್ಣಲ್ಲೂ ನೀರು ತರಿಸುತ್ತಿದೆ ಈರುಳ್ಳಿ


ಇದೀಗ ಪೊಲೀಸ್ ಇಲಾಖೆ ರಾಜ್ಯಾದ್ಯಂತ ಇ ಚಲನ್ ಗಳ ಮೂಲಕ ಹಾಕಿರುವ ದಂಡದ ಮೊತ್ತದಲ್ಲಿ 50% ರಿಯಾಯಿತಿ ನೀಡಿ ಸರ್ಕಾರದ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.  ಫೆ.11ರವರೆಗೆ ಮಾತ್ರ ಈ ವಿನಾಯಿತಿ ‌ನೀಡಲಾಗಿದೆ.ದಂಡ ಭರಿಸಲಾಗದೆ ಇದ್ದವರಿಗೆ ಶೇ  50% ವಿನಾಯಿತಿ ನೀಡಿರೋದು ವಾಹನ ಸವಾರರಿಗೆ ಖುಷಿ ತಂದಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.