ಕೇವಲ ಗೃಹಿಣಿಯರ ಕಣ್ಣಲ್ಲಿ ಮಾತ್ರವಲ್ಲ ರೈತರ ಕಣ್ಣಲ್ಲೂ ನೀರು ತರಿಸುತ್ತಿದೆ ಈರುಳ್ಳಿ

ಅಕಾಲಿಕ ‌ಮಳೆಯಿಂದಾಗಿ ಈರುಳ್ಳಿ ಬೆಳೆ ಬಾರದೆ ರೈತರು ಕಂಗಾಲಾಗಿದ್ದಾರೆ. ಎಕರೆಗಟ್ಟಲೆ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆ ಕೈಸೇರದೆ ಕಂಗಾಲಾಗಿರುವ ರೈತರು ಟ್ರಾಕ್ಟರ್ ನಲ್ಲಿ ಉಳುಮೆ ಮಾಡಿಸಿ ಬೆಳೆ ನಾಶ ಪಡಿಸಿದ್ದಾರೆ. 

Written by - Yashaswini V | Last Updated : Feb 2, 2023, 11:57 AM IST
  • ಎರಡು ತಿಂಗಳ ಹಿಂದೆ ಸುರಿದ ಅಕಾಲಿಕ ಮಳೆ ರೈತನ ಬಾಳಲ್ಲಿ ಕತ್ತಲು ಆವರಿಸುವಂತೆ ಮಾಡಿದೆ.
  • ಕಷ್ಟಪಟ್ಟು ದುಡಿದು, ಪ್ರಾಣಿಗಳಿಂದ ರಕ್ಷಿಸಿದ್ದ ಬೆಳೆ ಕೈ ಸೇರದಿದ್ದರಿಂದ ಬೇರೆ ದಾರಿ ಕಾಣದ ರೈತರು ಟ್ರಾಕ್ಟರ್ ನಲ್ಲಿ ಉಳುಮೆ ಮಾಡಿಸಿ ಬೆಳೆ ನಾಶ ಪಡಿಸಿದ್ದಾರೆ.
  • 60-70 ದಿನದಲ್ಲಿ ಬರಬೇಕಿದ್ದ ಬೆಳೆ 85 ದಿನವಾದರೂ ಬಾರದಿದ್ದರಿಂದ ಎಕರೆಗಟ್ಟಲೇ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಯನ್ನು ತಾವೇ ನಾಶ ಪಡಿಸಿದ್ದಾರೆ.
ಕೇವಲ ಗೃಹಿಣಿಯರ ಕಣ್ಣಲ್ಲಿ ಮಾತ್ರವಲ್ಲ ರೈತರ ಕಣ್ಣಲ್ಲೂ ನೀರು ತರಿಸುತ್ತಿದೆ ಈರುಳ್ಳಿ  title=
Crop Loss

Onion Crop Loss: ಈರುಳ್ಳಿ ಕೇವಲ ಗೃಹಿಣಿಯರ ಕಣ್ಣಲ್ಲಿ ನೀರು ತರಿಸುತ್ತಿಲ್ಲ, ಅದನ್ನು ಬೆಳೆದ ರೈತರ ಕಣ್ಣಲ್ಲೂ ನೀರು ತರಿಸಿದ್ದು ನಂಬಿ ಬೆಳೆದಿದ್ದ ಬೆಳೆ ಬಾರದೇ ಲಕ್ಷಾಂತರ ರೂ. ನಷ್ಟವಾಗಿ ಅನ್ನದಾತರು ಕಂಗಲಾಗಿದ್ದಾರೆ.

ಚಾಮರಾಜನಗರ ತಾಲೂಕಿನ ಕೆ.ಕೆ.ಹುಂಡಿ ಗ್ರಾಮದಲ್ಲಿ ಹತ್ತರಿಂದ ಹದಿನೈದು ಮಂದಿ ರೈತರು ಸಣ್ಣ ಈರುಳ್ಳಿ ಬೆಳೆ ಬೆಳೆದು ಅಕಾಲಿಕ ‌ಮಳೆಯಿಂದ ಬೆಳೆ ಕೈಗೆ ಸಿಗದೇ ನಷ್ಟ ಅನುಭವಿಸಿ ಕೈ ಸುಟ್ಟುಕೊಂಡಿದ್ದಾರೆ.   60-70 ದಿನದಲ್ಲಿ ಬರಬೇಕಿದ್ದ ಬೆಳೆ 85 ದಿನವಾದರೂ ಬಾರದಿದ್ದರಿಂದ ಎಕರೆಗಟ್ಟಲೇ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಯನ್ನು ತಾವೇ ನಾಶ ಪಡಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಾಗಿ ಸಣ್ಣ ಈರುಳ್ಳಿ ಬೆಳೆಯಲಿದ್ದು ತಮಿಳುನಾಡು ಇಲ್ಲಿನ ರೈತರಿಗೆ ಮಾರುಕಟ್ಟೆಯಾಗಿದೆ. ಗುಂಡ್ಲುಪೇಟೆ ತಾಲೂಕಿನ‌ ಎಪಿಎಂಸಿಯಲ್ಲಿ ಬಿತ್ತನೆ ಈರುಳ್ಳಿ ತಂದು ನಾಟಿ ಮಾಡಿ ಅದನ್ನು ತಿಂಗಳುಗಟ್ಟಲೆ ಪೋಷಿಸಿದರೂ ಅಕಾಲಿಕ ಮಳೆಯಿಂದಾಗಿ ಕಾಯಿ ಕಟ್ಟದೇ ಲಕ್ಷಾಂತರ ರೂ. ಮೌಲ್ಯದ ಈರುಳ್ಳಿ ಬೆಳೆ ರೈತರ ಕೈ ಸೇರಿಲ್ಲ.

ಇದನ್ನೂ ಓದಿ- “ಸಿಡಿ ಪ್ರಕರಣದ ವಿಚಾರವಾಗಿ ರಮೇಶ್ ಜಾರಕಿಹೋಳಿ ಜೊತೆ ಮಾತಾಡುವೆ”

ಕೆ.ಕೆ.ಹುಂಡಿಯ ಒಬ್ಬೊಬ್ಬ ರೈತ 2- 5 ಲಕ್ಷ ರೂ. ಖರ್ಚು ಮಾಡಿದ್ದು ಎರಡು ತಿಂಗಳ ಹಿಂದೆ ಸುರಿದ ಅಕಾಲಿಕ ಮಳೆ ರೈತನ ಬಾಳಲ್ಲಿ ಕತ್ತಲು ಆವರಿಸುವಂತೆ ಮಾಡಿದೆ. ಹಾಗಂತ ಈ ಬೆಳೆಯನ್ನು ಹಾಗೇ ಬಿಟ್ಟರೆ ಫಸಲು ಬರಲ್ಲ, ಬೆಳೆ ನಾಶಪಡಿಸಿದರೇ ಹಣ ಬರದ ತ್ರಿಶಂಕು ಸ್ಥಿತಿ ಇಲ್ಲಿನ ರೈತರದ್ದಾಗಿದ್ದು  ಸಾಲ ತೀರಿಸಲಾಗದೇ ಕೆಲ ರೈತರು ಊರು ಬಿಟ್ಟು ಪಟ್ಟಣ ಸೇರಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ- ಹಡಪದ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆಗೆ ಸಿಎಂ ಭರವಸೆ

ಕಷ್ಟಪಟ್ಟು ದುಡಿದು, ಪ್ರಾಣಿಗಳಿಂದ ರಕ್ಷಿಸಿದ್ದ ಬೆಳೆ ಕೈ ಸೇರದಿದ್ದರಿಂದ ಬೇರೆ ದಾರಿ ಕಾಣದ ರೈತರು ಟ್ರಾಕ್ಟರ್ ನಲ್ಲಿ ಉಳುಮೆ ಮಾಡಿಸಿ ಬೆಳೆ ನಾಶ ಪಡಿಸಿದ್ದಾರೆ. ಪ್ರಸ್ತುತ ಸಣ್ಣ ಈರುಳ್ಳಿ ಪ್ರತಿ ಕೆಜಿಗೆ 35-40 ರೂ. ಇದೆ. ಆದರೆ, ಈ ರೈತರು ಹಾಕಿದ ಬೆಳೆಯೇ ಕೈಗೆ ಬರದಿದ್ದರಿಂದ ಬೆಲೆ ಇದ್ದರೂ ಏನು ಮಾಡಲಾಗದ ಅಸಹಾಯಕ ಸ್ಥಿತಿ ಇವರದ್ದಾಗಿದೆ. ಗ್ರಾಮದ ರೈತರು ಸರ್ಕಾರ ಸಹಾಯಹಸ್ತಕ್ಕೆ ಕೈ ಚಾಚುತ್ತಿದ್ದಾರೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News