ಬೆಂಗಳೂರು: ಸಿಲಿಕಾನ್ ಸಿಟಿಗೆ ಅಂಟಿದ್ದ ಜಾಮ್  ಸಿಟಿ ಎಂಬ ಪಟ್ಟ ಇತ್ತೀಚೆಗೆ ಸಡಿಲವಾದಂತೆ ಕಾಣುತ್ತಿದೆ. ಅದರಲ್ಲೂ ಸಂಚಾರ ವಿಭಾಗಕ್ಕೆ ಸ್ಪೆಷಲ್ ಕಮೀಷನರ್ ಬಂದ ಮೇಲೆ ಬೆಂಗಳೂರಿನ ಟ್ರಾಫಿಕ್ ಚಿತ್ರಣ ಬದಲಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ತಗ್ಗಿದ್ದು, ಸಂಚಾರ ಪೊಲೀಸರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಪೆಷಲ್ ಕಮೀಷನರ್ ಆದೇಶದಂತೆ ನಗರದಲ್ಲಿ ದಿನದ ಸಮಯದಲ್ಲಿ ಹೆವಿ ವೆಹಿಕಲ್ ಮೂಮೆಂಟ್ ಸ್ಟಾಪ್ ಆದ ಮೇಲೆ ಸವಾರರು ರಸ್ತೆಯಲ್ಲಿ ಟ್ರಾಫಿಕ್ ಜಂಜಾಟವಿಲ್ಲದೆ ಓಡಾಡುತ್ತಿದ್ದಾರೆ.


ಇದನ್ನೂ ಓದಿ- ಪಾರಿವಾಳ ಹಿಡಿಯಲೋದ ಮಕ್ಕಳಿಗೆ ಕರೆಂಟ್‌ ಶಾಕ್‌ - ಇಬ್ಬರು ಬಾಲಕರ ಸ್ಥಿತಿ ಚಿಂತಾಜನಕ


ಈ‌‌ ಬಗ್ಗೆ ಟ್ವಿಟರ್ ಮೂಲಕ ಸಂಚಾರ ಪೊಲೀಸರು ಮಾಹಿತಿ ನೀಡಿದ್ದು, ವಾಹನ ಸವಾರರು ಕೂಡ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ದಿನದಲ್ಲೇ ಬೆಂಗಳೂರು ಟ್ರಾಫಿಕ್ ವೀಕ್ ಎಂಡ್ ನಂತೆ ಫೀಲ್ ಆಗುತ್ತಿದೆ. ಸಿಟಿಯ ಟ್ರಾಫಿಕ್ ಈ ರೀತಿ ಕಮ್ಮಿ ಆಗುತ್ತೆ ಎಂಬ  ಕನಸು ಕೂಡ ಕಂಡಿರಲಿಲ್ಲ ಎಂದು ಜನ ಸಂಚಾರ ಪೊಲೀಸರ ಬೆನ್ನು ತಟ್ಟುತ್ತಿದ್ದಾರೆ.


ಚಿರತೆ ದಾಳಿಗೆ ಮತ್ತೊಂದು ಬಲಿ!!


ಇನ್ನೂ ಹೆವಿ ವೆಹಿಕಲ್ ಮೂಮೆಂಟ್ ಸ್ಟಾಪ್ ಆದ ಮೇಲೆ ಕೆ ಆರ್ ಮಾರ್ಕೆಟ್ ನಂತ‌ಹ ಹಾಟ್ ಆಫ್ ದ ಸಿಟಿಯಲ್ಲೂ ಸಂಚಾರ ಸಾಮಾನ್ಯವಾಗಿರುವುದು ವಿಶೇಷ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.