ಬಳ್ಳಾರಿ: ಲೋಕಸಭೆ ಸಾರ್ವತ್ರಿಕ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಜಾರಿಯಿದ್ದು, ಅಕ್ರಮ ಮದ್ಯ ಹೊಂದುವಿಕೆ, ಸಾಗಾಣಿಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 03 ಪ್ರಕರಣಗಳನ್ನು ಬುಧವಾರ ದಾಖಲಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಎನ್.ಮಂಜುನಾಥ ಅವರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಕುರುಗೋಡು ತಾಲ್ಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಮಾಹಿತಿ ಮೇರೆಗೆ ಓರ್ವ ಮನೆಯಲ್ಲಿ ಶೋಧನೆ ಮಾಡಿ, ಅಕ್ರಮವಾಗಿ ಹೊಂದಿದ್ದ 20.160 ಲೀ (ಅಂದಾಜು ಮೌಲ್ಯ ರೂ.15034) ಮದ್ಯವನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ.


ಇದನ್ನೂ ಓದಿ:ಟೀಂ ಇಂಡಿಯಾದ ಬ್ಯಾಟ್ಸ್’ಮನ್ ಶುಭ್ಮನ್ ಗಿಲ್ ಅಕ್ಕ ಪ್ರಖ್ಯಾತ ತಾರೆ! ಅಂದದಲ್ಲಿ ಪಡ್ಡೆಹೈಕ್ಳ ‘ದಿಲ್’ ಗೆದ್ದ ಈ ಸುಂದರಿ ಯಾರು ಗೊತ್ತೇ?


ಬಳ್ಳಾರಿ ನಗರದ ಬಂಡಿಹಟ್ಟಿ ರಸ್ತೆಯಲ್ಲಿ ರಸ್ತೆಗಸ್ತು ವೇಳೆ ದ್ವಿಚಕ್ರ ವಾಹನದಲ್ಲಿ 8.820 ಲೀ (ಅಂದಾಜು ಮೌಲ್ಯ ರೂ.43920) ಮದ್ಯ ಸಾಗಾಣಿಕೆ ಮಾಡುತ್ತಿರುವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಮದ್ಯ ಹಾಗೂ ವಾಹನವನ್ನು ಜಪ್ತುಪಡಿಸಿ ಪ್ರಕರಣ ದಾಖಲಿಸಲಾಗಿದೆ.


ಇದನ್ನೂ ಓದಿ: “ನಾನು ಐಶ್ವರ್ಯಾಗೆ ತಾಳಿ ಕಟ್ಟಿದ್ದು ಇದೇ ಕಾರಣಕ್ಕೆ.. ವಿನಃ ಇನ್ನೇನು ಅಲ್ಲ”- ವಿಚ್ಛೇದನ ವದಂತಿ ಮಧ್ಯೆ ಅಭಿಷೇಕ್ ಬಚ್ಚನ್ ಸೆನ್ಸೇಷನಲ್ ಕಮೆಂಟ್


ಬಳ್ಳಾರಿ ತಾಲ್ಲೂಕಿನ ಮಿಂಚೇರಿ ಗ್ರಾಮದಲ್ಲಿ ಗಸ್ತು ವೇಳೆ ದ್ವಿಚಕ್ರ ವಾಹನದಲ್ಲಿ 32.940 ಲೀ (ಅಂದಾಜು ಮೌಲ್ಯ ರೂ. 14660) ಮದ್ಯವನ್ನು ಅನಧೀಕೃತವಾಗಿ ಸಾಗಾಣಿಕೆ ಮಾಡುತ್ತಿರುವ ವ್ಯಕ್ತಿ ಮತ್ತು ಮದ್ಯ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ