Abhishek Bachchan: ಬಾಲಿವುಡ್ ಪವರ್ ಕಪಲ್ ಎಂದೇ ಖ್ಯಾತಿ ಪಡೆದಿರುವ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಜೋಡಿ ವಿಚ್ಛೇದನ ಪಡೆದುಕೊಳ್ಳಲಿದೆ ಎಂದು ಕೆಲ ವರುಷಗಳಿಂದ ಭಾರೀ ಸುದ್ದಿ ವೈರಲ್ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
16 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಐಶ್ವರ್ಯಾ ರೈ ಹಾಗೂ ಅಭಿಷೇಕ್ ಸಿದ್ಧರಾಗಿದ್ದಾರೆ ಎಂದು ಕೆಲ ಮಾಧ್ಯಮಗಳು ವದಂತಿ ಹಬ್ಬಿಸಿದ್ದವು. ಈ ಬೆನ್ನಲ್ಲೇ ಐಶ್ವರ್ಯಾ ರೈ ಅವರನ್ನು ತಾನು ವಿವಾಹವಾಗಿದ್ದೇಕೆ ಎಂಬ ವಿಷಯವನ್ನು ಬಹಿರಂಗಪಡಿಸಿರುವ ಅಭಿಷೇಕ್ ಅವರ ಸಂದರ್ಶನದ ವಿಡಿಯೋ ವೈರಲ್ ಆಗಿದೆ.
ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರದ್ದು ಲವ್ ಕಂ ಅರೇಂಜ್ಡ್ ಮ್ಯಾರೇಜ್. ಜನವರಿ 2007ರಂದು ನ್ಯೂಯಾರ್ಕ್’ನ ಹೋಟೆಲ್ ಒಂದರಲ್ಲಿ ನಟ ಅಭಿಷೇಕ್, ಐಶ್ವರ್ಯಾಗೆ ಪ್ರೇಮ ನಿವೇದನೆ ಮಾಡಿದ್ದರಂತೆ.
ಉಮ್ರಾವ್ ಜಾನ್ ಸಿನಿಮಾ ಶೂಟಿಂಗ್ ವೇಳೆ ಇವರಿಬ್ಬರಿಗೆ ಪ್ರೀತಿಯಾಗಿದ್ದು, ಬಳಿಕ ಮದುವೆಯಾಗಲು ಈ ಜೋಡಿ ನಿರ್ಧರಿಸಿದ್ದರು.
ಅಂದಹಾಗೆ 2014 ರಲ್ಲಿ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಅಭಿಷೇಕ್ ಬಚ್ಚನ್, ಐಶ್ವರ್ಯಾರನ್ನು ತಾನು ಯಾವ ಕಾರಣಕ್ಕೆ ಮದುವೆಯಾದೆ ಎಂಬ ಶಾಕಿಂಗ್ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
“ಐಶ್ವರ್ಯಾ ನಿಮ್ಮನ್ನೇ ಯಾಕೆ ಮದುವೆಯಾದ್ರು?” ಎಂದು ಈ ಕಾರ್ಯಕ್ರಮದ ಹೋಸ್ಟ್ ಆಗಿದ್ದ ಕರಣ್ ಜೋಹರ್, ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಅಭಿಷೇಕ್, “ನಾನು ಅಮಿತಾಭ್ ಬಚ್ಚನ್ ಮಗ ಎಂದಾಗಲಿ ಅಥವಾ ನಟ ಎಂಬ ಕಾರಣಕ್ಕಾಗಲಿ ಐಶ್ವರ್ಯ ನನ್ನನ್ನು ಮದುವೆಯಾಗಲಿಲ್ಲ. ಆಕೆ ವಿಶ್ವಸುಂದರಿ. ಪ್ರಖ್ಯಾತ ನಟಿಯೂ ಹೌದು. ಆದರೆ ಈ ಎಲ್ಲಾ ವಿಷಯ ನೋಡಿಕೊಂಡು ಆಕೆಯನ್ನು ನಾನು ಮದುವೆಯಾಗಿಲ್ಲ” ಎಂದಿದ್ದಾರೆ.
“ಬದಲಾಗಿ ನಾವು ಪರಸ್ಪರ ಪ್ರೀತಿಸುತ್ತಿದ್ದೆವು. ಇದೇ ಕಾರಣಕ್ಕೆ ನಾನು ಅವಳಿಗೆ ತಾಳಿ ಕಟ್ಟಿದೆ. ವಿನಃ ಬೇರೆನೂ ಅಲ್ಲ” ಎಂದು ಹೇಳಿದ್ದಾರೆ.