ಚಾಮರಾಜನಗರ : ಪ್ರತಿಕೂಲ ವಾತಾವರಣದಿಂದಾಗಿ ವಾಯುಸೇನೆಯ ಕಿರಣ್ ಏರ್ ಪಥ್ U692 ವಿಮಾನ ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಮದಲ್ಲಿ ಪತನಗೊಂಡಿದೆ. ಇದೊಂದು ತರಬೇತಿ ವಿಮಾನವಾಗಿದ್ದು ಭೂಮಿಕಾ ಹಾಗೂ ತೇಜ್ ಪಾಲ್ ಎಂಬವರು ಈ ವಿಮಾನವನ್ನು ಚಲಾಯಿಸುತ್ತಿದ್ದರು. ಪ್ಯಾರಚೂಟ್ ಮೂಲಕ ಇಬ್ಬರೂ ಪೈಲೆಟ್ ಗಳು  ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ.  ವಿಮಾನ ಪತನಗೊಂಡ 2 ಕಿಮಿ ದೂರದಲ್ಲಿ ಇಬ್ಬರೂ ಪೈಲೆಟ್ ಗಳು  ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ.  ಸದ್ಯ, ಇಬ್ಬರನ್ನು  ವಿಶೇಷ ಹೆಲಿಕಾಪ್ಟರ್ ನಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಇಬ್ಬರಿಗೂ ಕುತ್ತಿಗೆ ಬಳಿ ಸಣ್ಣಪುಟ್ಟ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.


COMMERCIAL BREAK
SCROLL TO CONTINUE READING

ರಾಜಸ್ಥಾನದಲ್ಲಿಯೂ ಅಪಘಾತ : 
ಭಾರತೀಯ ವಾಯುಪಡೆಯ (ಐಎಎಫ್) ಮಿಗ್ -21 ಯುದ್ಧ ವಿಮಾನವು ಸೋಮವಾರದಂದು ರಾಜಸ್ಥಾನದ ಹನುಮಾನ್‌ಗಢ್ ಬಳಿ ತರಬೇತಿಯ ಸಮಯದಲ್ಲಿ ಪತನಗೊಂಡಿದ್ದು, ಮೂವರು ಸಾವನ್ನಪ್ಪಿದ್ದಾರೆ.


ಇದನ್ನೂ ಓದಿ : G. Parameshwar: ಬಜರಂಗ ದಳ ಬ್ಯಾನ್ ಮಾಡುವ ಸಂದರ್ಭ ಬರಲಾರದು, ಬಂದರೆ ಮಾಡ್ತೀವಿ : ಡಾ ಜಿ.ಪರಮೇಶ್ವರ್


ಬೆಳಗ್ಗೆ 9:45ಕ್ಕೆ ಈ ದುರಂತ ಸಂಭವಿಸಿದ್ದು, ಹನುಮಾನ್‌ಗಢ್ ಜಿಲ್ಲೆಯ ಬಹ್ಲೋಲ್ ನಗರದಲ್ಲಿನ ಮನೆಯೊಂದರ ಮೇಲೆ ವಿಮಾನದ ಅವಶೇಷಗಳು ಬಿದ್ದಿದೆ. ದುರದೃಷ್ಟವಶಾತ್ ಅಪಘಾತದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.


“ವಿಮಾನವು ಸೂರತ್‌ಗಢ್‌ನಲ್ಲಿರುವ ವಾಯುಪಡೆ ನಿಲ್ದಾಣದಿಂದ  ದೈನಂದಿನ ತರಬೇತಿಗಾಗಿ ಏರ್ ಬೋರ್ನ್ ಪಡೆದುಕೊಂಡಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಪೈಲಟ್‌ಗೆ  ಆನ್‌ಬೋರ್ಡ್‌ನಲ್ಲಿ  ಸಮಸ್ಯೆ  ಎದುರಾಗಿದೆ. ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳ ಪ್ರಕಾರ ವಿಮಾನದ ನಿಯಂತ್ರಣವನ್ನು ಮರಳಿ ಪಡೆಯಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ತಕ್ಷಣ ಅಪಾಯವನ್ನು ಅರಿತ ಪೈಲಟ್ ಪ್ಯಾರಚ್ಯೂಟ್  ಮೂಲಕ ಹೊರ ಜಿಗಿದಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಆದರೆ ಘಟನೆಯಿಂದಾಗಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಬಗ್ಗ ಸಂತಾಪ ವ್ಯಕ್ತಪಡಿಸಿರುವ  ಐಎಎಫ್ ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖೆ  ನಡೆಸುವುದಾಗಿ ಹೇಳಿದೆ. 


ಇದನ್ನೂ ಓದಿ : "ಗೃಹ ಲಕ್ಷ್ಮೀ ಯೋಜನೆಯ ಲಾಭ ಪತ್ನಿಗೋ ತಾಯಿಗೋ ಎನ್ನುವುದನ್ನು ಕುಟುಂಬವೇ ನಿರ್ಧರಿಸಬೇಕು"


ಮೇ 30 ರಂದು ತುರ್ತು ಲ್ಯಾಂಡಿಂಗ್ ಮಾಡಿದ ತರಬೇತಿ ವಿಮಾನ: 
ಕರ್ನಾಟಕದ ಎರಡು ಆಸನಗಳ ತರಬೇತಿ ವಿಮಾನವು  ನಿನ್ನೆಯಷ್ಟೇ ಹಾರಾಟದ ಸಮಯದಲ್ಲಿ ಎದುರಾದ ತಾಂತ್ರಿಕ ದೋಷದಿಂದಾಗಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಬಳಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ವಾಯುಪಡೆಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.


ರೆಡ್‌ಬರ್ಡ್‌ಗೆ ಸೇರಿದ ವಿಮಾನ ಇದಾಗಿದ್ದು, ಬೆಳಿಗ್ಗೆ 9:30 ರ ಸುಮಾರಿಗೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದು, ನಂತರ ಹೊನ್ನಿಹಾಳ್ ಗ್ರಾಮದ ಬಳಿಯ ಜಮೀನಿನಲ್ಲಿ ಸುರಕ್ಷಿತವಾಗಿ  ಲ್ಯಾಂಡ್ ಆಗಿದೆ. ಅದೃಷ್ಟವಶಾತ್, ಈ ಪ್ರದೇಶದಲ್ಲಿ ಮರಗಳು ಅಥವಾ ಯಾವುದೇ ರೀತಿಯ ಅಡೆತಡೆಗಳು ಇಲ್ಲದಿರುವ ಕಾರಣ  ಯಾವುದೇ ರೀತಿಯ ದೊಡ್ಡ ಮಟ್ಟದ ದುರಂತ ಸಂಭವಿಸಿಲ್ಲ.


ಇದನ್ನೂ ಓದಿ : Rain Alert: ಗುಡುಗು-ಬಿರುಗಾಳಿ ಸಹಿತ ಭಾರೀ ಮಳೆ ಎಚ್ಚರಿಕೆ: ಬೆಂಗಳೂರು ಸೇರಿ 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್! ಯಾವ್ಯಾವ ಜಿಲ್ಲೆಯಿದೆ?


ಪೊಲೀಸ್, ಅಗ್ನಿಶಾಮಕ ಇಲಾಖೆ ಮತ್ತು ತುರ್ತು ಸೇವೆಗಳು ಸೇರಿದಂತೆ ಸ್ಥಳೀಯ ಅಧಿಕಾರಿಗಳು ಘಟನೆಗೆ ತ್ವರಿತವಾಗಿ ಸ್ಪಂದಿಸಿದ್ದರು. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಸ್ಥಳದಲ್ಲಿ ಅಕ್ಕಪಕ್ಕದ ಗ್ರಾಮಸ್ಥರು ಕೂಡ ಜಮಾಯಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.