ಬೆಂಗಳೂರು : ಪಂಚ ಗ್ಯಾರೆಂಟಿಗಳ ಮೂಲಕ ಬಹುಮತ ಸರ್ಕಾರ ರಚಿಸಿದ ಕಾಂಗ್ರೆಸ್ ಈಗ ಐದು ಗ್ಯಾರೆಂಟಿ ಪೈಕಿ ಕೇವಲ ಮೂರು ಗ್ಯಾರೆಂಟಿ ಯೋಜನೆಗಳನ್ನ ಶುಕ್ರವಾರ ಘೋಷಣೆ ಮಾಡಲಿದೆ.
ಯಾವ ಗ್ಯಾರೆಂಟಿ ಜಾರಿ ಆಗಲಿವೆ :
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಂತ್ರಿ ಮಂಡಲ ಸದಸ್ಯರು ಅಧಿಕಾರಿಗಳ ಜೊತೆ ಇಂದು ಗ್ಯಾರಂಟಿ ಸಭೆ ನಡೆಸಿ ಜೂನ್ 2 ರ ಸಂಪುಟ ಸಭೆಯಲ್ಲಿ ಬಹುತೇಕ ಮೂರು ಭರವಸೆಗಳ ಜಾರಿಗೆ ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ: Rain Alert: ರಾಜ್ಯದಲ್ಲಿ ಇನ್ನೂ 2 ದಿನ ವರುಣಾರ್ಭಟ: ಈ ಜಿಲ್ಲೆಗಳಲ್ಲಿ ಗುಡ್ಡ ಕುಸಿತದ ಭೀತಿ-ಹೈ ಅಲರ್ಟ್ ಘೋಷಿಸಿದ ಇಲಾಖೆ!
ಐದು ಗ್ಯಾರಂಟಿ ಪೈಕಿ ಮಹಿಳೆಯರಿಗೆ ಉಚಿತ ಬಸ್ಸು ಸಂಚಾರ, ಉಚಿತ ಅಕ್ಕಿ ವಿತರಣೆ ಹಾಗೂ ,200 ಯುನಿಟ್ ವಿದ್ಯುತ್ ಮೂರು ಯೋಜನೆ ಜೂನ್ ೨ ರಿಂದಲೆ ಜಾರಿ ಮಾಡಲಾಗುವುದು. ಹಾಗೂ ಯುವ ನಿಧಿಯ ನಿರುದ್ಯೋಗ ಭತ್ಯೆ ಹಾಗೂ ಗೃಹಿಣಿಯರಿಗೆ ಮಾಸಾಶನ ಎರಡು ಭರವಸೆ ತಡವಾಗಲಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪದವಿ ಮುಗಿದ 180 ದಿನದಲ್ಲಿ ಉದ್ಯೋಗ ಸಿಗದಿದ್ದರೆ ಎಂದು ಹೇಳಲಾಗಿದೆ.ಅದರಂತೆ ಈ ಅಕಾಡಮಿಕ್ ಇಯರ್ ನಲ್ಲಿ ಪದವಿ ಮುಗಿದವರಿಗೆ ಹಣ ನೀಡಲು ಇನ್ನೂ ೫ ತಿಂಗಳು ಸಮಯವಕಾಶ ಇದೆ.ಅಷ್ಟರಲ್ಲಿ ನಿಖರವಾದ ಅಂಕಿ ಅಂಶ ಸಂಗ್ರಹಿಸಬಹುದು.ಆದ್ದರಿಂದ ಅದನ್ನ ಮುಂದೂಡಲು ಸಭೆಯಲ್ಲಿ ನಿರ್ಧಾರ ಮಾಡಲು ಅವಕಾಶ ಇದೆ.
ಜೊತೆಗೆ ಮಹಿಳೆಯರಿಗೆ 2000 ಮಾಸಾಶನ ವಿಚಾರದಲ್ಲಿ ಸಮರ್ಪಕವಾಗಿ ಅಂಕಿ ಅಂಶ ಸಂಗ್ರಹಕ್ಕೆ 2 ತಿಂಗಳ ಗಡುವು ನೀಡಲು ತೀರ್ಮಾನ ಮಾಡಲಾಗಿದೆ. ಹೀಗಾಗಿ ಬಹುತೇಕ ಆಗಸ್ಟ್ ನಿಂದ ಮಹಿಳಾ ಮಾಶಾಸನ ಜಾರಿಗೆ ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ: Adipurush Collection: ರಿಲೀಸ್‌ಗೂ ಮುಂಚೆಯೇ 400 ಕೋಟಿ ಗಳಿಸಿದ ಆದಿಪುರುಷ.!
ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ 3 ಗ್ಯಾರಂಟಿ ಘೋಷಣೆಗೆ ಇಂದಿನ ಸಭೆಯಲ್ಲಿ ನಿರ್ಧಾರ ಮಾಡಲಾಗುವುದು. ಈ ನಿರ್ಧಾರವನ್ನು ವಿಪಕ್ಷ ಹಾಗೂ ಜನಸಾಮಾನ್ಯರು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ