Transgender: ಅನುದಾನ ಇದ್ರೂ ಬಳಕೆ ಮಾಡಿಕೊಳ್ಳದ ಟ್ರಾನ್ಸ್ಜೆಂಡರ್ಸ್!?
ತೃತೀಯ ಲಿಂಗಿಗಳು ಕೆಲಸವಿಲ್ಲದೆ ಸಿಗ್ನಲ್‍ಗಳಲ್ಲಿ ಭಿಕ್ಷೆ ಬೇಡುವುದು, ವೇಶ್ಯಾವೃತ್ತಿಯಿಂದ ಹೊರಬಂದು ಗೌರವಯುತವಾಗಿ ಸ್ವಯಂ ಉದ್ಯೋಗದಲ್ಲಿ ತೊಡಗಬೇಕು. ಇದಕ್ಕೆ ಸಹಾಯಧನ ಕೊಡಬೇಕೆಂಬ ಉದ್ದೇಶದಿಂದ ಅನುದಾನ ಮೀಸಲಿಡಲಾಗಿದೆ.
ಬೆಂಗಳೂರು: ತೃತೀಯ ಲಿಂಗಿಗಳ(Transgender) ಕಲ್ಯಾಣಕ್ಕೆ 2021-22ನೇ ಸಾಲಿನ ಬಜೆಟ್‍ನಲ್ಲಿ 6 ಕೋಟಿ ರೂ. ಮೀಸಲಿಟ್ಟರೂ 1 ರೂಪಾಯಿಯೂ ಬಳಕೆಯಾಗದೆ ರದ್ದಾಗಿದೆ. ಹೌದು, ಕಳೆದ ಎರಡ್ಮೂರು ವರ್ಷದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅನುದಾನದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣಕ್ಕೂ ಅನುದಾನ ಮೀಸಲಿಡಲಾಗ್ತಿದೆ.
ಕಳೆದ ವರ್ಷ ಮೊದಲ ಬಾರಿಗೆ 6 ಕೋಟಿ ರೂ. ಅನುದಾನ(Government Grants) ಮೀಸಲಿಡಲಾಗಿತ್ತು. ತೃತೀಯ ಲಿಂಗಿಗಳು ಕೆಲಸವಿಲ್ಲದೆ ಸಿಗ್ನಲ್‍ಗಳಲ್ಲಿ ಭಿಕ್ಷೆ ಬೇಡುವುದು, ವೇಶ್ಯಾವೃತ್ತಿಯಿಂದ ಹೊರಬಂದು ಗೌರವಯುತವಾಗಿ ಸ್ವಯಂ ಉದ್ಯೋಗದಲ್ಲಿ ತೊಡಗಬೇಕು. ಇದಕ್ಕೆ ಸಹಾಯಧನ ಕೊಡಬೇಕೆಂಬ ಉದ್ದೇಶದಿಂದ ಅನುದಾನ ಮೀಸಲಿಡಲಾಗಿದೆ. ಕಳೆದ ಬಾರಿ ಅನುದಾನಕ್ಕಾಗಿ 450 ಅರ್ಜಿಗಳು ಸಹ ಸಲ್ಲಿಕೆಯಾಗಿದ್ದವು. ಬ್ಯಾಂಕ್ ಮೂಲಕ ಸ್ವಯಂ ಉದ್ಯೋಗಕ್ಕಾಗಿ 3 ಲಕ್ಷ ರೂ. ಸಾಲ ಸೌಲಭ್ಯ ಒದಗಿಸಲಾಗಿದ್ದು, ಈ ಪೈಕಿ ಪಾಲಿಕೆಯಿಂದ 1.50 ಲಕ್ಷ ರೂ. ಸಬ್ಸಿಡಿ ಸಿಗಲಿದೆ.
ಇದನ್ನೂ ಓದಿ: ಕುಮಾರಸ್ವಾಮಿ ಬಳಿ ಕಣ್ಣೀರು ಮತ್ತು ಸುಳ್ಳಿಗೆ ಬರವಿಲ್ಲ!: ಬಿಜೆಪಿ ವ್ಯಂಗ್ಯ
ಆದರೆ ಬಿಬಿಎಂಪಿ(BBMP) ಕಲ್ಯಾಣ ವಿಭಾಗದ ವಿಶೇಷ ಅಧಿಕಾರಿ ಶರತ್ ಅವರು ಹೇಳುವ ಪ್ರಕಾರ, ‘ತೃತೀಯ ಲಿಂಗಿಗಳಲ್ಲೇ ಒಗ್ಗಟ್ಟಿನ ಕೊರತೆಯಿಂದ ಅನುದಾನ ಬಳಸಿಕೊಳ್ಳುತ್ತಿಲ್ಲ. ಎಷ್ಟು ಸಭೆಗಳನ್ನು ನಡೆಸಿದ್ರೂ ಒಮ್ಮತಕ್ಕೆ ಬರದ ಹಿನ್ನಲೆ ಅನುದಾನ ಬಳಕೆಯಾಗಿಲ್ಲ. ಕುಂದುಕೊರತೆ ನಿವಾರಣಾ ಸಮಿತಿಯಲ್ಲೂ ಪ್ರತಿಬಾರಿ ಜಗಳವಾಡ್ತಾರೆ. ಎಲ್ಲರಿಗೂ ಅನುದಾನ ಕೊಡಿ ಅಂತ ಬೇಡಿಕೆಯಿಡ್ತಾರೆ ಇದು ಒಂದೇ ಬಾರಿಗೆ ಸಾಧ್ಯವಿಲ್ಲ ಎನ್ನುತ್ತಾರೆ. ಅಲ್ಲದೆ ತೃತೀಯ ಲಿಂಗಿಗಳ ಸಂಘಟನೆಯವರು ಸಂಘಟನೆಗಳಿಗೇ ಅನುದಾನ ಕೊಡಿ, ವೈಯಕ್ತಿಕ ಸಾಲ(Transgender Loan Policy) ಕೊಡ್ಬೇಡಿ ಎಂದು ವಾದ ಮಾಡಿದ್ರೆ, ಇದಕ್ಕೆ ವೈಯಕ್ತಿಕವಾಗಿ ಕೊಡಲೇಬೇಕೆಂಬ ಒತ್ತಾಯ ಇನ್ನೊಂದು ಕಡೆಯಿಂದ ಬರ್ತಿದೆ. ಈ ಗೊಂದಲದಿಂದ ಕಳೆದ ವರ್ಷದ ಅನುದಾನ ಬಳಕೆಯಾಗಿಲ್ಲ. ಈ ವರ್ಷ 6 ಕೋಟಿ ರೂ. ಮೀಸಲಿಡಲಾಗಿದ್ದು, ಅರ್ಜಿ ಆಹ್ವಾನಿಸಲಾಗಿದೆ. ಬಳಕೆ ಬಗ್ಗೆ ನೋಡಬೇಕಿದೆ ಎಂದು ಜೀ ಕನ್ನಡ ನ್ಯೂಸ್‍ಗೆ ತಿಳಿಸಿದರು.
ಆದರೆ ತೃತೀಯ ಲಿಂಗಿಗಳ ವಾದವೇ ಬೇರೆ. ಈ ಬಗ್ಗೆ ಮಾತನಾಡಿರುವ ಲೈಂಗಿಕ ಅಲ್ಪಸಂಖ್ಯಾತ ವೇದಿಕೆಯ ಮಲ್ಲು, ‘ಹಣ ಸದ್ಭಳಕೆ ಮಾಡುತ್ತಿಲ್ಲವೆಂಬ ವಿಚಾರ ಸತ್ಯಕ್ಕೆ ದೂರವಾದುದು. ಸ್ವಯಂ ಉದ್ಯೋಗ(Transgender Reservation) ಮಾಡುವ ಆಸಕ್ತಿ ಇರುವವರಿಗೆ ಹೆಚ್ಚು ಅನುದಾನ ಕೊಡಿ ಅಂತೇವೆ. ಆದರೆ ಕೊನೇ ಕ್ಷಣದಲ್ಲಿ ಸಮಿತಿ ಸಭೆ ಕರೆದು, ತರಾತುರಿಯಲ್ಲಿ ನಡೆಸುತ್ತಾರೆ. ವ್ಯವಸ್ಥಿತವಾದ ಸಭೆಯನ್ನು ಪಾಲಿಕೆಯೇ ನಡೆಸುತ್ತಿಲ್ಲವೆಂದು ಆರೋಪಿಸಿದ್ದಾರೆ. ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ತಿದಾರೆ ಎಂದೂ ಸಹ ದೂರಿದ್ದಾರೆ.
ಇದನ್ನೂ ಓದಿ: ನಸುಕಿನಲ್ಲಿ ಸುಪ್ರಭಾತ & ಅಲ್ಲಾಹ್ ಕೂಗುವ ಪರಿಪಾಠ ಇಂದು-ನಿನ್ನೆಯದಲ್ಲ: ಎಚ್‌ಡಿಕೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.