Milk Price Hike: ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್! ಹೈನುಗಾರಿಕೆ ರೈತರಿಗೆ ಯುಗಾದಿ ಸಿಹಿ ಸುದ್ದಿ ಕೊಟ್ಟ ಬಮುಲ್
Milk Price Hike: ಹಾಲು ಉತ್ಪಾದಕರಿಗೆ ಯುಗಾದಿ ಉಡುಗೊರೆ ನೀಡಿರುವ ಬಮುಲ್ (BAMUL) ಹಾಲು ಒಕ್ಕೂಟಕ್ಕೆ ರೈತರು ಕೊಡುವ ಹಾಲಿನ ದರ ಏರಿಕೆಗೆ ನಿರ್ಧರಿಸಿದೆ.
ಬೆಂಗಳೂರು: ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮುಲ್) ಹೈನುಗಾರಿಕೆ ರೈತರಿಗೆ ಯುಗಾದಿ ಉಡುಗೊರೆ ನೀಡಿದ್ದು, ಪ್ರತಿ ಲೀಟರ್ ಹಾಲಿಗೆ ಎರಡೂವರೆ ರೂಪಾಯಿ ಹೆಚ್ಚಳ ಮಾಡುವುದಾಗಿ ತಿಳಿಸಿದೆ.
ಬೆಂಗಳೂರು ಹಾಲು ಒಕ್ಕೂಟದಿಂದ (ಬಮುಲ್) ಹೊಸ ದರ ನಿಗದಿ:
ಬೆಂಗಳೂರು ಹಾಲು ಒಕ್ಕೂಟ (BAMUL) ರೈತರಿಗೆ ಈ ಮೊದಲು ಪ್ರತಿ ಲೀಟರ್ ಹಾಲಿಗೆ ಕನಿಷ್ಠ 27 ರೂ. ಬೆಲೆ ನಿಗದಿ ಮಾಡಿತ್ತು. ಇದೀಗ ಪ್ರತಿ ಲೀಟರ್ ಹಾಲು ಖರೀದಿಗೆ 2.50 ರೂ. ಹೆಚ್ಚಳ ಘೋಷಿಸಲಾಗಿದ್ದು, ಪ್ರತಿ ಲೀಟರ್ ಹಾಲಿಗೆ 29.50 ರೂ. ನೀಡಲಾಗುವುದು. ಎಪ್ರಿಲ್ 1ರಿಂದ ಹೊಸ ದರ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ- ರಣಾಂಗಣವಾದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಆವರಣ : ಎರಡು ಗುಂಪುಗಳ ನಡುವೆ ಮಾರಾಮಾರಿ
ಹಾಲಿನ ಫ್ಯಾಟ್ ಆಧಾರದ ಮೇಲೆ ಹಾಲಿನ ದರ (Milk Price) ನಿಗದಿ ಮಾಡಲಾಗಿದೆ. ರೈತರಿಗೆ ಸಹಕಾರಿ ಆಗುವ ನಿಟ್ಟಿನಲ್ಲಿ ಹಾಲಿನ ದರ ಏರಿಕೆ ಮಾಡಲಾಗಿದ್ದು, ಬಮುಲ್ ವ್ಯಾಪ್ತಿಯ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ರೈತರಿಗೆ ಇದರಿಂದ ಅನುಕೂಲವಾಗಲಿದೆ.
ಇದನ್ನೂ ಓದಿ- ಸರ್ವೋತ್ತಮ ಸೇವಾ ಪ್ರಶಸ್ತಿ : ಆನ್‌ಲೈನ್ ಮೂಲಕ ನಾಮ ನಿರ್ದೇಶನಕ್ಕೆ ಸೂಚನೆ
ವಾಸ್ತವವಾಗಿ, ಕಳೆದ ಎರಡು ವರ್ಷಗಳಿಂದ ಹಾಲಿನ ದರ ಏರಿಕೆ ಮಾಡುವಂತೆ ರೈತರು ಒತ್ತಾಯ ಮಾಡಿದ್ದರು. ಇದೀಗ ಯುಗಾದಿ ಹಬ್ಬಕ್ಕೂ ಮೊದಲು ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮುಲ್) ಹಾಲಿನ ದರ ಹೆಚ್ಚಳ ಮಾಡಿರುವುದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.
ಬಮುಲ್ ರೀತಿಯೇ ಉಳಿದ ಹಾಲಿನ ಒಕ್ಕೂಟಗಳು ಶೀಘ್ರದಲ್ಲೇ ಹಾಲಿನ ದರ ಹೆಚ್ಚಳ ಮಾಡುವ ಸಾಧ್ಯತೆ ಇದೇ ಎಂದು ನಿರೀಕ್ಷಿಸಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.