ನವದೆಹಲಿ: ಕೇಂದ್ರ ಸಚಿವ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿರುವ ಹುಣಸಗಿ ತಾಲೂಕಿನಲ್ಲಿರುವ ನಾರಾಯಣಪುರ ಬಸವಸಾಗರ ಜಲಾಶಯದ ಕಾಲುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


COMMERCIAL BREAK
SCROLL TO CONTINUE READING

ಇದೇ ವೇಳೆ ಅವರು ಎಡದಂಡೆ ಕಾಲುವೆಗೆ ನೂಥನವಾಗಿ ನಿರ್ಮಾಣ ಮಾಡಿರುವ ಸ್ಕಾಡ್ ಗೇಟ ಪೇಸ್ ೧ ಆಟೋನೋಮಸ್ ತಂತ್ರಜ್ಞಾನವನ್ನು ಪರಿಶೀಲಿಸಿದರು. ಈಗ ಅಲ್ಲಿ  ರೈತರ ಜಮೀನುಗಳಿಗೆ ಸಮಾನ ನೀರೋದಗಿಸಲು ಆಧುನಿಕ ತಂತ್ರಜ್ಞಾನದ ಗೇಟ್ ಅಳವಡಿಸುವುದರ ಜೊತೆಗೆ ಸಿಸಿಟಿವಿ ಹಾಗೂ ಸೆನ್ಸಾರ ಮೂಲಕ ಕಂಟ್ರೋಲ್ ಮುಖಾಂತರ  ಕಾಲುವೆ ಕಾರ್ಯ ನಿರ್ವಹಣೆ ನಡೆಯುತ್ತದೆ.


ಇದನ್ನೂ ಓದಿ: ಮೇಕೆದಾಟು ವಿಚಾರವನ್ನಿಟ್ಟುಕೊಂಡು ರಾಷ್ಟ್ರೀಯ ಪಕ್ಷಗಳಿಂದ ಚುನಾವಣಾ ಆಟ: ಎಚ್​ಡಿಕೆ


ಕಾಲುವೆಗೆ ಭೇಟಿ ನೀಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಗಜೇಂದ್ರ ಸಿಂಗ್ ಶೇಖಾವತ್ (Gajendra singh shekhawat) 'ಕಾಲುವೆಯ ಕೊನೆ ಭಾಗದ ರೈತರಿಗೆ ನೀರು ತಲುಪಿಸುವದು ನಮ್ಮ ಆಧ್ಯ ಕರ್ತವ್ಯ, ಈಗ ದೇಶದಲ್ಲಿ ಪ್ರಪ್ರಥಮವಾಗಿ ಈ ತಂತ್ರಜ್ಞಾನ ಕರ್ನಾಟಕದ ಕೆಬಿಜೆಎನ್ ಎಲ್ ಕಾಲುವೆಗೆ ಅಳವಡಿಕೆ ಮಾಡಲಾಗಿದೆ  ನಂತರದಲ್ಲಿ  ಮಧ್ಯಪ್ರದೇಶ ಹಾಗೂ ಆಂದ್ರಪ್ರದೇಶ ತಂತ್ರಜ್ಞಾನ ಅಳವಡಿಸಲಾಗುವದು. ನೂತನ ತಂತ್ರಜ್ಞಾನ ಭಾಗವಾಗಿ ಕೆಬಿಜೆಎನ್ ಎಲ್ ಎಡದಂಡೆ ಕಾಲುವೆಯ ೩೬೫ ಗೇಟ್ ಗಳನ್ನು ಕಂಟ್ರೋಲ್ ರೂಂ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ.ಮುಂಬರುವ ದಿನಗಳಲ್ಲಿ ಸ್ಕಾಡ ಗೇಟ್ ಅಳವಡಿಕೆ ಮಾಡಿರುವ ರಾಜ್ಯಗಳಲ್ಲಿ ಅವಲೋಕಿಸಿ ದೇಶದ ಎಲ್ಲಾ ಭಾಗದಲ್ಲಿ ತಂತ್ರಜ್ಞಾನ ಅಳವಡಿಸಲಾಗುವದು ಎಂದು ಅವರು ಹೇಳಿದರು.


ಇದನ್ನೂ ಓದಿ: Janhvi Kapoor:ಗುಲಾಬಿ ಸೀರೆಯುಟ್ಟು ಮಿಂಚಿದ ಜಾನ್ವಿ ಕಪೂರ್.. ನೆಟ್ಟಿಗರು ಕ್ಲೀನ್​ ಬೋಲ್ಡ್


ಕೇಂದ್ರ ಸಚಿವ ಶೇಖಾವತ್ ಜೊತೆ ನೀರಾವರಿ ಸಚಿವ ಗೋವಿಂದ ಕಾರಜೋಳ (Govind Karjol) ಸಂಸದ ರಾಜಾ ಅಮರೇಶ್ವರ ನಾಯಕ ಶಾಸಕರಾದ ರಾಜುಗೌಡ ,ಡಿಎಸ್ ಹೊಲಗೇರಿ ಸಾಥ್ ನೀಡಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.