ಬೆಂಗಳೂರು : ರಾಜ್ಯದಲ್ಲಿ 15-18 ವರ್ಷದೊಳಗಿನ ಮಕ್ಕಳಿಗೆ ವ್ಯಾಕ್ಸಿನ್ ನೀಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಜನವರಿ 3ರಿಂದ ವ್ಯಾಕ್ಸಿನ್ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ಮಾಹಿತಿ ತಂದಿರುವ ಸಿಎಂ ಬೊಮ್ಮಾಯಿ(Basavaraj Bommai), ಜಿಲ್ಲಾ ಉಸ್ತುವಾರಿ ಸಚಿವರಿಗೆ ವ್ಯಾಕ್ಸಿನ್ ನೀಡಲು ಚಾಲನೆ ನೀಡುವಂತೆ  ಸೂಚಿಸಿದ್ದಾರೆ. ಜಿಲ್ಲಾ ಶಾಸಕರು ತಮ್ಮ ಕ್ಷೇತ್ರದಲ್ಲಿ ಚಾಲನೆ ನೀಡುವಂತೆ ಸಲಹೆ ನೀಡಿದ್ದಾರೆ.


ಇದನ್ನೂ ಓದಿ : ಚುನಾವಣೆಯಲ್ಲಿ ಹಣ ಖರ್ಚು ಮಾಡಿದರೆ ಗೆಲ್ಲಬಹುದು ಎಂಬ ಬಿಜೆಪಿಯ ಸೊಕ್ಕನ್ನು ಜನ ಮುರಿದಿದ್ದಾರೆ-ಸಿದ್ಧರಾಮಯ್ಯ


15 ವರ್ಷದಿಂದ 18 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ಸಿಗಲಿದೆ. ಲಸಿಕೆಯನ್ನ ಕೊಡಿಸಿ ಯಶಸ್ವಿಗೊಳಿಸಲು ಶಾಸಕರು ಮತ್ತು ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಎಲ್ಲಾ ಜಿಲ್ಲಾ ಉಸ್ತುವಾರಿಗಳಿಗೆ ಪತ್ರ ಬರೆದಿದ್ದಾರೆ.


15 ರಿಂದ 18 ವರ್ಷದೊಳಗಿನ ಮಕ್ಕಳಿಗೆ 2022ರ ಜ.3 ರಿಂದ ಕೋವಿಡ್‌ ಲಸಿಕೆ ಅಭಿಯಾನ (Corona Vaccine) ಆರಂಭಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ ವೈದ್ಯರು ಸೇರಿದಂತೆ ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟಪೂರ್ವ ರೋಗ ಪೀಡಿತರಿಗೆ ಜ.10ರಿಂದ ಬೂಸ್ಟರ್‌ ಡೋಸ್‌ (Booster Dose) ನೀಡುವುದಾಗಿಯೂ ಪ್ರಕಟಿಸಿದ್ದಾರೆ. ದೇಶಾದ್ಯಂತ ಒಮಿಕ್ರೋನ್‌ ಸೋಂಕು ಹೆಚ್ಚಾಗಿ, ಮೂರನೆ ಅಲೆಯ ಭೀತಿ ಆವರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಅವರ ಈ ಹೇಳಿಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ.


ಇದನ್ನೂ ಓದಿ : KARNATAKA BANDH-ಕರ್ನಾಟಕ ಬಂದ್ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ: ವಾಟಾಳ್ ನಾಗರಾಜ್


2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಒಟ್ಟು 7.4 ಕೋಟಿ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿದ್ದಾರೆ. 13.79 ಕೋಟಿ 60 ವರ್ಷ ಮೇಲ್ಪಟ್ಟವಯಸ್ಕರಿದ್ದಾರೆ. ಈ ಪೈಕಿ ಶೇ.75 ರಷ್ಟುಜನರು ನಾನಾ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಕುಟುಂಬ ಹಾಗೂ ಆರೋಗ್ಯ ಕಲ್ಯಾಣ ಸಚಿವಾಲಯದ ವರದಿ ಹೇಳಿದೆ. ಅಂದರೆ 13.79 ಕೋಟಿ ಜನರ ಪೈಕಿ 10 ಕೋಟಿ ಜನರು ಬೂಸ್ಟರ್‌ ಡೋಸ್‌ ಪಡೆಯುವ ಅರ್ಹತೆ ಪಡೆಯುತ್ತಾರೆ. ಇವರ ಜೊತೆ 1 ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಮುಂಚೂಣಿ ಕಾರ್ಯಕರ್ತರು ಇದ್ದಾರೆ. ಹೀಗಾಗಿ 20 ಕೋಟಿಗಿಂತ ಹೆಚ್ಚಿನ ಡೋಸ್‌ ಹೆಚ್ಚುವರಿ ಡೋಸ್‌ ಲಸಿಕೆ ಬೇಕಾಗಿ ಬರಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.