KARNATAKA BANDH-ಕರ್ನಾಟಕ ಬಂದ್ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ: ವಾಟಾಳ್ ನಾಗರಾಜ್

KARNATAKA BANDH:ಡಿ.31 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾರ್ವಜನಿಕರು ಸಹಕಾರ ಕೊಡಬೇಕೆಂದು ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.

Edited by - Zee Kannada News Desk | Last Updated : Dec 30, 2021, 10:53 AM IST
  • ಡಿ.31 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ
  • ಇದರಲ್ಲಿ ಯಾವುದೇ ಬದಲಾವಣೆ ಇಲ್ಲ
  • ಸಾರ್ವಜನಿಕರು ಸಹಕಾರ ಕೊಡಬೇಕು
  • ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿಕೆ
KARNATAKA BANDH-ಕರ್ನಾಟಕ ಬಂದ್ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ: ವಾಟಾಳ್ ನಾಗರಾಜ್  title=
ವಾಟಾಳ್ ನಾಗರಾಜ್

ಬೆಳಗಾವಿ: ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಖಡಕ್‌ ತೀರ್ಮಾನ ತೆಗೆದುಕೊಂಡು ಎಂಇಎಸ್ (MES) ನಿಷೇಧ ಮಾಡುವ ನಿರ್ಣಯ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಡಿ.31 ರಂದು ಕರ್ನಾಟಕ ಬಂದ್ ಗೆ (Karnataka Bandh) ಕರೆ ನೀಡಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾರ್ವಜನಿಕರು ಸಹಕಾರ ಕೊಡಬೇಕೆಂದು ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಹೇಳಿದರು.

ಬುಧವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್, ಕರ್ನಾಟಕ ಬಂದ್ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಡಿ.31 ರಂದು ಸೂರ್ಯ ಈಕಡೆ ಬಂದು, ಚಂದ್ರ ಆ ಕಡೆ ಬಂದರೂ ಬದಲಾವಣೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Basavaraj Bommai: ಡಿಸೆಂಬರ್ 31ರಂದು ‘ಕರ್ನಾಟಕ ಬಂದ್’ ಕೈಬಿಡಲು ಸಿಎಂ ಬೊಮ್ಮಾಯಿ ಮನವಿ

ಎಂಇಎಸ್ ಮಹಾರಾಷ್ಟ್ರದಲ್ಲಿ ಇರಬೇಕು ಬೆಳಗಾವಿಯಲ್ಲಿ ಅಲ್ಲ. ರಾಜ್ಯೋತ್ಸವ ದಿನ ಕರಾಳ ದಿನ, ಅಧಿವೇಶನ ಸಂದರ್ಭದಲ್ಲಿ ಮಹಾಮೇಳ ನಡೆಸುವ ಈ ಪುಂಡ ಸಂಘಟನೆ ಬೆಳಗಾವಿಯಲ್ಲಿ ಇರಬೇಕಾ? ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನ ಮಾಡುತ್ತಾರೆ. ಕನ್ನಡ ಧ್ವಜವನ್ನ ಸುಟ್ಟು ಹಾಕುತ್ತಾರೆ. ಇಂಥ ಎಂಇಎಸ್ ನಿಷೇಧಿಸುವಂತೆ ಡಿ.31 ರಂದು ಕರ್ನಾಟಕ ಬಂದ್ ಆಗಲಿದೆ ಎಂದರು.

ಪ್ರವೀಣ ಶೆಟ್ಟಿ (Praveen Shetty) ನೇತೃತ್ವದ ಕರವೇ ಬಂದ್ ಮುಂದೂಡುವಂತೆ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಯಾವುದೇ ಕಾರಣಕ್ಕೂ ಬಂದ್ ವಾಪಸ್ ಇಲ್ಲ ಎಂದು ಹೇಳಿದರು.

ಇದೆ ವೇಳೆ ಅಶೋಕ ಚಂದರಗಿ ಬಣದ ವಿರೋಧ ವಿಚಾರವಾಗಿ, ಅಶೋಕ ಚಂದರಗಿ ಅವರನ್ನ ನಾನು ಎಂದಿಗೂ ಪರಿಗಣಿಸಿಯೇ ಇಲ್ಲ ಎಂದರು.

ಇದನ್ನೂ ಓದಿ: ಕರ್ನಾಟಕ ಬಂದ್ ಮುಂದೂಡಿಕೆ.. ಕನ್ನಡಪರ ಸಂಘಟನೆಗಳ ಒಕ್ಕೂಟಕ್ಕೆ ಕರವೇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಪತ್ರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News