ಮುಂದಿನ ಐದು ವರ್ಷಗಳ ಕಾಲ ಸುಭದ್ರ ಸರ್ಕಾರ : ವಚನಾನಂದ ಶ್ರೀಗಳು
Karnataka Political Result: ಕರ್ನಾಟಕದ ಚುಕ್ಕಾಣಿ ಹಿಡಿಯುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಾಗಿದೆ. 135 ಸೀಟ್ಗಳನ್ನು ಗೆದ್ದು, ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದಿದೆ. ಇದೀಗ ಕರುನಾಡ ಚಕ್ರವರ್ತಿ ಯಾರಾಗ್ತಾರೆ ಎಂಬ ವಿಚಾರ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮನೆಗೆ ಲಿಂಗಾಯತ ಸ್ವಾಮೀಜಿಗಳು ಆಗಮಿಸುತ್ತಿದ್ದಾರೆ. ಕನಕಪುರದ ಮರಳಯ್ಯಮಠದ ಮುಮ್ಮಡಿ ಶಿವರುದ್ರಪ್ಪ ಶ್ರೀಗಳು ಇಂದು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದರು. ಡಿ.ಕೆ.ಶಿವಕುಮಾರ್ ಮಠದ ಭಕ್ತರು, ಕ್ಷೇತ್ರದ ಮಾದರಿ ಶಾಸಕರು, ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಅವರಿಗೆ ಆಶೀರ್ವಾದ ಮಾಡಲು ಬಂದಿದ್ದೆವು. ಡಿ.ಕೆ ಶಿವಕುಮಾರ್ ಅವರು ನಾಡಿನ ಸಿಎಂ ಆಗಲಿ ಎಂದು ನಮ್ಮ ಅಭಿಲಾಷೆ. ಅವರು ಸಿಎಂ ಆಗುತ್ತಾರೆ, ಆಗಿ ರೈತ ಪರವಾನಗಿ ಕೆಲಸ ಮಾಡ್ತಾರೆ. ವರಿಷ್ಠರು, ಕಾರ್ಯಕರ್ತರ ಅಭಿಮಾನದಿಂದ ಸಿಎಂ ಸ್ಥಾನ ಸಿಗಲಿ ಎಂದು ಹಾರೈಸಿದರು.
ಇದನ್ನೂ ಓದಿ: 'ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಪರಾಕ್' ಭವಿಷ್ಯವಾಣಿ ನಿಜವಾಯಿತಾ...!
ವಚನಾನಂದ ಶ್ರೀಗಳ ಹೇಳಿಕೆ :
ಅಭೂತಪೂರ್ವ ಜಯ ಕಾಂಗ್ರೆಸ್ ಪಡೆದಿದೆ. ಮುಂದಿನ ಐದು ವರ್ಷಗಳ ಕಾಲ ಸುಭದ್ರ ಸರ್ಕಾರ ರಾಜ್ಯದಲ್ಲಿ ಇರಲಿದೆ. ಜನಪರ ಆಡಳಿತ ನೀಡಲಿ ಎಂದು ಹಾರೈಸುತ್ತೇವೆ ಎಂದು ಹೇಳಿದರು.
ಲಿಂಗಾಯತ ಸಿಎಂ ಕೂಗಿನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸೂಕ್ತ ಸಂದರ್ಭದಲ್ಲಿ ಸೂಕ್ತ ವೇದಿಕೆಯಲ್ಲಿ ಹೇಳುತ್ತೇವೆ ಎಂದರು. ಇದೇ ವೇಳೆ ಡಿಕೆಶಿ ಸಿಎಂ ರೇಸ್ ನಲ್ಲಿರುವ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಮೊದಲಿಂದ ನನಗೆ ಡಿ.ಕೆ ಶಿವಕುಮಾರ್ ಪರಿಚಯವಿದ್ದಾರೆ. ಅನೇಕ ಬಾರಿ ಅವರ ಜೊತೆ ಹಲವಾರು ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇವೆ. ನಿನ್ನೆ ಅವರ ಜೊತೆಗೆ ಮಾತಾಡಿದ್ದೇನೆ. ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತಾಡುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯದ ಈ ಭಾಗಗಳಲ್ಲಿ ಇಂದು ಭಾರೀ ವರ್ಷಧಾರೆ; ಗುಡುಗು-ಮಿಂಚು ಬಿರುಗಾಳಿಯ ಮುನ್ಸೂಚನೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.