Vande Bharat Express : ವಂದೇ ಭಾರತ್ ಸ್ಲೀಪರ್ ರೈಲು, ನಿರ್ವಹಣಾ ವಿಶೇಷ ಕೇಂದ್ರ ಸ್ಥಾಪನೆಗೆ 270 ಕೋಟಿ ಮಂಜೂರು
Vande Bharat Express : ವಂದೇ ಭಾರತ್ ಸ್ಲೀಪರ್ ರೈಲುಗಳು ಹಳಿಗೆ ಇಳಿಯಲಿದ್ದು, ಈ ರೈಲುಗಳಿಗೆ ಅಗತ್ಯವಿರುವ `ನಿರ್ವಹಣಾ ವಿಶೇಷ ಕೇಂದ್ರ` ಸ್ಥಾಪನೆಗೆ ರೂಪಾಯಿ 270 ಕೋಟಿ ರೂಪಾಯಿ ಮಂಜೂರಾಗಿದೆ.
Special maintenance center : ವರ್ಷದ ಮಧ್ಯದಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳು ಹಳಿಗೆ ಇಳಿಯಲಿವೆ. ಈ ರೈಲುಗಳಿಗೆ ಅಗತ್ಯವಿರುವ 'ನಿರ್ವಹಣಾ ವಿಶೇಷ ಕೇಂದ್ರ' ಸ್ಥಾಪನೆಗೆ ರೂಪಾಯಿ 270 ಕೋಟಿ ರೂಪಾಯಿ ಮಂಜೂರಾಗಿದೆ.ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್ ಪುರಿಯಾ ಅವರು ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ.
ಈ ವರ್ಷದ ಮಧ್ಯ ಭಾಗದಲ್ಲಿ ಬೆಂಗಳೂರಿನ ಬಿಇಎಂಎಲ್ ತಯಾರಿಸಿರುವ ಸ್ಲೀಪರ್ ವ್ಯವಸ್ಥೆ ಹೊಂದಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕರ್ನಾಟಕದಲ್ಲಿ ಕಾರ್ಯಾಚರಣೆ ಆರಂಭಿಸಲಿವೆ. ಸ್ಲೀಪರ್ ವಂದೇ ಭಾರತ್ ರೈಲುಗಳ ನಿರ್ವಹಣೆಗಾಗಿ ವಿಶೇಷ ಕೇಂದ್ರದ ನಿರ್ಮಿಸುವ ಅಗತ್ಯತೆ ಇದೆ. ಹೀಗಾಗಿ ಬೆಂಗಳೂರಿನ ನಾಗವಾರದ ಸಮೀಪದ ಥಣಿಸಂದ್ರದ ಬಳಿ ಅಂದಾಜು ರೂಪಾಯಿ 270 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಂದ್ರ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಇದಕ್ಕೆ ಅನುದಾನ ಮಂಜೂರಾತಿ ಸಿಕ್ಕಿದೆ. ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಇದನ್ನು ಓದಿ : ಟೀಂ ಇಂಡಿಯಾಗೆ ಬಿಗ್ ಶಾಕ್! ಏಕದಿನ ವಿಶ್ವಕಪ್ ಹೀರೋ ಟೂರ್ನಿಯಿಂದಲೇ ಹೊರಕ್ಕೆ
ಕಾರ್ಗೋ ಟರ್ಮಿನಲ್-ಗೂಡ್‌ಶೆಡ್ ಅನಾವರಣ ನೈರುತ್ಯ ರೈಲ್ವೆ ವಿಭಾಗ ವ್ಯಾಪ್ತಿಯ ದೊಡ್ಡಬಳ್ಳಾಪುರದ ವಡ್ಡರಹಳ್ಳಿ ಬಳಿ ಖಾಸಗಿ ಸ್ಥಳದಲ್ಲಿ ಮಲ್ಟಿ ಮಾಡಲ್ ಕಾರ್ಗೋ ಟರ್ಮಿನಲ್ ಅನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ ಪೆನುಕೊಂಡ ಸಮೀಪ ಅಂದಾಜು ರೂಪಾಯಿ 21 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾದ ಆಟೋಮೊಬೈಲ್ ಗೂಡ್‌ಶೆಡ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 12ರಂದು ಅನಾವರಣಗೊಳಿಸಲಿದ್ದಾರೆ.
ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಕಾರಣ ಎರಡನೇ ವಂದೇ ಭಾರತ್ ರೈಲನ್ನು ಆರಂಭಿಸಲು ಭಾರತೀಯ ರೈಲ್ವೆ ಇಲಾಖೆ ಜಂಟಿ ತೀರ್ಮಾನಿಸಿದೆ. ಒಂದು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮೈಸೂರು ಚೆನ್ನೈ ಮಾರ್ಗದಲ್ಲಿ ಸಂಚರಿಸಿದರೆ, ಮತ್ತೊಂದು ರೈಲು ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕ ಭಾಗವಾದ ಕಲುಬುರಗಿಗೆ ಪ್ರಯಾಣ ಸೇವೆ ನೀಡಲಿವೆ. ಇವೆರಡು ರೈಲುಗಳಿಗೆ ಪ್ರಧಾನಿ ಮೋದಿಯವರು ಮಾಚ್ 12ರಂದು ಗ್ರೀನ್ ಸಿಗ್ನಲ್ ನೀಡಲಿದ್ದಾರೆ ಎಂದರು.
ಇದನ್ನು ಓದಿ : Travel Hacks: ವಿಮಾನ ಹತ್ತದೆ ವಿದೇಶಕ್ಕೆ ಹೋಗಿ ಎಂಜಾಯ್ ಮಾಡಬಹುದು..! ಹೇಗೆ ಗೊತ್ತಾ
ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣ ಮತ್ತು ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ತಲಾ ಒಂದು ಪ್ರಧಾನಮಂತ್ರಿ ಜನೌಷಧಿ ಕೇಂದ್ರ ತೆರೆಯಲಾಗಿದೆ.ಭಾರತೀಯ ರೈಲ್ವೆಯ ಮಹತ್ವದ 'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆಯಡಿ ಬೆಂಗಳೂರು ವಿಭಾಗ ವ್ಯಾಪ್ತಿಯಲ್ಲಿ 40 ಮಳಿಗೆಗಳು ಸಹ ಇದೇ ವೇಳೆ ಉದ್ಘಾಟನೆಗೊಳ್ಳಲಿವೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.