T20 World Cup 2024: T20 ವಿಶ್ವಕಪ್ 2024 USA ಮತ್ತು ವೆಸ್ಟ್ ಇಂಡೀಸ್’ನಲ್ಲಿ ಜೂನ್ 1 ರಿಂದ ನಡೆಯಲಿದೆ. ಮೇ ಮೊದಲ ವಾರದೊಳಗೆ ತಂಡಗಳು ತನ್ನ ತಂಡವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ ಈ ಬೆನ್ನಲ್ಲೇ ಟೀಂ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದೆ.
ಇದನ್ನೂ ಓದಿ: 2 ಚಮಚ ಮೊಸರಿಗೆ ಈ ಹಣ್ಣಿನ ರಸ ಬೆರೆಸಿ ಬಿಳಿಕೂದಲಿಗೆ ಹಚ್ಚಿ: ತಕ್ಷಣವೇ ಗಾಢ ಕಪ್ಪಾಗುವುದಲ್ಲದೆ ರೇಷ್ಮೆಯಂತೆ ಶೈನ್ ಆಗುತ್ತೆ!
ಪಿಟಿಐ ವರದಿಯ ಪ್ರಕಾರ, ತಂಡದ ಸ್ಟಾರ್ ಬೌಲರ್ ಮತ್ತು ಏಕದಿನ ವಿಶ್ವಕಪ್ ಹೀರೋ ಮೊಹಮ್ಮದ್ ಶಮಿ ಮುಂಬರುವ ಟಿ20 ವಿಶ್ವಕಪ್’ನಿಂದ ಹೊರಗುಳಿದಿದ್ದಾರೆ. ಇದರ ಪ್ರಕಾರ, ಸೆಪ್ಟೆಂಬರ್’ನಲ್ಲಿ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಮಾತ್ರ ಶಮಿ ಆಡಲಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜೈ ಶಾ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಈ ಮಾಹಿತಿಯನ್ನು ಹಂಚಿಕೊಂಡಿದೆ.
ಮೊಹಮ್ಮದ್ ಶಮಿ ಈಗ ಬಾಂಗ್ಲಾದೇಶ ಸರಣಿಯಲ್ಲಿ ಮಾತ್ರ ಕಂಬ್ಯಾಕ್ ಮಾಡಬಹುದು ಎಂದು ಜಯ್ ಶಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಭಾರತ ತಂಡವು ಈಗ ಸೆಪ್ಟೆಂಬರ್’ನಲ್ಲಿ ಬಾಂಗ್ಲಾದೇಶಕ್ಕೆ ಪ್ರವಾಸ ಮಾಡಲಿದೆ. ಈ ಪ್ರವಾಸದಲ್ಲಿ ತಂಡ ಎರಡು ಟೆಸ್ಟ್ ಪಂದ್ಯಗಳನ್ನೂ ಆಡಬೇಕಿದೆ.
ಇದಕ್ಕೂ ಮುನ್ನ ಶಮಿ ಐಪಿಎಲ್ 2024ರಿಂದಲೂ ಹೊರಗುಳಿದಿದ್ದರು. ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಶಮಿ ಇಡೀ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ಹೇಳಿತ್ತು. ಅವರ ನಿರ್ಗಮನದಿಂದ ಗುಜರಾತ್ ತಂಡ ಆಘಾತಕ್ಕೊಳಗಾಗಿದೆ. ಇದೀಗ ಟಿ20 ವಿಶ್ವಕಪ್ ನಲ್ಲೂ ಟೀಂ ಇಂಡಿಯಾ ಹಿನ್ನಡೆ ಅನುಭವಿಸಬಹುದು.
ಇದನ್ನೂ ಓದಿ: IPL 2024: ಧೋನಿ ನಿವೃತ್ತಿ…! CSKಗೆ ರೋಹಿತ್ ಶರ್ಮಾ ನಾಯಕ: IPL ಆರಂಭಕ್ಕೂ ಮುನ್ನ ಮಹತ್ವದ ಅಪ್ಡೇಟ್
ಮೊಹಮ್ಮದ್ ಶಮಿ ಭಾರತದ ಅತ್ಯುತ್ತಮ ಬೌಲರ್. ಅಲ್ಲದೆ ಏಕದಿನ ವಿಶ್ವಕಪ್’ನಲ್ಲಿ ಅತಿ ಹೆಚ್ಚು ವಿಕೆಟ್’ಗಳನ್ನು ಕಬಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ