ಬೆಂಗಳೂರು : ನಾಳೆ ಕರ್ನಾಟಕ ಬಂದ್ ಹಿನ್ನೆಲೆ ಇಂದು ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟದಿಂದ ಬಂದ್ ಗೆ ಬೆಂಬಲಕ್ಕೆ ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಿ. ಕೆಂಪೇಗೌಡ ರಸ್ತೆ, ಅವೆನ್ಯೂ ರೋಡ್, ಸಿಟಿ ಮಾರ್ಕೆಟ್, ಜಯನಗರ ಸೇರಿದಂತೆ ಅನೇಕ ಕಡೆ ಬಂದ್(Karnataka Bandh) ಗೆ ಬೆಂಬಲಯಾಚನೆ ಮಾಡಿದರು.


ಇದನ್ನೂ ಓದಿ : Basanagouda Patil Yatnal : ರಾಜ್ಯ ಬಿಜೆಪಿ ಸರ್ಕಾರದ ಬಗ್ಗೆ ಹೊಸ ಬಾಂಬ್ ಸಿಡಿಸಿದ ಶಾಸಕ ಯತ್ನಾಳ್!


ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ವಾಟಾಳ್ ನಾಗರಾಜ್(Vatal Nagaraj), Mes ಸಂಘಟನೆ ನಿಷೇಧ ಮಾಡಬೇಕು. ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ ಮಾಡಿದ್ದಾರೆ. ಹೀಗಾಗಿ ಕನ್ನಡ ಒಕ್ಕೂಟ ನಾಳೆ ಕರ್ನಾಟಕ ಬಂದ್ ಮಾಡುತ್ತೀದೆ ಎಂದರು.


ನೂರಾರು ಸಂಘಟನೆಗಳು ಬಂದ್ಗೆ ಬೆಂಬಲ ನೀಡಿದ್ದಾರೆ. ಇದು ಕನ್ನಡ(Kannada)ದ ಸ್ವಾಭಿಮಾನ ಬಂದ್ ಆಗಿದೆ. ಎಲ್ಲಾರು ನಾಳೆ ಕರ್ನಾಟಕ ಬಂದ್ ಗೆ ಬೆಂಬಲ‌ ಕೊಡಬೇಕು ಎಂದು ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ.


ಬೆಂಬಲ ವಾಪಸ್ ವಿಚಾರವಾಗಿ ಮಾತನಾಡಿದ ಅವರು, ಅದರ ಬಗ್ಗೆ ನಾನು ಮಾತಾಡಲ್ಲ. ನಾನಂತೂ ಬಂದ್ ಮಾಡೆ ಮಾಡ್ತೀನಿ. ಬಂದ್ ಯಶಸ್ವಿ ಆಗೇ ಆಗುತ್ತೆ ಎಂದು ಕಡಾಕಂಡಿತವಾಗಿ ಹೇಳಿದ್ದಾರೆ. 


ಇದನ್ನೂ ಓದಿ : Vaccine for Children : ಜನವರಿ 3ರಿಂದ ರಾಜ್ಯದ ಮಕ್ಕಳಿಗೂ ಸಿಗಲಿದೆ ವ್ಯಾಕ್ಸಿನ್!


ಕರವೇ ನಾರಾಯಣ ಗೌಡ ರಾಜಭವನ ಮತ್ತಿಗೆ ವಿಚಾರ ಮಾತನಾಡಿದ ಅವರು, ರಾಜಭವನ ಮುತ್ತಿಗೆ ಹಾಕಿರುವುದು ಒಳ್ಖೆ ವಿಷಯ. ಕೇಂದ್ರ ಸರ್ಕಾರ()ಕ್ಕೆ ಬಿಸಿ ಮುಟ್ಟುವ ಕೆಲಸ ಮಾಡ್ತಿದ್ದಾರೆ. ನಾರಾಯಣ ಗೌಡರ ರಾಜಭವನ ಮುತ್ತಿಗೆ ಪ್ರತಿಭಟನೆ, ನಾಳಿನ ನಮ್ಮ ಬಂದ್ ಗೆ ಸಹಕಾರಿಯಾಗುತ್ತೆ ಎಂದು ಹೇಳಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.