Basanagouda Patil Yatnal : ರಾಜ್ಯ ಬಿಜೆಪಿ ಸರ್ಕಾರದ ಬಗ್ಗೆ ಹೊಸ ಬಾಂಬ್ ಸಿಡಿಸಿದ ಶಾಸಕ ಯತ್ನಾಳ್!

ಸಚಿವ ಸಂಪುಟದಲ್ಲಿ ಬದಲಾವಣೆಯಾಗಲಿದೆ, ಪಕ್ಷದ ಸಂಘಟನೆಯಲ್ಲಿ ಬದಲಾವಣೆಯಾಗಲಿದೆ. ವಿಧಾನ ಸಭೆ ಚುನಾವಣೆಗೆ ಪಕ್ಷವನ್ನ ಬಲ ಪಡೆಸಲು ಬದಲಾವಣೆಯಾಗಲಿದೆ. ಪ್ರಧಾನಿಗಳ ಗುಪ್ತಚರ ಇಲಾಖೆ ಎಲ್ಲವನ್ನೂ ನೋಡುತ್ತಿದೆ ಎಂದರು. 

Written by - Channabasava A Kashinakunti | Last Updated : Dec 30, 2021, 05:15 PM IST
  • ರಾಜ್ಯ ಬಿಜೆಪಿ ಸರ್ಕಾರ ಹಾಗೂ ಪಕ್ಷದಲ್ಲಿನ ಬದಲಾವಣೆ
  • ಹೊಸ ಬಾಂಬ್ ಸಿಡಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
  • ಮತ್ತೆ ಸಚಿವ ಸ್ಥಾನದ ಆಸೆ ಹೊರಹಾಕಿದ ಯತ್ನಾಳ್
Basanagouda Patil Yatnal : ರಾಜ್ಯ ಬಿಜೆಪಿ ಸರ್ಕಾರದ ಬಗ್ಗೆ ಹೊಸ ಬಾಂಬ್ ಸಿಡಿಸಿದ ಶಾಸಕ ಯತ್ನಾಳ್! title=

ವಿಜಯಪುರ : ರಾಜ್ಯ ಬಿಜೆಪಿ ಸರ್ಕಾರ ಹಾಗೂ ಪಕ್ಷದಲ್ಲಿನ  ಬದಲಾವಣೆಯ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್(Basanagouda Patil Yatnal), ಸಚಿವ ಸಂಪುಟದಲ್ಲಿ ಬದಲಾವಣೆಯಾಗಲಿದೆ, ಪಕ್ಷದ ಸಂಘಟನೆಯಲ್ಲಿ ಬದಲಾವಣೆಯಾಗಲಿದೆ. ವಿಧಾನ ಸಭೆ ಚುನಾವಣೆಗೆ ಪಕ್ಷವನ್ನ ಬಲ ಪಡೆಸಲು ಬದಲಾವಣೆಯಾಗಲಿದೆ. ಪ್ರಧಾನಿಗಳ ಗುಪ್ತಚರ ಇಲಾಖೆ ಎಲ್ಲವನ್ನೂ ನೋಡುತ್ತಿದೆ ಎಂದರು. 

ಇದನ್ನೂ ಓದಿ : Vaccine for Children : ಜನವರಿ 3ರಿಂದ ರಾಜ್ಯದ ಮಕ್ಕಳಿಗೂ ಸಿಗಲಿದೆ ವ್ಯಾಕ್ಸಿನ್!

ಕಚೇರಿಗೆ ಹೋಗದ ಸಚಿವರು ಯಾರು? ಸೇರಿ ಎಲ್ಲ ಬೆಳವಣಿಗೆಯನ್ನ ಪ್ರಧಾನಿ ಗಮನಿಸುತ್ತಿದ್ದಾರೆ. ಸಂಕ್ರಾಂತಿ ಬಳಿಕ ಮೋದಿ ದೊಡ್ಡ ನಿರ್ಧಾರ ತೆಗೆದುಕೊಳ್ತಾರೆ. ಪಕ್ಷದಲ್ಲಿ, ಸರ್ಕಾರದಲ್ಲಿ ಮೋದಿ ಬದಲಾವಣೆ ಮಾಡಲಿದ್ದಾರೆ. ಕಳೆದ ಸಂಕ್ರಾಂತಿಗೆ ಹೇಳಿದ್ದೆ ಒಂದು ವಿಕೆಟ್ ಹಾರಿತ್ತು. ಈ ಬಾರಿಯು ಸಂಕ್ರಾಂತಿಯ ವರೆಗ ತಡೆಯಿರಿ ಎಂದು ಹೇಳಿದ್ದಾರೆ. 

ಸಿಎಂ ಫಾರಿನ್ ಟೂರ್ ವದಂತಿ ವಿಚಾರವಾಗಿ ಮಾತನಾಡಿದ ಅವರು, ಅವರ ವೀಸಾ ಬಂದಿದ್ದರೇ ನನಗೆ ತೋರಿಸಿ.  ಸಿಎಂ(Basavaraj Bommai) ಫಾರಿನ್ ಟೂರ್ ಇಲ್ಲ, ಇದ್ದರು ಗೊತ್ತಾಗುತ್ತಿತ್ತು. ಸಿಎಂ ಪ್ರವಾಸ ಚಲನವಲನ ಸಾರ್ವಜನಿಕವಾಗಿರುತ್ತೆ. ನಾನು ಸಿಎಂ ಬದಲಾವಣೆ ಬೇಡ ಅನ್ನೋದು ಇಲ್ಲ, ಬೇಕು ಅನ್ನೋದು ಇಲ್ಲ. ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ. 

ಇದನ್ನೂ ಓದಿ : ಕೇರಳದ ಅಥ್ಲೀಟ್ ಜಿತಿನ್ ಜೊತೆ ಸಪ್ತಪದಿ ತುಳಿದ ಕರ್ನಾಟಕದ ಹೆಮ್ಮೆಯ ಅಥ್ಲೀಟ್ ಪೂವಮ್ಮ

ಮತ್ತೆ ಸಚಿವ ಸ್ಥಾನದ ಆಸೆ ಹೊರಹಾಕಿದ ಯತ್ನಾಳ್

ಗಟ್ಸ್ ಇರೋರು ಗೃಹ ಸಚಿವ(Home Minister)ರಾಗಬೇಕು. ನಮ್ಮಂತವರ ಕಯ್ಯಲ್ಲಿ ಕೊಟ್ರೆ ಬರೊಬ್ಬರಿ ಮಾಡ್ತೀವಿ ಎಂದು ಶಾಸಕ ಯತ್ನಾಳ್ ಮತ್ತೆ ಸಚಿವ ಸ್ಥಾನದ ಆಸೆ ಹೊರಹಾಕಿದ್ದಾರೆ. ದೇಶವಿರೋಧಿ ಚಟುವಟಿಕೆ ಮಾಡೋರನ್ನ, ಉಪಾದ್ಯಾಪಿಗಳಿಗೆ ಸರಿಯಾಗಿ ಮಾಡ್ತೀವಿ. ಈಗಿನ ಗೃಹ ಮಂತ್ರಿ ಒಳ್ಳೆಯರು ಪ್ರಾಮಾಣಿಕರು. ಆರಗ ಜ್ಞಾನೇಂದ್ರ ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿಗೆ ಸೂಕ್ತರಿದ್ದಾರೆ ಎಂಉ ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News