ಹಾಸನ: ಬಾಹುಬಲಿ 88ನೇ ಮಹಾಮಸ್ತಕಾಭಿಷೇಕದ ಅಂಗವಾಗಿ ಶ್ರವಣಬೆಳಗೊಳದಲ್ಲಿ ಶನಿವಾರ ನಡೆದ ರಾಜ್ಯಾಭಿಷೇಕ ಮಹೋತ್ಸವಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜ್ಯಪಾಲ ವಜುಭಾಯಿ ವಾಲಾ ಚಾಲನೆ ನೀಡಿದರು.


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಜ್ಞಾನ ನೀಡುವ, ಸದ್ಬುದ್ಧಿ ನೀಡುವ ಗುರುಗಳ ಸನ್ನಿಧಿಯಲ್ಲಿ ಸಮಾರಂಭ ನಡೆಯುತ್ತಿದೆ. ಅವರ ಆಶೀರ್ವಾದ ಪಡೆಯುವುದು ನಮ್ಮ ಕರ್ತವ್ಯ. ಈ ಪರಂಪರೆ ನಾವು ಉಳಿಸಿಕೊಳ್ಳಬೇಕು. ಮಹಾಮಜ್ಜನದಲ್ಲಿ ಭಾಗವಹಿಸುವ ಪುಣ್ಯ ನನ್ನದಾಗಿದೆ ಎಂದರು.



ದಿವ್ಯ ಜ್ಞಾನ ಹಾಗೂ ಮೋಕ್ಷ ಪಡೆಯಲು ಬಾಹುಬಲಿಯ ಬೋಧನೆಗಳು ಹಾಗೂ ರತ್ನ ತ್ರಯಗಳು ಅಗತ್ಯ. ಮಾನವನಿಗೆ ಸರಳತೆ, ಶಾಂತಿ, ತ್ಯಾಗ ಬಾಹುಬಲಿ ಬೋಧಿಸಿದ್ದಾನೆ. ಅಶಾಂತಿ, ವಿವಾದ ರಹಿತವಾದ ವಿಶ್ವ ನಿರ್ಮಾಣದಲ್ಲಿ ಆ ಸಂದೇಶಗಳು ಮಾರ್ಗದರ್ಶಕ ಎಂದು ನುಡಿದರು.


ಇದಕ್ಕೂ ಮುಂಚೆ, ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನಡೆದ ರಾಜ್ಯಾಭಿಷೇಕ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಕಳಸದಲ್ಲಿನ ನವರತ್ನಗಳಿಂದ ಬಾಹುಬಲಿ ಮೂರ್ತಿಗೆ ಅಭಿಷೇಕ ಹಾಗೂ ಮೂರ್ತಿಗೆ ಚಾಮರ ಸೇವೆ, ಮಂಗಳಾರತಿಯನ್ನು ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು ನೆರವೇರಿಸಿದರು.