Video: ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ
A Slap From Siddaramaiah: ಮುಂಬರುವ ವಿಧಾನ ಸಭೆ ಚುನಾವಣೆಗೆ ಈಗಾಗಲೇ ಜಿದ್ದಾಜಿದ್ದಿ ಶುರುವಾಗಿದೆ.ಇದರ ನಡುವೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿರುವ ದೃಶ್ಯಯೊಂದು ಬಾರಿ ವೈರಲ್ ಆಗಿದೆ.
ಬೆಂಗಳೂರು: ಮುಂಬರುವ ವಿಧಾನ ಸಭೆಗೆ ಈಗಾಗಲೇ ಜಿದ್ದಾಜಿದ್ದಿ ಶುರುವಾಗಿದೆ. ಅದರ ನಡುವೆ ಕಾಂಗ್ರೆಸ್ ಹಾಗೂ ಬಿಜೆಪಿ ಸೆಣಸಾಟ ಜೋರಾಗಿಯೇ ಇದೆ. ಇತ್ತಾ ಕೈ , ಹಾಗೂ ಕಮಲ ನಾಯಕರು ನಾಮುಂದು, ತಾಮುಂದು ಎಂದು ಬಡಿದಾಡಿಕೊಳ್ಳುತ್ತಿದ್ದಾರೆ.
ಇದರ ನಡುವೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿರುವ ದೃಶ್ಯಯೊಂದು ಚರ್ಚೆಗೆ ಕಾರಣವಾಗಿದೆ. ಇಂದು ಬೆಳಗ್ಗೆ ಹರಿಹರ ಶಾಸಕ ಎಸ್.ರಾಮಪ್ಪ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಅವರ ಮನೆಯಿಂದ ಹೊರ ಬರುವ ವೇಳೆ ರಾಮಪ್ಪ ಬೆಂಬಲಿಗರ ಗುಂಪೊಂದು ಅವರಿಗೆ ಟಿಕೇಟ್ ನೀಡುವಂತೆ ಸಿದ್ದರಾಮಯ್ಯನಿಗೆ ಸುತ್ತುವರೆದರು. ಈ ವೇಳೆ ವಿರೋಧ ಪಕ್ಷದ ಕೈ ನಾಯಕ ಕಾರ್ಯಕರ್ತನಿಗೆ ಕಪಾಳಕ್ಕೆ ಬಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಡ್ರಗ್ ನಿಯಂತ್ರಣಕ್ಕೆ ಗಂಭೀರ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಈ ವಿಡಿಯೋವನ್ನು ಬಿಜೆಪಿ ಕರ್ನಾಟಕ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡು ʼಶಾದಿ ಭಾಗ್ಯದ ನಾಯಕ ಸಿದ್ದರಾಮಯ್ಯ ಅವರಿಂದ ಕಪಾಳ ಮೋಕ್ಷ ಭಾಗ್ಯ ಕಪಾಳ ಮೋಕ್ಷ ಭಾಗ್ಯʼ ಎಂದು ಬರೆದುಕೊಂಡಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.