Vijayanagar Sri guru Kottureshwar : ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಕೊಟ್ಟೂರು ಶ್ರೀ ಗುರು ಬಸವೇಶ್ವರಸ್ವಾಮಿ ದೇವಾಲಯದ ವಾರ್ಷಿಕ ರಥೋತ್ಸವದ ದಿನಾಂಕ ನಿಗದಿಯಾಗಿದ್ದು, ಲಕ್ಷಾಂತರ ಭಕ್ತರು ಈ ರಥೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಜನದಟ್ಟಣೆ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಹೊಸಪೇಟೆ-ಬಳ್ಳಾರಿ-ಕೊಟ್ಟೂರು-ದಾವಣಗೆರೆ ಮಾರ್ಗವಾಗಿ ವಿಶೇಷ ರೈಲು ಸಂಚಾರ ಸೇವೆ ನೀಡಲು ನೈರುತ್ಯ ರೈಲು ನಿರ್ಧರಿಸಿದ್ದು, ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಶ್ರೀ ಗುರುಬಸವೇಶ್ವರಸ್ವಾಮಿ ದೇವಾಲಯದ ವಾರ್ಷಿಕ ರಥೋತ್ಸವದ ಅಂಗವಾಗಿ ಫೆಬ್ರವರಿ 29ರಿಂದ ಮಾರ್ಚ್‌ 5ರವರೆಗೆ ಈ ವಿಶೇಷ ರೈಲು ಸಂಚಾರ ನಡೆಸಲಿದೆ.


ಇದನ್ನು ಓದಿ :Viral Video: ಚಾಲಕನಿಲ್ಲದೆ 84KM ಸಂಚರಿಸಿದ ರೈಲು; ಮುಂದೆ ಆಗಿದ್ದೇನು?


ಬಳ್ಳಾರಿ ಹಾಗೂ ದಾವಣಗೆರೆ ಮಾರ್ಗದಲ್ಲಿ ಸಂಚರಿಸುವ ಈ ರೈಲು ತೋರಣಗಲ್ಲು, ಹೊಸಪೇಟೆ, ಹುಬ್ಬಳ್ಳಿ, ಕೊಟ್ಟೂರು ಹಾಗೂ ಅಮರಾವತಿ ನಿಲ್ದಾಣಗಳಲ್ಲಿ ಪ್ರಯಾಣಿಕರು ಹತ್ತಲು ಅವಕಾಶವಿದೆ. ಫೆಬ್ರವರಿ 29ರಿಂದ ಮಾರ್ಚ್‌ 5ರವರೆಗೆ ಪ್ರತಿ ನಿತ್ಯವು ಬಳ್ಳಾರಿ-ದಾವಣಗೆರೆ ವಿಶೇಷ ರೈಲು ಆರು ಬಾರಿ ಇದೇ ಮಾರ್ಗದಲ್ಲಿ ಸಂಚಾರ ಮಾಡಲಿದೆ. 


 ರಥೋತ್ಸವದ ಅಂಗವಾಗಿ 29/2/2024 ರಿಂದ 10/3/2024ರ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಪ್ರತಿನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಲಿದ್ದಾರೆ. ಫೆಬ್ರವರಿ 29ರಂದು ಬೆಳ್ಳಿ ರಥದಲ್ಲಿ ನಾಗರ ವಾಹನೋತ್ಸವ, ಮಾರ್ಚ್ 1ರಂದು ಬೆಳ್ಳಿ ರಥದಲ್ಲಿ ನವಿಲು ವಾಹನೋತ್ಸವ, ಮಾರ್ಚ್ 2ರಂದು ಬೆಳ್ಳಿ ರಥದಲ್ಲಿ ಗಜವಾಹನೋತ್ಸವ, ಮಾರ್ಚ್ 3ರಂದು ಬೆಳ್ಳಿ ರಥದಲ್ಲಿ ವೃಷಭ ವಾಹನೋತ್ಸವ ನಡೆಯಲಿದೆ. 


ಇದನ್ನು ಓದಿ : ಫಲಾನುಭವಿ ರೈತರಿಗೊಂದು ಎಚ್ಚರಿಕೆ, ಈ ಎರಡು ಸಂಗತಿ ಮರೆತರೆ ಲಿಸ್ಟ್ ನಿಂದ ನಿಮ್ಮ ಹೆಸರು ಔಟ್!


ಪ್ರತಿ ವರ್ಷ ಜಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಹಿತದೃಷ್ಟಿಯಿಂದ ವಿಜಯನಗರ ಜಿಲ್ಲಾಡಳಿತ ಕೊಟ್ಟೂರು ಪಟ್ಟಣ ವ್ಯಾಪ್ತಿಯಲ್ಲಿ ಮದ್ಯಪಾನ ಮಾರಾಟ ಮತ್ತು ಸಾಗಾಣಿಕೆ ಮಾಡದಂತೆ ಹಾಗೂ ಮದ್ಯದಂಗಡಿ, ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ಮುಚ್ಚುವಂತೆ ಆದೇಶಿಸುತ್ತದೆ. ಈ ಬಾರಿಯೂ ಇದೇ ನಿಯಮ ಮುಂದುವರಿಯುವ ಸಾಧ್ಯತೆ ಇದೆ.


ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿರುವ ಶ್ರೀ ಗುರುಬಸವೇಶ್ವರಸ್ವಾಮಿ ದೇವಾಲಯದ ವಾರ್ಷಿಕ ರಥೋತ್ಸವ 4/3/2024ರಂದು ನಡೆಯಲಿದೆ.ಶ್ರೀ ಗುರುಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಮತ್ತು ಬೆಳ್ಳಿ ರಥೋತ್ಸವ ಎಂದೇ ಕೊಟ್ಟೂರು ಜಾತ್ರೆ ಪ್ರಸಿದ್ಧಿ ಪಡೆದಿದೆ.ಮಾರ್ಚ್‌ 4ರಂದು ಶ್ರೀ ಸ್ವಾಮಿಯ ಮಹಾ ರಥೋತ್ಸವ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.