Basangouda Patil Yatnal : `ಹೋಗ್ರಾಪ್ಪಾ ಮಕ್ಕಳ ಹೋಗ್ರಿ, ಪಾಕಿಸ್ತಾನಕ್ಕೆ ಹೋಗಿ ಇರ್ರಿ`
ಪಾಕಿಸ್ತಾನದಲ್ಲಿ 10 ಸಾವಿರ ರೂಪಾಯಿ ಸಿಲಿಂಡರ್ ಆಗಿದೆ. ನಮ್ಮಲ್ಲಿ 100 ರೂಪಾಯಿ ಹೆಚ್ಚಾದ್ರೆ ಮೋದಿ ಕಾರಣ ಅಂತಾರೆ. 10 ರೂಪಾಯಿ ಪೆಟ್ರೋಲ್ ಹೆಚ್ಚಾದ್ರೆ ಧಿಕ್ಕಾರ, ಧಿಕ್ಕಾರ ಮೋದಿಗೆ ಧಿಕ್ಕಾರ ಅಂತಾರೆ. ಹೋಗ್ರಾಪ್ಪಾ ಮಕ್ಕಳ ಹೋಗ್ರಿ, ಪಾಕಿಸ್ತಾನಕ್ಕೆ ಹೋಗಿ ಇರ್ರಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆ : ಪಾಕಿಸ್ತಾನದಲ್ಲಿ 10 ಸಾವಿರ ರೂಪಾಯಿ ಸಿಲಿಂಡರ್ ಆಗಿದೆ. ನಮ್ಮಲ್ಲಿ 100 ರೂಪಾಯಿ ಹೆಚ್ಚಾದ್ರೆ ಮೋದಿ ಕಾರಣ ಅಂತಾರೆ. 10 ರೂಪಾಯಿ ಪೆಟ್ರೋಲ್ ಹೆಚ್ಚಾದ್ರೆ ಧಿಕ್ಕಾರ, ಧಿಕ್ಕಾರ ಮೋದಿಗೆ ಧಿಕ್ಕಾರ ಅಂತಾರೆ. ಹೋಗ್ರಾಪ್ಪಾ ಮಕ್ಕಳ ಹೋಗ್ರಿ, ಪಾಕಿಸ್ತಾನಕ್ಕೆ ಹೋಗಿ ಇರ್ರಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸಕ ಯತ್ನಾಳ್, ನಮ್ಮ ಗಾಂಧಿ ಮುತ್ಯಾ ಪಾಕಿಸ್ತಾನ ಮಾಡಿ ಕೊಟ್ಟಾನಲ್ಲ. ಹೋಗ್ರಿ ಮಕ್ಕಳ ಎಲ್ಲಾರೂ ಗೋಳೆ ಆಗಿ. ಒಂದು ಕಡೆಯಿಂದ ಹೋಗಿ ಪಾಕಿಸ್ತಾನದಲ್ಲಿ ಇರ್ರಿ. ನಾವೆಲ್ಲಾ ಹಿಂದೂಗಳು ಆರಾಮವಾಗಿ ಇರ್ತಿವಿ. ಅಂಬೇಡ್ಕರ್ ಆವಾಗ್ಲೆ ಹೇಳಿದ್ರು, ಪಾಕಿಸ್ತಾನ ಒಡೆಯಬೇಡಿ. ಒಡೆದು ಕೊಡುವುದಾದ್ರೆ ಇಲ್ಲಿಯವರೆನ್ನೆಲ್ಲಾ ಅಲ್ಲಿ ಕಳಿಸಿಬಿಡಿ ಅಂದ್ರು. ಅಲ್ಲಿಯ ಹಿಂದೂಗಳನ್ನೆಲ್ಲಾ ಇಲ್ಲಿ ತಂದು ಒಗೀರಿ.. ಭಾರತ ಸುರಕ್ಷಿತವಾಗಿರುತ್ತೆ. ಅವರೆಂದೂ ನಮ್ಮ ಜೊತೆ ಒಂದಾಗಿರೋದಿಲ್ಲ. ಅವರೆಲ್ಲಾ ನಮಗೆ ಕಾಫೀರರು ಅಂತಾರೆ. ಪಾಕಿಸ್ತಾನದವರು ಹೇಳ್ತಾರೆ ಕಾಫೀರ ಕೋ ಮಾರೆಂಗೆ.. ಕ್ಯಾ ಲೌಡಾ ಮಾರೆಂಗೆ ರೇ. ಘರ್ ಘರ್ ಮೇ ಶಿವಾಜಿ ಹೈ.. ಘರ್ ಮೆ ಮಹಾರಾಣಾ ಪ್ರತಾಪ ಪೈದಾ ಹೋರಹೆ ಹೈ ಹಿಂದುಸ್ತಾನ್ ಮೆ, ಪ್ರಧಾನ ಮಂತ್ರಿ ಮೋದಿ , ಛತ್ರಪತಿ ಶಿವಾಜಿ ಕಾ ಅವತಾರ್ ಹೈ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಐಎಎಸ್ Vs ಐಪಿಎಸ್ ವಾರ್ : 8 ವರ್ಷಗಳ ನಂತರ ಡಿಕೆ ರವಿ ಸಾವಿನ ಸುದ್ದಿ ಕೆದಕಿದ್ಯಾಕೆ..!
ಇನ್ನು ಮುಂದುವರೆದು ಮಾತನಾಡಿದ ಅವರು, ಮರಾಠ ಸಾಮ್ರಾಜ್ಯ ಅಂತ ಹೇಳಿದ್ರು. ವ್ಯವಸ್ಥಿತವಾಗಿ ಈ ಲೇಖಕರು ಏನಿದ್ದಾರಲ್ಲ. ಇವರು ಬಹಳ ಬದ್ಮಾಸ್ ಸೂ.. ಮಕ್ಕಳು ಹ್ಯಾಂಗ್ ಬೇಕೋ ಹಂಗ ಬರದಾರಾ.. ಇವರೆಲ್ಲಾ ಬುದ್ದಿಜೀವಿಗಳಂತ ಇವರು ನಾನು ಹೇಳಿದೆ, ಮಕ್ಕಳ ನೀವು ಲದ್ದಿಜೀವಿಗಳು ಅಂತ. ನಮ್ಮ ಕನ್ನಡ ಪುಸ್ತಕದಾಗ ಶಿವಾಜಿ ಮಹಾರಾಜರದ್ದು ಸ್ವಲ್ಪೇ.. ಗುಣವಂತನಾದ ಅಕ್ಬರ್, ಅಕ್ಬರ್ ದಿ ಗ್ರೇಟ್ ಅಂತ ಬರೆದ್ರು. ಅಕ್ಬರ್ ಮಾಡಿದ ದಬ್ಬಾಳಿಕೆ, ಲಕ್ಷಾಂತರ ಹಿಂದೂಗಳ ಕಗ್ಗೊಲೆ.. ಮತಾಂತರ ಮಾಡಿದ ಅಲ್ಲದೆ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ..ನಾವು ಉಳಿದಿದ್ದೇ ಮಹಾನ್ ಪುರುಷರಿಂದ. ಭಾರತ ಸಶಕ್ತವಾಗಲು ಮೋದಿ ಕಾರಣ ಎಂದ ಎಂದು ಗುಡುಗಿದ್ದಾರೆ.
ಇದನ್ನೂ ಓದಿ : Rohini Sindhuri :ನನ್ನ ಪ್ರಶ್ನೆ ಇಷ್ಟೇ..ʼರೋಹಿಣಿ ಸಿಂಧೂರಿ ಯಾಕೆ ಡಿ ಕೆ ರವಿನ ಬ್ಲಾಕ್ ಮಾಡಲಿಲ್ಲʼ ?
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.