Rohini Sindhuri :ನನ್ನ ಪ್ರಶ್ನೆ ಇಷ್ಟೇ..ʼರೋಹಿಣಿ ಸಿಂಧೂರಿ ಯಾಕೆ ಡಿ ಕೆ ರವಿನ ಬ್ಲಾಕ್ ಮಾಡಲಿಲ್ಲʼ ?

D Roopa vs Rohini Sindhuri : ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಕುರಿತಂತೆ  ಮಾಧ್ಯಮ ವರದಿಗಾರ ಮುಂದೆ  ಐಪಿಎಸ್‌ ಅಧಿಕಾರಿ ಡಿ. ರೂಪಾ   ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

Last Updated : Feb 19, 2023, 06:19 PM IST
  • ಮಾಧ್ಯಮಗಳ ಮುಂದೆ ರೋಹಿಣಿ ಸಿಂಧೂರಿ ಕುರಿತಂತೆ ಹಲವಾರು ಪ್ರಶ್ನೆ ಮುಂದಿಟ್ಟ ರೂಪ
  • ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್ ಎಲ್ಲರ ಕೈ ಸೇರಿದೆ
  • ಡಿಕೆ ರವಿ ಮರಣ ಮೆಂಟಲ್‌ ಇಲ್ನೆಸಿಂದ ಎಂದಿದ್ದಾರೆ
Rohini Sindhuri :ನನ್ನ ಪ್ರಶ್ನೆ ಇಷ್ಟೇ..ʼರೋಹಿಣಿ ಸಿಂಧೂರಿ ಯಾಕೆ ಡಿ ಕೆ ರವಿನ ಬ್ಲಾಕ್ ಮಾಡಲಿಲ್ಲʼ ? title=

D Roopa vs Rohini Sindhuri :ಸೋಷಿಯಲ್‌ ಮೀಡಿಯಾದಲ್ಲಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಫೋಟೋಗಳನ್ನು ಹಂಚಿಕೊಂಡ ಬೆನ್ನಲ್ಲೆ ಕೆಲ ನೆಟ್ಟಿಗರು ಸೇರಿದಂತೆ ಜನರು ಐಪಿಎಸ್‌ ಅಧಿಕಾರಿ ಡಿ. ರೂಪಾ ಅವರನ್ನು ಪ್ರಶ್ನೆ ಮಾಡಿದ್ದಾರೆ. ಇದೀಗ ಮತ್ತೇ ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ಸುದೀರ್ಘ ಬರಹ ಬರೆದುಕೊಳ್ಳುವ ಮೂಲಕ ಪ್ರಶ್ನೆ ಮಾಡಿದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಡಿ.ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದರು. 
ಸೋಷಿಯಲ್‌ ಮೀಡಿಯಾದಲ್ಲಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಫೋಟೋಗಳನ್ನು ಹಂಚಿಕೊಂಡ ಬೆನ್ನಲ್ಲೆ ಕೆಲ ನೆಟ್ಟಿಗರು ಸೇರಿದಂತೆ ಜನರು ಐಪಿಎಸ್‌ ಅಧಿಕಾರಿ ಡಿ. ರೂಪಾ ಅವರನ್ನು ಪ್ರಶ್ನೆ ಮಾಡಿದ್ದಾರೆ. ಇದೀಗ ಮತ್ತೇ ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ಸುದೀರ್ಘ ಬರಹ ಬರೆದುಕೊಳ್ಳುವ ಮೂಲಕ ಪ್ರಶ್ನೆ ಮಾಡಿದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಹೊಸ ರೂಪ ಪಡೆದುಕೊಂಡಿದೆ.  

ಇದನ್ನೂ ಓದಿ: IAS vs IPS : ರೋಹಿಣಿ ಸಿಂಧೂರು ವಿರುದ್ಧ ಮತ್ತೆ ಗುಡುಗಿದ ಡಿ.ರೂಪ!

ಮಾಧ್ಯಮ ವರದಿಗಾರ ಮುಂದೆ , ಈ ಕುರಿತಂತೆ ಹಲವು ಪ್ರಶ್ನೆಗಳನ್ನು ಮುಂದಿಟ್ಟ ರೂಪಾ ,ಕೆಲವರು ರೋಹಿಣಿ ಸಿಂಧೂರಿ ಕಳಿಸಿದ ಸಾಲುಗಳನ್ನು ಕಳಿಸಿದ್ದೀರಿ.
ಅದರಲ್ಲಿ ಆಕೆ ಹೇಳುತ್ತಾರೆ, ಡಿಕೆ ರವಿ ಸತ್ತದ್ದು  ಮೆಂಟಲ್‌ ಇಲ್ನೆಸಿಂದ ಎಂದಿದ್ದರು.  ರವಿಯನ್ನು ಇಷ್ಟು ನಿಕೃಷ್ಟವಾಗಿ ಹೀಯಾಲಿಸಿದರೆ? ನನ್ನ ಪ್ರಶ್ನೆ ಇಷ್ಟೇ...ರೋಹಿಣಿ ಸಿಂಧೂರಿ ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್ ನಲ್ಲಿ ಎಲ್ಲರ ಕೈ ಸೇರಿದೆ. ಒಬ್ಬ ಪುರುಷ ಎಲ್ಲೆ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ. ಅಂದರೆ ಉತ್ತೇಜನ ಕೊಟ್ಟಂತೆ ಅಲ್ಲವೇ? ಅದೇ ರೀತಿ ಐಎಎಸ್ ಅಧಿಕಾರಿಗಳಿಗೆ ಕಳಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗುವುದಿಲ್ಲವೇ ಎಂದು ಆರೋಪಿದ್ದಾರೆ. 

ಇದನ್ನೂ ಓದಿ: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಖಾಸಗಿ ಫೋಟೋ ವೈರಲ್‌..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News