ಚಿಕ್ಕಮಗಳೂರು: ಕಾಡಾನೆ ದಾಳಿಗೆ ತುತ್ತಾಗಿ ಮಹಿಳೆಯೊಬ್ಬಳು ಮೃತಪಟ್ಟಿರುವ ವಿಚಾರವಾಗಿ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಹೊಡೆದಿರುವುದಲ್ಲದೆ ಅವರ ಬಟ್ಟೆಯನ್ನು ಹರಿದು ಹಾಕಿರುವ ಘಟನೆಯ ಜಿಲ್ಲೆಯ ಮೂಡಿಗೆರಿ ತಾಲೂಕಿನ ಕುಂದೂರಿನಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Guru Margi 2022 : ನ. 24 ರಿಂದ ಗುರುದೇವನ ಚಲನೆ, ಈ ರಾಶಿಯವರಿಗೆ ಹೊಳೆಯಲಿದೆ ಅದೃಷ್ಟ!


ಈಗ ಈ ವಿಚಾರವಾಗಿ ಮಾತನಾಡಿರುವ ಶಾಸಕರು ಜನರು ತಮಗೆ ಆನೆ ಸಾಕಿದ್ದಾರೆ ಎಂದು ಸಂಚುರೂಪಿಸಿ ಹೊಡೆದಿದ್ದಾರೆ ಈ ಘಟನೆಯಲ್ಲಿ ಪೋಲೀಸರ ವೈಫಲ್ಯವು ಎದ್ದು ಕಾಣುತ್ತದೆ.ನಾನು ಅಲ್ಲೆ ಇರ್ತಿದ್ದೆ ಪೊಲೀಸ್ ಮಿಸ್ ಗೈಡ್ ಮಾಡಿ ಹೊರ ಕಳುಹಿಸಿದ್ರು, ಸಾರ್ವಜನಿಕರ ಸೇವೆ ಮಾಡಲು ಇರೋರು ಎಲ್ಲ ತಾಗ್ಯಕ್ಕೂ ರೆಡಿ ಇರ್ತೀವಿ, ಆ ಜಾಗ ಬಿಟ್ಟು ಕದಲ್ತಾ ಇರ್ಲಿಲ್ಲ'ಎಂದು ಶಾಸಕ ಎಂ. ಪಿ.ಕುಮಾರಸ್ವಾಮಿ ಹೇಳಿದ್ದಾರೆ.


ಇದನ್ನೂ ಓದಿ : Swapna Shastra : ಕನಸಿನಲ್ಲಿ ಮೀನುಗಳನ್ನು ಕಂಡರೆ ಶುಭ ಅಥವಾ ಅಶುಭನ : ಇಲ್ಲಿದೆ ನೋಡಿ


ಜಿಲ್ಲೆಯ ಹುಲ್ಲೆ ಮನೆ ಕುಂದೂರಿನಲ್ಲಿ ಕಾಡಾನೆ ತುಳಿದು ಮಹಿಳೆಯು ಮೃತಪಟ್ಟಿದ್ದರಿಂದ ಮಹಿಳೆಯ ಶವ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿಚಾರ್ಜ್ ಕೂಡ ಮಾಡಿದ್ರು. ಬೆಳಗ್ಗೆ 7.30ಕ್ಕೆ ಕಾಡಾನೆ ತುಳಿದು ಮಹಿಳೆ ಸಾವನ್ನಪ್ಪಿದ್ದಾಳೆ.ಇದಾದ ನಂತರ ಶಾಸಕರು ಸಾಯಂಕಾಲ ಆರು ಗಂಟೆ ಸುಮಾರಿಗೆ ಗ್ರಾಮಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಶಾಸಕರ ನಡುವೆ ಮಾತಿನ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿದೆ. ತದನಂತರ ಅಲ್ಲಿನ ಜನರು ಶಾಸಕರ ಮೇಲೆ ಹಲ್ಲೆಗೈದಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.