ವಿಮ್ಸ್ ದುರಂತ : ಮೃತರಿಗೆ 25 ಲಕ್ಷ ರೂ. ಪರಿಹಾರ ನೀಡುವಂತೆ ಕಾಂಗ್ರೆಸ್ ಒತ್ತಾಯ
ವಿಮ್ಸ್ ದುರಂತ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತ ವಿಧಾನಸಭೆ ಅಧಿವೇಶನದಲ್ಲಿವೂ ರೋಗಿಗಳ ಸಾವಿನ ಕುರಿತು ಆಡಳಿತಾರೂಢ ಬಿಜೆಪಿ ಪಕ್ಷದ ವಿರುದ್ಧ ಆರೋಪಗಳ ಮಳೆ ಸುರಿಯುತ್ತಿದೆ. ಅಲ್ಲದೆ, ಟ್ಟೀಟ್ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಮೃತ ರೋಗಿಗಳಿಗೆ 25 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಬೆಂಗಳೂರು : ವಿಮ್ಸ್ ದುರಂತ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತ ವಿಧಾನಸಭೆ ಅಧಿವೇಶನದಲ್ಲಿವೂ ರೋಗಿಗಳ ಸಾವಿನ ಕುರಿತು ಆಡಳಿತಾರೂಢ ಬಿಜೆಪಿ ಪಕ್ಷದ ವಿರುದ್ಧ ಆರೋಪಗಳ ಮಳೆ ಸುರಿಯುತ್ತಿದೆ. ಅಲ್ಲದೆ, ಟ್ಟೀಟ್ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಮೃತ ರೋಗಿಗಳಿಗೆ 25 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ವಿಮ್ಸ್ ಆಸ್ಪತ್ರೆಯ ಸಾವುಗಳಿಗೆ ವಿದ್ಯುತ್ ಕಡಿತ, ವೆಂಟಿಲೇಟರ್ ಕಾರಣವಲ್ಲ ಎಂದಾದರೆ ಉಳಿದ ರೋಗಿಗಳನ್ನು ಸ್ಥಳಾಂತರಿಸಿದ್ದೇಕೆ..? ಇದು ವಿದ್ಯುತ್ ಕಡಿತದಿಂದ ಆಗಿದ್ದೋ, ಕಳಪೆ ವೆಂಟಿಲೇಟರ್‌ಗಳಿಂದ ಆಗಿದ್ದೋ, ಅಥವಾ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಆಗಿದ್ದೋ..? ತನಿಖೆಯಾಗಬೇಕು. ಸಿಎಂ ಬಸವರಾಜ ಬೊಮ್ಮಾಯಿ ಅವರೇ, ಮೃತರಿಗೆ 25 ಲಕ್ಷ ಪರಿಹಾರ ಕೊಡಲು ಕ್ರಮ ಕೈಗೊಳ್ಳಿ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಅಭಾವದಿಂದ ಆದ ರೋಗಿಗಳ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ಕೈ ಆರೋಪಿಸಿದೆ.
ಇದನ್ನೂ ಓದಿ: ಬಂಧನ ಭೀತಿಯಲ್ಲಿ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.