ರುಂಡ ಸಮೇತ ಹುಲಿ ಚರ್ಮವಿದ್ದರೂ ವಿನಯ್ ಗುರೂಜಿ ಬಂಧನ ಅಸಾಧ್ಯ..! ಏಕೆ ಗೊತ್ತಾ..?
Vinay guruji sitting on tiger skin : ಹುಲಿ ಉಗುರಿನ ಪ್ರಕರಣದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸ್ಯಾಂಡಲ್‌ವುಡ್ ನಟರ ಮನೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಇದೇ ವೇಳೆ ವಿನಯ್ ಗುರೂಜಿ ತಲೆ ಸಮೇತ ಇರುವ ಹುಲಿ ಚರ್ಮದ ಮೇಲೆ ಕುಳಿತ ಫೋಟೋ ವೈರಲ್ ಆಗಿದೆ.
Vinay guruji : ಬಿಗ್ ಬಾಸ್ ಮನೆಯಿಂದ ಆರಂಭವಾದ ಹುಲಿ ಉಗುರಿನ ಪ್ರಕರಣ ಇದೀಗ ಸ್ಯಾಂಡಲ್‌ವುಡ್ ನಟರು ಮತ್ತು ಸ್ವಾಮೀಜಿಗಳಿಗೆ ಕಂಟಕವಾಗಲು ಪ್ರಾರಂಭಿಸಿದೆ. ಈಗಾಗಲೇ ನಟ ದರ್ಶನ್, ಜಗ್ಗೇಶ್, ರಾಕ್ ಲೈನ್ ಮತ್ತು ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ಅರಣ್ಯಾಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಇದರ ಬೆನ್ನಲ್ಲೆ ರುಂಡ ಸಮೇತ ಇರುವ ಹುಲಿ ಚರ್ಮದ ಮೇಲೆ ಕುಳಿತಿರುವ ವಿನಯ್ ಗುರೂಜಿ ಫೋಟೋ ವೈರಲ್ ಆಗಿದೆ.
ಹೌದು.. ಹುಲಿ ಉಗುರಿನ ಪ್ರಕರಣದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸ್ಯಾಂಡಲ್‌ವುಡ್ ನಟರ ಮನೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಇದೇ ವೇಳೆ ವಿನಯ್ ಗುರೂಜಿ ತಲೆ ಸಮೇತ ಹುಲಿ ಚರ್ಮವನ್ನು ಹೊಂದಿದ್ದು, ತನಿಖೆ ಮಾಡುವಂತೆ ನೆಟ್ಟಿಗರು ಪಟ್ಟು ಹಿಡಿದಿದ್ದಾರೆ. ಆದ್ರೆ ಯಾವುದೇ ಕಾರಣಕ್ಕೂ ವಿನಯ್ ಗುರೂಜಿ ಬಂಧಿಸಲು ಸಾಧ್ಯವಿಲ್ಲ.. ಕಾರಣ ಎನಪ್ಪಾ ಅಂದ್ರೆ..
ಇದನ್ನೂ ಓದಿ: ನಾನು ಧರಿಸಿದ್ದ ಹುಲಿ ಉಗುರು ನಕಲಿ, ನೈಜವಾದುದ್ದಲ್ಲ : ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ
ವಿನಯ್ ಗುರೂಜಿಯವರ ಬಳಿ ಇರುವ ಹುಲಿ ಚರ್ಮವನ್ನು ಶಿವಮೊಗ್ಗ ಮೂಲದ ಅಮರೇಂದ್ರ ಕಿರೀಟಿ ಎನ್ನುವರು ಕಳೆದ 2 ವರ್ಷದ ಹಿಂದೆ ಅವರಿಗೆ ಉಡುಗೂರೆಯಾಗಿ ನೀಡಿದ್ದರು. ಅಲ್ಲದೆ, ಈ ಕುರಿತು ಅರಣ್ಯಾಧಿಕಾರಿಗಳಿಂದ ಅನುಮತಿಯನ್ನೂ ಅವರು ಸಹ ಪಡೆದಿದ್ದರು. ಆದ್ರೆ 2022 ರಲ್ಲಿ ಈ ಹುಲಿ ಚರ್ಮವನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಲಾಗಿದೆ.
ಅಲ್ಲದೆ, ಅಮರೇಂದ್ರ ಕಿರೀಟಿ ಅವರ ತಂದೆ ಕಾಲದಿಂದಲೂ ಹುಲಿ ಚರ್ಮ ಅವರ ಮನೆಯಲ್ಲಿದೆ. 1975 ರಲ್ಲಿ ಅರಣ್ಯ ಇಲಾಖೆಯಿಂದ ಚರ್ಮ ಬಳಕೆಗೆ ಅಮರೇಂದ್ರ ಕಿರೀಟಿ ಅನುಮತಿ ಪಡೆದಿದ್ದರಂತೆ. ಇದರ ಎಲ್ಲ ದಾಖಲೆ ಅವರ ಬಳಿ ಇದೆ. ಹೀಗಾಗಿ ವಿನಯ್ ಗುರೂಜಿಗೆ ಯಾವುದೇ ಬಂಧನ ಭೀತಿ ಇಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.