ಕೋಲಾರ: ವೇತನ ನೀಡುವಲ್ಲಿ ತಾರತಮ್ಯ ಹಾಗೂ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ ಕಾರ್ಮಿಕರು ತಾಲೂಕಿನ ವಿಸ್ಟ್ರಾನ್ ಕಂಪನಿಯನ್ನು ಇಂದು ಬೆಳಿಗ್ಗೆ ಧ್ವಂಸ ಗಳಿಸಿದ್ದಾರೆ.


COMMERCIAL BREAK
SCROLL TO CONTINUE READING

ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 5 ತಿಂಗಳ ಹಿಂದಷ್ಟೇ ದೇಶದ ಮೊಟ್ಟಮೊದಲ ಐಫೋನ್(iPhone) ತಯಾರಿಸುವ ವಿಸ್ಟ್ರಾನ್ ಕಂಪನಿ ಆರಂಭವಾಗಿತ್ತು. ಕಂಪನಿಯಲ್ಲಿ ಸುಮಾರು 10 ಮಂದಿಗೆ ಕೆಲಸ ನೀಡುವ ವಾಗ್ದಾನ ಮಾಡಲಾಗಿತ್ತು.


KSRTC-BMTC: 2ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ, ಪ್ರಯಾಣಿಕರ ಪರದಾಟ


ಈಗಾಗಲೇ ಕಂಪನಿಯಲ್ಲಿ ಕೋಲಾರ ಜಿಲ್ಲೆಯವರು ಸೇರಿದಂತೆ ನೆರೆ ರಾಜ್ಯಗಳ ಮತ್ತು ಹೊರಜಿಲ್ಲೆಗಳ ಸುಮಾರು 6 ಸಾವಿರ ಮಂದಿ ಕೆಲಸ ಮಾಡುತ್ತಿದ್ದರು.


ಆದರೆ ಕಂಪನಿಯು ವೇತನ ನೀಡುವಲ್ಲಿ ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದ್ದಾರೆ, ನಾಲ್ಕು ತಿಂಗಳಿನಿಂದ ಸ್ಥಳೀಯರಿಗೆ ವೇತನವನ್ನೇ ನೀಡಿಲ್ಲ ಎಂಬುದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿತ್ತು.


ಸರ್ಕಾರವೇ ರೈತರಿಂದ ಹಸುಗಳನ್ನು ಖರೀದಿಸಲಿ: ಡಿ.ಕೆ. ಶಿವಕುಮಾರ್


ಹೊರರಾಜ್ಯಗಳ ಕಾರ್ಮಿಕರಿಗೆ ಹೆಚ್ಚಿನ ವೇತನ ನೀಡುತ್ತಿದ್ದ ಕಂಪನಿಯು ಸ್ಥಳೀಯ ಕಾರ್ಮಿಕರಿಗೆ ಕಡೆದ 4 ತಿಂಗಳಿನಲ್ಲಿ ಸಂಬಳ ನೀಡಿಲ್ಲ ಎಂಬುದು ಕಾರ್ಮಿಕರ ಕೋಪಕ್ಕೆ ಪ್ರಮುಖ ಕಾರಣವಾಗಿದೆ.


'ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ, ಪಕ್ಷದ ಪೂಜೆ ಮಾಡಬೇಕು'


ಶುಕ್ರವಾರ ಬೆಳಗ್ಗೆ ಕೆಲಸಕ್ಕೆ ಆಗಮಿಸಿದ ಸಾವಿರಾರು ಕಾರ್ಮಿಕರು ಪ್ರತಿಭಟನೆ ಆರಂಭಿಸಿದ್ದಾರೆ. ಕಾರ್ಮಿಕರ ಅಹವಾಲನ್ನು ಆಲಿಸಲು ಅಲ್ಲಿ ಕಂಪನಿಯ ಮುಖ್ಯಸ್ಥರು ಮುಂದಾಗಲಿಲ್ಲ. ಇದರಿಂದ ಕುಪಿತಗೊಂಡ ಕಾರ್ಮಿಕರು ಕಾರ್ಖಾನೆಯ ಪೀಠೋಪಕರಣಗಳನ್ನು ಧ್ವಂಸಗೊಳಿಸಲು ಶುರುಮಾಡಿದ್ದಾರೆ. ಕೆಲವೇ ಹೊತ್ತಿನಲ್ಲಿ ಕಾರ್ಮಿಕರ ಕಂಪನಿಯು ಸಂಪೂರ್ಣ ಧ್ವಂಸಗೊಂಡಿದೆ. ಕಂಪನಿಯ ಮುಂಭಾಗದಲ್ಲಿ ನಿಲ್ಲಿಸಿದ್ದ ಐಷಾರಾಮಿ ಕಾರುಗಳು ಕಾರ್ಮಿಕರನ್ನು ಕರೆದುಕೊಂಡು ಬರಲು ನಿಂತಿದ್ದ ಅನೇಕ ಬಸ್ಸುಗಳು ಕಾರ್ಮಿಕರ ಆಕ್ರೋಶಕ್ಕೆ ಬಲಿಯಾಗಿವೆ. ಕೈಗೆ ಸಿಕ್ಕ ವಸ್ತುಗಳಿಗೆ ಬೆಂಕಿಯನ್ನು ಹಚ್ಚಲಾಗಿದೆ. ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಬರುವುದರೊಳಗಾಗಿ ಕಾರ್ಖಾನೆ ಬಹುತೇಕ ಹಾಳಾಗಿತ್ತು. ಪೊಲೀಸರು ಘಟನೆಗೆ ಕಾರಣಕರ್ತರಾಗಿರುವ ನೂರಕ್ಕೂ ಹೆಚ್ಚು ಮಂದಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.