ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಹಾಡಹಗಲೇ ಚಿರತೆಯೊಂದು ಬೈಕ್ ಗೆ ಅಡ್ಡಬಂದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಚಾಮುಂಡಿ ಬೆಟ್ಟ(Chamundi Hills)ದಲ್ಲಿ ಅನೇಕ ಚಿರತೆಗಳು ಪ್ರವಾಸಿಗರಿಗೆ ಕಾಣಿಸಿಕೊಂಡಿರುವ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಬೆಳ್ಳಂಬೆಳಗ್ಗೆ ಬೈಕ್ ನಲ್ಲಿ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಇದ್ದಕ್ಕಿದ್ದಂತೆಯೇ ಪ್ರತ್ಯಕ್ಷವಾದ ಚಿರತೆ(Leopard Spotted)ಯು ಬೈಕ್ ಮುಂಭಾಗವೇ ಹಾದುಹೋಗಿದೆ. ಇದರಿಂದ ಬೈಕ್ ಸವಾರ ಆತಂಕಗೊಂಡಿದ್ದು, ಈ ದೃಶ್ಯವನ್ನು ಮೊಬೈನಲ್ಲಿ ಸೆರೆ ಹಿಡಿಯಲಾಗಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ.


ಇದನ್ನೂ ಓದಿ: ಇ-ಗ್ರಂಥಾಲಯಕ್ಕೆ ಉಚಿತ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳುವುದು ಹೇಗೆ ಗೊತ್ತೇ?


ಮೈಸೂರಿನ ಚಾಮುಂಡಿ ಬೆಟ್ಟ(Chamundi Hills in Mysore)ದಲ್ಲಿ ಚಿರತೆಗಳು ಆಗಾಗ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಅನೇಕ ಬಾರಿ ಬೆಟ್ಟಕ್ಕೆ ಹೋಗುವ ಪ್ರವಾಸಿಗರಿಗೆ ಕಲ್ಲು ಬಂಡೆಗಳ ಮೇಲೆ ನಿಂತಿರುವ ಚಿರತೆಗಳು ಕಾಣಿಸಿಕೊಂಡಿವೆ. ಇತ್ತೀಚೆಗಷ್ಟೇ ಸಂಜೆ ವೇಳೆ ಕತ್ತಲಿನಲ್ಲಿ ನಾಲ್ಕೈದು ಚಿರತೆಗಳು ರಸ್ತೆ ದಾಟಿ ಹೋಗುತ್ತಿರುವ ವಿಡಿಯೋವನ್ನು ಬೈಕ್ ಸವಾರರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು.


ಇನ್ಮುಂದೆ ನೀವು ಸರ್ಕಾರಿ ಬಸ್ ಗಳಲ್ಲಿ ಮೊಬೈಲ್ ನಲ್ಲಿ ಹಾಡುಗಳನ್ನು ಪ್ಲೇ ಮಾಡುವಂತಿಲ್ಲ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.