ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ, ಈ ವಿಚಾರದಲ್ಲಿ ಬಿಜೆಪಿ ಮೇಲೆ ಕಾಂಗ್ರೆಸ್ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದು, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಯಾವುದೇ ಅಕ್ರಮ ನಡೆದಿದ್ದಲ್ಲಿ ಚಿಲುಮೆ ಸಂಸ್ಥೆ ವಿರುದ್ಧ ಮತ್ತು ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದೆ.


COMMERCIAL BREAK
SCROLL TO CONTINUE READING

ಇಂದು (ಬುಧವಾರ, 23 ನವೆಂಬರ್) ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಮುಖ್ಯ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿದ ಬಿಜೆಪಿ ನಿಯೋಗ, ಮತದಾರರ ಪಟ್ಟಿ ಪರಿಷ್ಕರಣೆ ವಿವಾದದ ಕುರಿತು ಆಯೋಗಕ್ಕೆ ಮಾಹಿತಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ಸಲ್ಲಿಸಿತು.


ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಕೆ ಮಾಡಿದ್ದೇವೆ. ಚಿಲುಮೆ ಸಂಸ್ಥೆ ವಿಚಾರದಲ್ಲಿ ಕಾಂಗ್ರೆಸ್ ರಾಜ್ಯದ ಜನತೆ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿತ್ತು,  ಕಾಂಗ್ರೆಸ್ ತಪ್ಪು ಮಾಹಿತಿ ಮತ್ತು ಚಿಲುಮೆ ಸಂಸ್ಥೆಗೆ ಬಿಜೆಪಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಜವಾಬ್ದಾರಿ ನೀಡಿತ್ತು ಎಂದಿತ್ತು. 


ಇದನ್ನೂ ಓದಿ- Basavaraj Bommai : 'ಭ್ರಷ್ಟಾಚಾರವನ್ನು ಹುಟ್ಟಿಹಾಕಿದ್ದೇ ಕಾಂಗ್ರೆಸ್ ಪಾರ್ಟಿ'


ಈ ರೀತಿಯಾಗಿ ಜನರ ಕಣ್ಣು ತಪ್ಪಿಸಿ ಅಪಪ್ರಚಾರ ಮಾಡಿ ಚುನಾವಣಾ ಟೂಲ್ ಕಿಟ್ ಬಿಡುಗಡೆ ಮಾಡಿತ್ತು. ಆದರೆ 2017 ರಲ್ಲೇ ಹಿಂದಿನ ಸರ್ಕಾರ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವ ಜವಾಬ್ದಾರಿ ನೀಡಿತ್ತು. ಅದರ ಮಾಹಿತಿಯನ್ನು ನಾವು ಬಿಡುಗಡೆ ಮಾಡಿದ್ದೇವೆ, ಪಟ್ಟಿಯಿಂದ ಮತದಾರರ ಹೆಸರು ಕೈಬಿಡಲಾಗಿದೆ ಎನ್ನುವ ಆರೋಪಕ್ಕೆ ನಾವು ಉತ್ತರ ಕೊಡುವುದಿಲ್ಲ ಆಯೋಗ ಈ ಕೆಲಸವನ್ನು ಮಾಡಲಿದೆ. ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಆಯೋಗ ಮಾಡಲಿದೆಯೇ ಹೊರತು ಸರ್ಕಾರ ಮತ್ತು ಪಕ್ಷ ಅಲ್ಲ ಎಂದರು.


ಕರಡು ಪಟ್ಟಿ ಸಿದ್ದವಾಗುವ ವೇಳೆ ನಾವೇ ಹೆಸರು ಕೈಬಿಟ್ಟಿದ್ದೇವೆ ಎಂದು ಚುನಾವಣಾ ಆಯೋಗವೇ ಹೇಳಿದ್ದರೂ ಕಾಂಗ್ರೆಸ್ ನಮ್ಮ ಮೇಲೆ ಸುಳ್ಳು ಆಪಾದನೆ ಮಾಡುತ್ತಿದೆ. ತಪ್ಪಿಗೆ ಕಾರಣವಾದ ಕಾಂಗ್ರೆಸ್ ಗೂ ಶಿಕ್ಷೆಯಾಗಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ಪಟ್ಟಿ ಪರಿಷ್ಕರಣೆ ಮಾಡಿಲ್ಲ, ಮತದಾರರ ಪಟ್ಟಿಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ,  ಚಿಲುಮೆ ತಪ್ಪು ಮಾಡಿದ್ದರೆ, ಅಧಿಕಾರಿಗಳು ಶಾಮೀಲಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.


ಇದನ್ನೂ ಓದಿ- ಬಳ್ಳಾರಿ ‘ನವಶಕ್ತಿ ಸಮಾವೇಶ’ದ ಯಶಸ್ಸು ಕಾಂಗ್ರೆಸ್ ಪಕ್ಷಕ್ಕೆ ತಳಮಳ ಮೂಡಿಸಿದೆ: ಬಿಜೆಪಿ


ಚಿಲುಮೆ ಸಂಸ್ಥೆಗೆ ಬಿಜೆಪಿ ಶಾಸಕರು ಹಣ ಕೊಟ್ಟಿದ್ದಾರೆ ಎನ್ನುವ ಮಾಹಿತಿ ನನಗೆ ಇಲ್ಲ, ಹಾಗೆ ಕೊಟ್ಟಿದ್ದರೆ ಯಾಕೆ ಕೊಟ್ಟಿದ್ದಾರೆ ಎಂದು ಆಯೋಗ ತನಿಖೆ ನಡೆಸಲಿ ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.