ಬೆಳಗಾವಿ: ಬೆಳಗಾವಿ ಹಾಗೂ ಉತ್ತರ ಕರ್ನಾಟಕದಲ್ಲಿ ಅನೇಕ ಮಂತ್ರಿಗಳು, ಶಾಸಕರು, ಸಂಸದರು ಇದ್ದರೂ ಪ್ರವಾಹದಿಂದ (Flood) ನೊಂದಿರುವ ಜನರಿಗೆ ನೆರವಾಗಲು ಸಾಧ್ಯವಾಗಲಿಲ್ಲ ಎಂದರೆ, ಇದಕ್ಕೆ ಮತದಾರನೇ ಉತ್ತರ ಕೊಡಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್ (DK Shivakumar), ಪ್ರವಾಹದಿಂದ ಈ ಭಾಗದ ಜನರ ಜೀವನ ಬೀದಿಗೆ ಬಿದ್ದಿದೆ. ತಮ್ಮದೇ ಸರ್ಕಾರ, ಇಷ್ಟು ಜನ ಸಂಸದರು, ಮಂತ್ರಿಗಳು, ಶಾಸಕರು ಇದ್ದರೂ ಇಲ್ಲಿನ ಜನರಿಗೆ ಪರಿಹಾರ ಹಾಗೂ ನ್ಯಾಯ ಕೊಡಿಸಲು ಅವರು ವಿಫಲರಾಗಿದ್ದಾರೆ ಎಂದರೆ, ಇದಕ್ಕೆ ಈ ಭಾಗದ ಮತದಾರರೇ ಉತ್ತರ ಕೊಡಬೇಕು ಎಂದರು.

ಭೂ ಸುಧಾರಣೆ ಕಾಯಿದೆ ವಿರೋಧಿ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ


ಅಭ್ಯರ್ಥಿ ಕುರಿತು ಸಭೆ ನಡೆಸಿ ತೀರ್ಮಾನ:
ರೈಲ್ವೆ ಸಚಿವ ಸುರೇಶ್ ಅಂಗಡಿ ಅವರ ಸಾವಿನಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗಳಿಗೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಚರ್ಚಿಸಲು ಇವತ್ತು ಸಂಜೆ ನಮ್ಮ ಎಲ್ಲ ನಾಯಕರು, ಶಾಸಕರು, ಜಿಲ್ಲಾ ಅಧ್ಯಕ್ಷರು, ಚುನಾಚಣೆಯಲ್ಲಿ ಸ್ಪರ್ಧೆ ಮಾಡಿದವರ ಸಭೆ ಕರೆದಿದ್ದು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ನಂತರ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.


ಸುರೇಶ್ ಅಂಗಡಿ ಅವರ ಅಂತ್ಯ ಸಂಸ್ಕಾರ ಸರಿಯಾಗಿರಲಿಲ್ಲ:
ನಮ್ಮ ರೈಲ್ವೇ ಸಚಿವ ಸುರೇಶ್ ಅಂಗಡಿ (Suresh Angadi) ಅವರ ಪಾರ್ಥಿವ ಶರೀರವನ್ನು ದೆಹಲಿಯಿಂದ ಇಲ್ಲಿಗೆ ತಂದು ದರ್ಶನಕ್ಕೆ ಅವಕಾಶ ನೀಡಿ ಅವರಿಗೆ ಇಲ್ಲಿ ಅಂತ್ಯಕ್ರಿಯೆ ಮಾಡಬಹುದಿತ್ತು. ಅವರು ಯಾಕೆ ಈ ರೀತಿ ಮಾಡಲಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಅಲ್ಲಿ ಏನೇನು ರಾಜಕಾರಣ ನಡೆದಿದೆ ಅಂತಾ ಅವರ ಕುಟುಂಬದವರೇ ಹೇಳಿದ್ದಾರೆ ಎಂದರು ಡಿ.ಕೆ. ಶಿವಕುಮಾರ್.


ಬಿಜೆಪಿಯವರ ಕೈಯಲ್ಲಿ ನೊಂದ ಕುಟುಂಬ ಸದಸ್ಯರಿಗೆ, ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಿಕೊಡಲು ಸಾಧ್ಯವಾಗಲಿಲ್ಲ. ಇನ್ನು ಮುಂದೆ ಅದೇನು ನ್ಯಾಯ ಒದಗಿಸುತ್ತಾರೋ ನೋಡೋಣ. ಎಮ್ಸ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡಲಿಲ್ಲ ಎಂಬ ಆರೋಪದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.


ರೈತರ ಸಮಸ್ಯೆಗಳಿಗೆ ಈ ಬಿಜೆಪಿ ಸರ್ಕಾರ ಕಣ್ಮುಚ್ಚಿ ಕುಳಿತಿದೆ- ಡಿ.ಕೆ.ಶಿವಕುಮಾರ್ ತರಾಟೆ


ಇಲ್ಲಿ ಮಿಲಿಟರಿ ಬೆಸ್ ಇದೆ. ಕೇಂದ್ರ ಸರ್ಕಾರಾದ ಮಂತ್ರಿ ಸತ್ತ ಸಮಯದಲ್ಲಿ ಅವರ ದೇಹವನ್ನು ಸರಿಯಾಗಿ ಪ್ಯಾಕ್ ಮಾಡಿ ಇಲ್ಲಿಗೆ ತಂದು ಅವರ ತಾಯ್ನಾಡಿನ ಮಣ್ಣಲ್ಲಿ ಅಂತ್ಯ ಸಂಸ್ಕಾರ ಮಾಡಲು ರಾಜ್ಯ ಸರ್ಕಾರಕ್ಕಾಗಲಿ, ಕೇಂದ್ರ ಸರ್ಕಾರಕ್ಕಾಗಲಿ ಸಾಧ್ಯವಾಗಲಿಲ್ಲ. ದೆಹಲಿಯಲ್ಲಿ ಅವರ ಅಂತ್ಯಕ್ರಿಯೆ ಹೇಗೆ ಮಾಡಿದರು ಅಂತಾ ನಾವೆಲ್ಲ ವಿಡಿಯೋ ನೋಡಿದ್ದೇವೆ. ಸರ್ಕಾರದ ಈ ನಡೆ ಬಗ್ಗೆ ಜನ, ಅವರ ಆತ್ಮ, ಅವರ ಕುಟುಂಬ ತೀರ್ಮಾನ ಮಾಡಲಿ ಎಂದು ಅಭಿಪ್ರಾಯಪಟ್ಟರು.


ಯೋಗಿ ಸರ್ಕಾರದಿಂದ ಮನುಕುಲಕ್ಕೆ ಅವಮಾನ
ಇಡೀ ದೇಶದ ಗೌರವ, ಸ್ವಾಭಿಮಾನ, ನಮ್ಮ ಸಮುದಾಯದ, ಎಲ್ಲಾ ವರ್ಗದ ಜನರಿಗೆ ವಿಶ್ವಮಟ್ಟದಲ್ಲಿ ಕಪ್ಪುಚುಕ್ಕೆಯಾಗಿದೆ. ಉತ್ತರ ಪ್ರದೇಶದಲ್ಲಿ ನಡೆದಿರುವ ಅತ್ಯಾಚಾರ, ಸಾವು ಕೇವಲ ಒಂದು ಹೆಣ್ಣಿಗೆ ಆಗಿರುವ ಅನ್ಯಾಯದ ಪ್ರಶ್ನೆ ಅಲ್ಲ. ಇಡೀ ಮನುಕುಲಕ್ಕೆ ಆಗಿರುವ ದೊಡ್ಡ ಅವಮಾನ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.