ಬೆಂಗಳೂರು: ವಿಧಾನ ಪರಿಷತ್ತಿನ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ಇಂದು ಶಾಂತಿಯುತ ಮತದಾನ ನಡೆದಿದೆ. ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 5 ಗಂಟೆಯ ವರೆಗೂ ಮತದಾರರು ಬಂದು ತಮ್ಮ ಮತ ಚಲಾಯಿಸಿದ್ದಾರೆ. ವಾಯವ್ಯ ಮತ್ತು ದಕ್ಷಿಣ ಪದವೀಧರರ ಕ್ಷೇತ್ರ, ವಾಯುವ್ಯ ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಪಕ್ಷಗಳಿಂದ ಒಟ್ಟು 49 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈ ನಾಲ್ಕು ಕ್ಷೇತ್ರಗಳಿಂದ 45 ಪುರುಷ ಹಾಗೂ ನಾಲ್ವರು ಮಹಿಳೆಯರು ಸ್ಪರ್ಧೆ ‌ಮಾಡಿದ್ದಾರೆ. ಅಲ್ಲದೇ ಒಟ್ಟು 2,84,992 ಮತದಾರರು, 607 ಮತಗಟ್ಟೆಗಳಲ್ಲಿ ಮತದಾರರು ಮತ ಚಲಾಯಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: PHOTOS: ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್‌


ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಧು. ಜಿ ಮಾದೇಗೌಡ, ಬಿಜೆಪಿಯಿಂದ ರವಿಶಂಕರ್, ಜೆಡಿಎಸ್‍ನಿಂದ ಎಚ್.ಕೆ.ರಾಮು, ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ಸೇರಿದಂತೆ ಒಟ್ಟು 19 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ‌. ಇನ್ನು ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಸುನೀಲ್ ಅಣ್ಣಪ್ಪ, ಬಿಜೆಪಿಯಿಂದ ನಿರಾಣಿ ಹಣಮಂತ ರುದ್ರಪ್ಪ ಸೇರಿ 11 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅಲ್ಲದೇ ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಅರುಣಾ ಶಹಾಪುರ, ಕಾಂಗ್ರೆಸ್‍ನಿಂದ ಪ್ರಕಾಶ ಬಾಬಣ್ಣ ಹುಕ್ಕೇರಿ, JDSನಿಂದ ಚಂದ್ರಶೇಖರ್ ಸೇರಿದಂತೆ ಒಟ್ಟು 12 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿ ಇದ್ದಾರೆ. ಇತ್ತ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಸವರಾಜ ಹೊರಟ್ಟಿ, ಕಾಂಗ್ರೆಸ್‍ನಿಂದ ಬಸವರಾಜ ಗುರಿಕಾರ, ಜೆಡಿಎಸ್‍ನಿಂದ ಶ್ರೀಶೈಲ ಗಡದಿಮ್ಮಿ ಸೇರಿದಂತೆ ಒಟ್ಟು 7 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 


ಇನ್ನು ಪಶ್ಚಿಮ ಕ್ಷೇತ್ರದ ಶಿಕ್ಷಕರ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಎನ್‌.ಆರ್. ದೇಸಾಯಿ ರೋಟರಿ ಶಾಲೆಯ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ, ಎಲ್ಲ ಕಡೆ ಓಡಾಡಿದಿನಿ, ಮೊದಲು ಲೀಡರ್ಸ್ ಓಟ್ ಹಾಕ್ತಾಯಿದ್ದಾರೆ. ಎಲ್ಲಾ ಕಡೆ ಎರಡೆರಡು ಟೀಮ್ ಮಾಡಿದೀವಿ, ಎಲ್ಲರಿಗೂ 10 ಗಂಟೆಯೊಳಗಡೆ ಮತ ಹಾಕಲಿಕ್ಕೆ ಹೇಳಿದ್ದೀವಿ ಈ ಬಾರಿ ಪರಿಷತ್‌ ಚುನಾವಣೆಯಲ್ಲಿ ಶೇಕಡಾ 70 ರಷ್ಟು ಮತಗಳಿಂದ ಗೆಲ್ಲುತ್ತೇನೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅನಿಲ್ ಬೆನಕೆ ಮಾತನಾಡಿ, ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಮತದಾನ ನಡೀತ್ತಿದೆ. ವಿಶ್ವೇಶ್ವರಯ್ಯ ನಗರದಲ್ಲಿ ಬಹಳಷ್ಟು ಮತದಾರ ಇರೋದ್ರಿಂದ ಮೊದಲು ಇಲ್ಲಿಗೆ ಭೇಟಿ ನೀಡಿರುವೆ. ಈ ಬಾರಿ ಬಹಳಷ್ಟು ಜನ ಮತದಾನ ಮಾಡಲು ಮುಂದೆ ಬಂದಿದ್ದಾರೆ ಅಂತ ಹೇಳಿದ್ರು. ಅಲ್ಲದೇ ನಿನ್ನೆ ಕಾಂಗ್ರೆಸ್ ಅಭ್ಯರ್ಥಿ ಹಣ ಹಂಚಿಕೆ ಬಗ್ಗೆ ಮಾಧ್ಯಮಗಳಲ್ಲಿ ಬಂದಿದೆ. ವಾಮಮಾರ್ಗದಿಂದ ಮತಗಳನ್ನು ಗಳಿಸುವುದು ತಪ್ಪು ಅಂತ ತಿಳಿಸಿದ್ದಾರೆ.  


ಧಾರವಾಡದಲ್ಲಿ ಕೈ ಅಭ್ಯರ್ಥಿ ಬಸವರಾಜ ಗುರಿಕಾರ ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ಒಂದು ವಾತಾವರಣ ಕ್ರಿಯೆಟ್ ಆಗಿದೆ. ಕ್ಷೇತ್ರದ ಮತದಾರರು ಬದಲಾವಣೆಯ ನಿರ್ಣಯ ಮಾಡಿದ್ದಾರೆ. ಮೊದಲ ಸುತ್ತಿನಲ್ಲೇ ನನ್ನ ಆಯ್ಕೆಯಾಗುತ್ತೆಂಬ ಆತ್ಮವಿಶ್ವಾಸವಿದೆ. ಶಿಕ್ಷಕರ ಸಮಸ್ಯೆ ಬಗೆಹರಿಸಲು ಹೊಸ ನಾಯಕತ್ವ ಬೇಕಿದೆ ಅಂತ ಹೇಳಿದ್ರು. 


ವಾಯುವ್ಯ ಮತಕ್ಷೇತ್ರಕ್ಕೆ ಮತ ಚಲಾಯಿಸಿ ಮಾತನಾಡಿದ ಅಥಣಿ ಶಾಸಕ ಮಹೇಶ್ ಕುಮಠಳ್ಳಿ, ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ. ಬಿಜೆಪಿ ಯಾವುದೇ ಹಣವನ್ನು ಹಂಚುತ್ತಿಲ್ಲ. ಕಾಂಗ್ರೆಸ್ ಮುಖಂಡ ಸುನಿಲ್ ಸಂಕ ಆರೋಪ ಮಾಡುವುದು ಅದರಲ್ಲಿ ಹುರುಳಿಲ್ಲ ಅಂತ ಹೇಳಿದ್ರು. ಇನ್ನು ಇದೇ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌, ಶಿಕ್ಷಕರು ದೊಡ್ಡಮಟ್ಟದ ಮತ ಚಲಾವಣೆ ಮಾಡಿದ್ದಾರೆ. ಈ ಬಾರಿ ನೂರಕ್ಕೆ ನೂರರಷ್ಟು ಚುನಾವಣೆಯಲ್ಲಿ ನನ್ನ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಅಂತ ಹೇಳಿದ್ರು.


ಇದನ್ನು ಓದಿ: ಮಾರುಕಟ್ಟೆಗೆ ಬಂದಿದೆ ಕೇವಲ 11 ಸಾವಿರ ರೂ.ಗೆ 5G ಸ್ಮಾರ್ಟ್‌ಫೋನ್ ..!


ಒಟ್ಟಾರೆಯಾಗಿ ವಿಧಾನ ಪರಿಷತ್ತಿನ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ಮತದಾನ ನಡೆದಿದೆ. ಜೂನ್ 15 ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, 49 ಅಭ್ಯರ್ಥಿಗಳ ಭವಿಷ್ಯ ಅಂದೇ ನಿರ್ಧಾರವಾಗಲಿದೆ. ಮೇಲ್ಮನೆ ಸ್ಥಾನ ಯಾರಿಗೆ ಒಲಿಯುತ್ತೆ ಅಂತ ಕಾದು ನೋಡಬೇಕಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ