HDMC : ಮೂರು ವರ್ಷಗಳ ಬಳಿಕ ವಾರ್ಡ್ ಸಮಿತಿ ರಚನೆಗೆ ಮಹಾನಗರ ಪಾಲಿಕೆ ಮುಂದಾಗಿದೆ. ಹಾಗಿದ್ದರೇ ಏನಿದೆ ವಾರ್ಡ್ ಸಮಿತಿಯ ಇನ್ ಸೈಡ್ ಸ್ಟೋರಿ ಇಲ್ಲಿದೆ ನೋಡಿ 


COMMERCIAL BREAK
SCROLL TO CONTINUE READING

ಅವಳಿ ನಗರದ ಅಭಿವೃದ್ಧಿಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಬಯಸುವ ವಾರ್ಡ್ ಸಮಿತಿ ರಚನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಾರ್ಡ್ ಸಮಿತಿ ರಚನೆ ಮಾಡಬೇಕಿತ್ತು. ಆದರೆ ಮೂರು ವರ್ಷ ಕಳೆದರೂ ವಾರ್ಡ್ ಸಮಿತಿ ರಚನೆ ಗೋಜಿಗೆ ಹೋಗಲಿಲ್ಲ.  ಈಗ ವಾರ್ಡ್ ಸಮಿತಿಯ ರಚನೆಗೆ ಮಾನದಂಡ ರೂಪಿಸಿರುವ ಸದನ ಸಮಿತಿಯ ವರದಿಯನ್ನು ಕೈಗೆತ್ತಿಕೊಂಡಿದೆ. ಈ ನಿಟ್ಟಿನಲ್ಲಿ ಸಾಮಾನ್ಯ ಸಭೆಯಲ್ಲಿ ಚರ್ಚಿಸುವ ಮೂಲಕ ವಾರ್ಡ್ ಸಮಿತಿ ಮುನ್ನೆಲೆಗೆ ಬರುವ ಲಕ್ಷಣ ಗೋಚರಿಸುತ್ತಿವೆ.


ಇದನ್ನೂ ಓದಿ-Good News: ಜುಲೈ ಅಂತ್ಯದ ವೇಳೆಗೆ ರಾಜ್ಯಕ್ಕೆ ಮತ್ತೊಂದು ‘ವಂದೇ ಭಾರತ್’ ರೈಲು!


ಕರ್ನಾಟಕ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ತೆರವುಗೊಂಡಿದ್ದು, ಇದರೊಂದಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ. ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತದ ಮೇಲಿದ್ದ ನಿಯಂತ್ರಣ ಕೊನೆಗೊಳ್ಳಲಿದೆ. ಚುನಾವಣೆ ಘೋಷಣೆಯಾಗಿದ್ದರಿಂದ ಏಪ್ರಿಲ್ ತಿಂಗಳ ಸಾಮಾನ್ಯ ಸಭೆ ನಡೆದಿರಲಿಲ್ಲ. ಇದೀಗ ಹಾಲಿ ಮೇಯರ್ ಆಗಿರುವ ಈರೇಶ ಅಂಚಟಗೇರಿ ಆದೇಶಿಸಿದ್ದು, ಕೂಡಲೇ ಜಾರಿಗೆ ತರುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ನಾಗರಿಕರು ಆಗ್ರಹಿಸಿದ್ದಾರೆ.


ಒಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆಯಬೇಕಿರುವ ಮಹಾನಗರ ಪಾಲಿಕೆಯ ಆಡಳಿತಕ್ಕೆ ಇನ್ನಾದರೂ ವಾರ್ಡ್ ಸಮಿತಿ ರಚನೆಗೆ ಪಾಲಿಕೆ ಮುಂದಾಗಬೇಕಿದೆ.


ಇದನ್ನೂ ಓದಿ-ರಾಜಕೀಯ ಜಂಜಾಟ ಬಿಟ್ಟು ಕ್ರಿಕೆಟ್ ಆಡಿದ ಮಾಜಿ ಶಾಸಕ ರೇಣುಕಾಚಾರ್ಯ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ