ಬೆಂಗಳೂರು: ಜುಲೈ ಅಂತ್ಯದೊಳಗೆ ರಾಜ್ಯಕ್ಕೆ 2ನೇ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲು ಸಿಗಲಿದೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಘೋಷಿಸಿದ್ದಾರೆ. ಗುರುವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಈ ರೈಲು ಬೆಂಗಳೂರು ಮತ್ತು ಧಾರವಾಡ ನಡುವೆ ಸಂಚರಿಸಲಿದೆ ಎಂದು ಹೇಳಿದ್ದಾರೆ.
ಬುಧವಾರ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿರುವ ಪ್ರಲ್ಹಾದ್ ಜೋಶಿ ಅವರು ಧಾರವಾಡವನ್ನು ಸಂಪರ್ಕಿಸುವ ‘ವಂದೇ ಭಾರತ್’ ರೈಲಿನ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ‘ವಂದೇ ಭಾರತ್’ ರೈಲು ಓಡಿಸಲು ಸಿದ್ಧತೆಗಳು ಪೂರ್ಣಗೊಂಡಿವೆ. ಜುಲೈ ವೇಳೆಗೆ ರೈಲು ಸಂಚಾರ ಆರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವರು ಭರವಸೆ ನೀಡಿದ್ದಾರೆ’ ಅಂತಾ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಮತ್ತು ಧಾರವಾಡ ನಡುವಿನ ‘ವಂದೇ ಭಾರತ್’ ರೈಲನ್ನು ಮಾರ್ಚ್ 2023ರಲ್ಲಿ ಉದ್ಘಾಟಿಸಲು ನಿರ್ಧರಿಸಲಾಗಿತ್ತು. ಹಳಿಗಳ ವಿದ್ಯುದ್ದೀಕರಣ ಮತ್ತು ಟ್ರಾಕ್ಷನ್ ಸಬ್‌ಸ್ಟೇಷನ್‌ನಲ್ಲಿನ ವಿಳಂಬ ಮತ್ತು ಕರ್ನಾಟಕದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಸೇರಿ ಹಲವು ಕಾರಣಗಳಿಂದ ಇದು ವಿಳಂಬವಾಗಿತ್ತು.
ಬೆಂಗಳೂರು-ಧಾರವಾಡ ಮಾರ್ಗದ ರೈಲು ಕರ್ನಾಟಕದಲ್ಲಿ 2ನೇ ‘ವಂದೇ ಭಾರತ್’ ರೈಲು ಆಗಲಿದೆ. ಈಗಾಗಲೇ ಮೊದಲ ‘ವಂದೇ ಭಾರತ್’ ರೈಲು ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಾರ್ಚ್‌ನಲ್ಲಿ ಪ್ರಧಾನಿ ಮೋದಿಯವರು ಮೊದಲ ‘ವಂದೇ ಭಾರತ್’ ರೈಲನ್ನು ಉದ್ಘಾಟಿಸಿದ್ದರು. ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದ ರೈಲು ದಕ್ಷಿಣ ಭಾರತದ ಮೊದಲ ‘ವಂದೇ ಭಾರತ್ ಎಕ್ಸ್ ಪ್ರೆಸ್’ ಆಗಿದೆ.
ಇದನ್ನೂ ಓದಿ: Team India New Jersey: ಟೀಂ ಇಂಡಿಯಾದ ಹೊಸ ಜೆರ್ಸಿ ಅನಾವರಣಗೊಳಿಸಿದ ಅಡಿಡಾಸ್!
ಬೆಂಗಳೂರು-ಧಾರವಾಡ ನಡುವಿನ ಹೊಸ ರೈಲು ಉತ್ತರ ಕರ್ನಾಟಕವನ್ನು ರಾಜ್ಯ ರಾಜಧಾನಿ ಬೆಂಗಳೂರಿನಿಂದ ಸಂಪರ್ಕಿಸುವ ಬಗ್ಗೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ‘ವಂದೇ ಭಾರತ್’ ರೈಲಿನ ಪರಿಚಯದ ನಂತರ ಅವಳಿ ನಗರಗಳಾದ ಹುಬ್ಬಳ್ಳಿ -ಧಾರವಾಡದ ಜನರು ಹೆಚ್ಚು ಬೇಡಿಕೆಯಿರುವ ಅತ್ಯುತ್ತಮ ರೈಲು ಸೇವೆಯ ಅನುಭವ ಪಡೆಯಬಹುದು ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.