ಶ್ರೀಗಂಧದ ಮರ ಮಂಗಮಾಯ!: CCTVಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ
ಘಟನೆ ಕುರಿತು ಹುಬ್ಬಳ್ಳಿ ಕಸಬಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಈ ಸಿಸಿಟಿವಿ ದೃಶ‍್ಯಾವಳಿ ಪರಿಶೀಲಿಸುತ್ತಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹುಬ್ಬಳ್ಳಿ: ಹುಬ್ಬಳ್ಳಿಯ KHB ಕಾಲೋನಿಯಲ್ಲಿ ಶ್ರೀಗಂಧದ ಮರ(Sandalwood Trees)ವನ್ನು ಕಡಿದು ಕದ್ದೊಯ್ಯಲಾಗಿದೆ. ರಾತ್ರಿ ವೇಳೆ ಯಾರೂ ಇಲ್ಲದ ಸಮಯವನ್ನು ಗಮನಿಸಿದ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಬೆಳೆದು ನಿಂತಿದ್ದ ಗಂಧದ ಮರವನ್ನು ಮಂಗಮಾಯ ಮಾಡಿದ್ದಾರೆ.
ಶಿವಶಂಕರ್ ಐಹೊಳೆ ಎಂಬುವರ ಮನೆ ಆವರಣದಲ್ಲಿ ಬೆಳೆದು ನಿಂತಿದ್ದ ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧದ ಮರ(Sandalwood Theft)ಕ್ಕೆ ಖತರ್ನಾಕ್ ಖದೀಮರು ಕೊಡಲಿಪೆಟ್ಟು ಹಾಕಿದ್ದಾರೆ.
ಇದನ್ನೂ ಓದಿ: ‘ಆಪರೇಷನ್ ಗಂಗಾ’ ಹೆಸರಿನಲ್ಲಿ ಏರ್ ಲಿಫ್ಟ್ ಮಾಡಿದ ವಿದ್ಯಾರ್ಥಿಗಳ ಭವಿಷ್ಯವೇನು..?: ಎಚ್ಡಿಕೆ
ಕಡಿದ ಶ್ರೀಗಂಧದ ಮರವನ್ನು ಕಡಿದು ಕಳ್ಳರು ಸಾಗಿಸುತ್ತಿರುವ ದೃಶ‍್ಯವು ಸಮೀಪದ ಸಿಸಿಟಿವಿ ಕ್ಯಾಮೆರಾ(CCTV Footage)ದಲ್ಲಿ ಸೆರೆಯಾಗಿದೆ. ಬುಡಸಮೇತ ಗಂಧದ ಮರವನ್ನು ಕಡಿದಿರುವ ಕಳ್ಳರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಘಟನೆ ಕುರಿತು ಹುಬ್ಬಳ್ಳಿ ಕಸಬಾ ಠಾಣೆ(Hubli Kasaba Police Station)ಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಈ ಸಿಸಿಟಿವಿ ದೃಶ‍್ಯಾವಳಿ ಪರಿಶೀಲಿಸುತ್ತಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: HD Kumaraswamy : ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಸಾಧ್ಯವೇ : ಕುಮಾರಸ್ವಾಮಿ
ಶ್ರೀಗಂಧದ ಮರ ಕಳ್ಳತನ(Sandalwood Trees Stolen)ಮಾಡಿರುವ ಕಳ್ಳರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ಕೊಡಿಸಬೇಕೆಂದು ಮನೆ ಮಾಲೀಕ ಶಿವಶಂಕರ್ ಐಹೊಳೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಅನೇಕ ವರ್ಷಗಳಿಂದ ಮನೆ ಆವರಣದಲ್ಲಿ ಬೆಳೆಸಿದ್ದ ಗಂಧದ ಮರ ಕಳುವು ಆಗಿದ್ದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.