ಬೆಂಗಳೂರು: ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುತ್ತೇನೆ ಎಂದು ಬಂಡಾಯ ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು ಭಾನುವಾರ 14 ಬಂಡಾಯ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್ ನಿಂದ 11 ಮತ್ತು ಜೆಡಿಎಸ್ ನಿಂದ ಮೂವರು ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ 2023 ರಲ್ಲಿ ಸದನದ ಪ್ರಸ್ತುತ ಅವಧಿ ಮುಗಿಯುವವರೆಗೆ ಅನರ್ಹಗೊಳಿಸಲಾಗಿದೆ. ಕಾಂಗ್ರೆಸ್ ಮೂವರು ಬಂಡಾಯ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಗುರುವಾರ ಅನರ್ಹಗೊಳಿಸಿದ್ದರು.


ಈಗ ಪಿಟಿಐಗೆ ನೀಡಿರುವ ಹೇಳಿಕೆಯಲ್ಲಿ ಎಚ್ ವಿಶ್ವನಾಥ್ ' ಅನರ್ಹತೆ ಕಾನೂನಿಗೆ ವಿರುದ್ಧವಾಗಿದೆ.ಶಾಸಕರ ಮೇಲೆ ಜಾರಿಗೊಳಿಸಿದ ವಿಪ್ ಆಧಾರದ ಮೇಲೆ ನೀವು ಶಾಸಕರನ್ನು ಸದನಕ್ಕೆ ಬರಲು ಒತ್ತಾಯಿಸಲು ಸಾಧ್ಯವಿಲ್ಲ' ಎಂದು ತಿಳಿಸಿದ್ದಾರೆ. 'ಸ್ಪೀಕರ್ ಅವರು ಸದನಕ್ಕೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಶಾಸಕಾಂಗದ 20 ಸದಸ್ಯರನ್ನು ಅನರ್ಹಗೊಳಿಸಿದ್ದಾರೆ. ಆದ್ದರಿಂದ ಸ್ಪೀಕರ್ ಘೋಷಿಸಿದ ಈ ನಿರ್ಧಾರದ ವಿರುದ್ಧ ನಾವು ಸೋಮವಾರ ಸುಪ್ರೀಂಕೋರ್ಟ್ ಅನ್ನು ಸಂಪರ್ಕಿಸುತ್ತಿದ್ದೇವೆ" ಎಂದು ಹೇಳಿದರು.


ಸೋಮವಾರದಂದು ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ವಿಧಾನಸಭೆಯಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸುವ ಒಂದು ದಿನ ಮುಂಚಿತವಾಗಿ ಈ ಅನರ್ಹತೆಗಳು ಬಂದಿವೆ. ಬೆಂಗಳೂರಿನಲ್ಲಿ ಅನರ್ಹಗೊಂಡ ಬಂಡಾಯ ಶಾಸಕರಾದ ಮಸ್ಕಿ ಪ್ರತಾಪ್ ಗೌಡ ಪಾಟೀಲ್ ಅವರು ಮತದಾರರನ್ನು ಉದ್ದೇಶಿಸಿ ವಿಡಿಯೋ ಸಂದೇಶದಲ್ಲಿ ಭಯಪಡದಂತೆ ಕೇಳಿಕೊಂಡರು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಿಜಯಶಾಲಿಯಾಗುವ ವಿಶ್ವಾಸವಿದೆ ಎಂದು ಹೇಳಿದರು.


"ಆತ್ಮೀಯ ಮತದಾರರು ಮತ್ತು ನನ್ನ ಹಿತೈಷಿಗಳೇ, ವಿಧಾನಸಭೆಯಿಂದ ನನ್ನ ಅನರ್ಹತೆಗೆ ಸ್ಪೀಕರ್ ಆದೇಶಿಸಿದ್ದಾರೆ ... ಭಯಪಡುವ ಅಗತ್ಯವಿಲ್ಲ. ನಾವು ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತಿದ್ದೇವೆ.ನ್ಯಾಯಾಲಯದಲ್ಲಿ ವಿಜಯಶಾಲಿಯಾಗುತ್ತೇವೆ ಎಂದು ನನಗೆ ವಿಶ್ವಾಸವಿದೆ" ಎಂದು ಪಾಟೀಲ್ ಹೇಳಿದರು.